Hijab: ಹಿಜಾಬ್ ತೀರ್ಪು ವಿರೋಧಿಸಿ ಕರ್ನಾಟಕ ಬಂದ್​ ಕರೆಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 17, 2022 | 12:52 PM

Karnataka Bundh: ಕರ್ನಾಟಕ ಹೈಕೋರ್ಟ್ ಆದೇಶ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ

Hijab: ಹಿಜಾಬ್ ತೀರ್ಪು ವಿರೋಧಿಸಿ ಕರ್ನಾಟಕ ಬಂದ್​ ಕರೆಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ
ಸಾಂದರ್ಭಿಕ ಚಿತ್ರ
Follow us on

ಮಂಗಳೂರು: ಹಿಜಾಬ್ ಧಾರಣೆಗೆ ಅವಕಾಶ ಇಲ್ಲ ಎನ್ನುವ ಕರ್ನಾಟಕ ಹೈಕೋರ್ಟ್ (High Court Judgement) ಆದೇಶ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​ಗೆ (Karnataka Bundh) ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದರು ಪ್ರದೇಶ, ಸೆಂಟ್ರಲ್ ಮಾರ್ಕೆಟ್, ಸ್ಟೇಟ್​ ಬ್ಯಾಂಕ್, ಎಪಿಎಂಸಿ ಮಾರ್ಕೆಟ್ ಸೇರಿದಂತೆ ವ್ಯಾಪಾರ ವಹಿವಾಟು ಹೆಚ್ಚಾಗಿ ನಡೆಯುವ ಪ್ರದೇಶಗಳಲ್ಲಿ ಜನಸಂಚಾರ ವಿರಳವಾಗಿತ್ತು. ಮೀನು, ತರಕಾರಿ ಮತ್ತು ಇತರ ವಸ್ತುಗಳ ಮಾರಾಟ ಇಲ್ಲಿ ಹೆಚ್ಚಾಗಿರುತ್ತದೆ.

ಮಂಗಳೂರಿನಲ್ಲಿ ಮೀನು ಮತ್ತು ತರಕಾರಿ ವ್ಯಾಪಾರ ಮಾಡುವ ಬಹುತೇಕರು ಮುಸ್ಲಿಮರೇ ಆಗಿದ್ದಾರೆ. ಬಂದ್​ಗೆ ಬೆಂಬಲ ವ್ಯಕ್ತಪಡಿಸಿ ಇವರೆಲ್ಲರೂ ಬಾಗಿಲು ಹಾಕಿದ್ದರಿಂದ ನೀರಸ ವಾತಾವರಣ ನಿರ್ಮಾಣವಾಗಿತ್ತು. ದೈನಂದಿನ ಅಗತ್ಯ ವಸ್ತುಗಳಾದ ಮೀನು ಮತ್ತು ತರಕಾರಿ ಖರೀದಿಸಲು ಸಾಧ್ಯವಾಗದೆ ಜನರು ಪರದಾಡಿದರು.

ಮಂಗಳೂರು ಮತ್ತು ದಕ್ಷಿಣ ಕನ್ನಡದ ವಿವಿಧೆಡೆ ಚಿಕನ್, ಮಟನ್ ಮತ್ತು ಬೀಫ್ ಸ್ಟಾಲ್​ಗಳೂ ಬಾಗಿಲು ಹಾಕಿದ್ದವು. ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಉಲ್ಲಾಳ ಪ್ರದೇಶದಲ್ಲಿ ಬಂದ್​ಗೆ ಬೆಂಬಲ ವ್ಯಕ್ತವಾಗಿದೆ. ಮುಂಜಾನೆಯಿಂದೇ ಉಲ್ಲಾಳದಲ್ಲಿ ಜನಸಂಚಾರ ವಿರಳವಾಗಿತ್ತು. ಕೇರಳದ ಕಾಸರಗೋಡಿನಿಂದ ಬರುವ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಹಿವಾಟು ನಡೆಸುವ ಕಲ್ಲಪು ಸಗಟು ಮಾರುಕಟ್ಟೆಯಲ್ಲಿ ಯಾವುದೇ ಚಟುವಟಿಕೆ ನಡೆಯಲಿಲ್ಲ.

ಬೆಂಗಳೂರು: ಶಿವಾಜಿನಗರದಲ್ಲಿ ತೆರೆಯಲಿಲ್ಲ ಅಂಗಡಿ-ಮುಂಗಟ್ಟು

ಶಿವಾಜಿನಗರದಲ್ಲಿ ಕೆಲ ಅಂಗಡಿ ಮುಂಗಟ್ಟು ತೆರೆದಿಲ್ಲ. ತರಕಾರಿ ಹೂ ಹಣ್ಣು , ಮಟನ್ ಅಂಗಡಿ ಬಂದ್ ಆಗಿವೆ. ಬೆಳಗಿನ ಜಾವ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಮಾರ್ಕೆಟ್ ಇಂದು ಬಂದ್ ಆಗಿವೆ. ಕೆಲ ಟೀ ಅಂಗಡಿ ಹೊರತು ಪಡಿಸಿ ಬಹತೇಕ ಅಂಗಡಿ ಬಂದ್. ಶಾಂತಿಯುತವಾಗಿ ಬಂದ್ ಆಚರಣೆ ಮಾಡುವಂತೆ ಮುಸ್ಲಿಂ ಸಂಘಟನೆ ಕರೆ ನೀಡಲಾಗಿದೆ. ಕೋಲಾರದಲ್ಲಿ ಮುಸ್ಲಿಂ‌ ಸಂಘಟನೆಗಳಿಂದ ಬಂದ್ ಆಚರಣೆ ಮಾಡಲಾಗುತ್ತಿದ್ದು, ಅಂಗಡಿ ಮುಂಗಟ್ಟುಗಳನ್ನು‌ ಮುಚ್ಚಿ ಬಂದ್​ಗೆ ಬೆಂಬಲ ಸೂಚಸಲಾಗಿದೆ. ನಗರದ ಕ್ಲಾಕ್ ಟವರ್, ರಹಮತ್ ನಗರ್, ಶಹಿನ್ ಶಾ ನಗರ ಸೇರಿದಂತೆ ಮುಸ್ಲಿಂ ಬಡಾವಣೆಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ. ಹಾಲು ಔಷದ ಹೊರತು ಪಡಿಸಿ ಯಾವುದೇ ರೀತಿ ವಹಿವಾಟು ಇಲ್ಲ. ಬಂದ್ ಹಿನ್ನೆಲೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ನಿಷೇದಾಜ್ಞೆ ಜಾರಿಯಲ್ಲಿರುವ ಹಿನ್ನೆಲೆ ಯಾವುದೇ ಮೆರವಣಿಗೆ, ಪ್ರತಿಭಟನೆಗೆ ಅವಕಾಶ ನೀಡಿಲ್ಲ.

ಇದನ್ನೂ ಓದಿ: ಹಿಜಾಬ್​ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳಿಂದ ಕರ್ನಾಟಕ ಬಂದ್: ಎಲ್ಲಿ ಹೇಗಿತ್ತು, ಇಲ್ಲಿದೆ ವಿವರ

ಇದನ್ನೂ ಓದಿ: ಭಟ್ಕಳ: ಹಿಜಾಬ್ ತೀರ್ಪು ಹಿನ್ನೆಲೆ ಬಲವಂತವಾಗಿ ಅಂಗಡಿ ಬಂದ್; ಪಿಎಫ್​ಐ ಕಾರ್ಯಕರ್ತರು, ವಕೀಲನ ವಿರುದ್ಧ ಪ್ರಕರಣ ದಾಖಲು