ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ: ಜ್ಯುವೆಲರಿ ಶಾಪ್​ನಲ್ಲಿ ಅನ್ಯಕೋಮಿನ ಜೋಡಿಗೆ ಥಳಿತ, ಮೂರು ಪ್ರಕರಣ ದಾಖಲು

| Updated By: ವಿವೇಕ ಬಿರಾದಾರ

Updated on: Dec 06, 2022 | 10:59 PM

ಕಡಲ ನಗರಿ ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ ನಡೆದಿದ್ದು, ಕದ್ರಿ ಠಾಣೆ ಪೊಲೀಸರು ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ: ಜ್ಯುವೆಲರಿ ಶಾಪ್​ನಲ್ಲಿ ಅನ್ಯಕೋಮಿನ ಜೋಡಿಗೆ ಥಳಿತ, ಮೂರು ಪ್ರಕರಣ ದಾಖಲು
ಮಂಗಳೂರು ಸಲ್ತಾನ್​ ಚಿನ್ನಾಭರಣ ಅಂಗಡಿ
Follow us on

ದಕ್ಷಿಣ ಕನ್ನಡ: ಕಡಲ ನಗರಿ ಮಂಗಳೂರಿನಲ್ಲಿ (Mangalore) ಮತ್ತೆ ನೈತಿಕ ಪೊಲೀಸ್​ಗಿರಿ ನಡೆದಿದ್ದು, ಕದ್ರಿ ಠಾಣೆ ಪೊಲೀಸರು ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಯುವತಿಯ ತಾಯಿ, ಹಲ್ಲೆಗೊಳಗಾದ ಯುವಕ ಲುಕ್ಮಾನ್ ಹಾಗೂ ಸುಲ್ತಾನ್ ಜ್ಯುವೆಲರಿ ಮಾಲೀಕರ ದೂರು ಆಧರಿಸಿ ಎಫ್​​ಐಆರ್​ (FIR) ದಾಖಲಾಗಿದೆ. ಮಗಳ ಮೇಲೆ ದೌರ್ಜನ್ಯ ಮತ್ತು ಬೆದರಿಕೆ ಹಾಕಿದ್ದಾರೆಂದು ಯುವತಿ ತಾಯಿ ದೂರು ನೀಡಿದ್ದರೇ, ಹಲ್ಲೆ ‌ನಡೆಸಿ ಗಲಭೆ ಸೃಷ್ಟಿಸಿದ್ದಾರೆಂದು ಯುವಕ ಲುಕ್ಮಾನ್ ದೂರು ದಾಖಲಿಸಿದ್ದಾರೆ. ಇನ್ನೂ ಜ್ಯುವೆಲರಿ ಶಾಪ್‌ಗೆ (jewellery shop) ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿ ಜ್ಯುವೆಲರಿ ಶಾಪ್‌ ಮಾಲೀಕರು ದೂರು ನೀಡಿದ್ದಾರೆ. ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿ ಕದ್ರಿ ಪೊಲೀಸರಿಂದ ತನಿಖೆ ಕೈಗೊಂಡಿದ್ದಾರೆ.

ಏನಿದು ಪ್ರಕರಣ

ನಗರದ ಕಂಕನಾಡಿ ಬಳಿಯ ಸುಲ್ತಾನ್ ಚಿನ್ನಾಭರಣ ಅಂಗಡಿಯಲ್ಲಿ ಅನ್ಯಕೋಮಿನ ಶೃಂಗೇರಿ ಮೂಲದ ಯುವತಿ ಮತ್ತು ಬಂಟ್ವಾಳದ ಮುಸ್ಲಿಂ ಯುವಕ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರೂ ಜೊತೆಯಾಗಿ ಬೈಕ್​ನಲ್ಲಿ ಸುತ್ತಾಡುತ್ತಿದ್ದರು ಎನ್ನಲಾಗುತ್ತಿದೆ. ಈ ವಿಷಯವನ್ನು ತಿಳಿದ ಯುವತಿಯ ತಾಯಿ ಇಂದು (ಡಿ.6) ರಂದು ಆಭರಣದ ಅಂಗಡಿಗೆ ಬಂದು ಯುವತಿಯೊಂದಿಗೆ ಜಗಳ ತೆಗೆದು, ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಅಂಗಡಿಗೆ ಬಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಕದ್ರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ