
ಮಂಗಳೂರು, ಡಿಸೆಂಬರ್ 10: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗ ಆಯೋಜಿಸಲಾಗಿದ್ದ ದಫ್ ಪ್ರದರ್ಶನಕ್ಕೆ (Duff performance)
ಭಾರೀ ವಿರೋಧ ವ್ಯಕ್ತವಾಗಿದೆ. ವಿರೋಧ ವ್ಯಕ್ತವಾದ ಬೆನ್ನಲ್ಲೇ, ಹಿಂದೂಪರ ಸಂಘಟನೆಗಳ ಒತ್ತಡಕ್ಕೆ ಮಣಿದ ಇದೀಗ ಆಯೋಜಕರು ದಫ್ ಪ್ರದರ್ಶನವನ್ನು ಕೈಬಿಟ್ಟಿದ್ದಾರೆ.
ಕೆವಿಜಿ ಸುಳ್ಯ ಹಬ್ಬ ಸಮಾಜ ಸಂಘದ ವತಿಯಿಂದ ಜಿಲ್ಲೆಯ ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗ ಡಿಸೆಂಬರ್ 25 ಮತ್ತು 26ರಂದು ಕೆವಿಜಿ ಸುಳ್ಯ ಹಬ್ಬ-2025 ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ಸಾಂಸ್ಕ್ರತಿಕ ಕಾರ್ಯಕ್ರಮ ದಫ್ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿತ್ತು.
ಇದನ್ನೂ ಓದಿ: ಕಲಾಯಿ ಅಶ್ರಫ್ ಹತ್ಯೆಗೆ ಪ್ರತೀಕಾರದ ಪೋಸ್ಟ್: 16 ಇನ್ಸ್ಟಾಗ್ರಾಮ್ ಖಾತೆ ವಿರುದ್ಧ FIR
ಈ ಮಧ್ಯೆ ಜಿಲ್ಲೆಯ ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗ ನಡೆಯಲಿದ್ದ ದಫ್ ಪ್ರದರ್ಶನಕ್ಕೆ ವಿಹೆಚ್ಪಿ, ಬಜರಂಗದಳ ವಿರೋಧ ವ್ಯಕ್ತಪಡಿಸಿದ್ದವು. ಒಂದು ವೇಳೆ ಚೆನ್ನಕೇಶವ ದೇವಸ್ಥಾನದ ಮುಂಭಾಗ ದಫ್ ಪ್ರದರ್ಶನ ಮಾಡಿದರೆ, ಮಸೀದಿ ಮುಂದೆ ಹನುಮಾನ್ ಚಾಲೀಸ್ ಪಠಣ ಮಾಡುವುದಾಗಿ ಎಚ್ಚರಿಕೆ ನೀಡಿಲಾಗಿತ್ತು.
ದಫ್ ಪ್ರದರ್ಶನಕ್ಕೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಕೊನೆಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಮಣಿದ ಆಯೋಜಕರು ಚೆನ್ನಕೇಶವ ದೇವಸ್ಥಾನ ಮುಂದೆ ದಫ್ ಪ್ರದರ್ಶನವನ್ನು ಕೈಬಿಟ್ಟಿದ್ದಾರೆ.
ಇನ್ನು ಈ ಕುರಿತಾಗಿ ವಿಹೆಚ್ಪಿ ಸುಳ್ಯ ಪ್ರಖಂಡ ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ ಪ್ರತಿಕ್ರಿಯಿಸಿದ್ದು, ಜಿಲ್ಲೆಯ ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನ ಹಿಂದೂಗಳ ಒಂದು ಧಾರ್ಮಿಕ ಕೇಂದ್ರ. ಅಲ್ಲಿ
ಅನ್ಯಧರ್ಮಿಯರ ದಫ್ ಪ್ರದರ್ಶನ ಮಾಡುವುದು ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟುಮಾಡುವಂತಹ ಕಾರ್ಯಕ್ರಮ. ಹಾಗಾಗಿ ವಿಹೆಚ್ಪಿ, ಬಜರಂಗದಳ ಸೇರಿದಂತೆ ಎಲ್ಲಾ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತಪಡಿಸಲಾಗಿದೆ ಎಂದರು.
ಇದನ್ನೂ ಓದಿ: ನೀರಿನಲ್ಲಿ ಭಕ್ತರೊಂದಿಗೆ ಆಟವಾಡುತ್ತಿರುವಾಗ ಅಡ್ಡಬಂದ ಸಿಬ್ಬಂದಿಯನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ
ಈ ಕುರಿತಾಗಿ ನಾವು ಸುಳ್ಯ ತಹಶೀಲ್ದಾರ್, ಚೆನ್ನಕೇಶವ ದೇವಸ್ಥಾನದ ಆಡಳಿತ ಮಂಡಳಿಗೆ ಮತ್ತು ಸುಳ್ಯ ಪೊಲೀಸ್ ಠಾಣೆಗೆ ಮನವಿಯನ್ನು ಸಲ್ಲಿಸಲಾಗಿದೆ. ಸದ್ಯ ದಫ್ ಪ್ರದರ್ಶನ ಕಾರ್ಯಕ್ರಮವನ್ನು ರದ್ದುಗೊಳ್ಳಿಸಲಾಗಿದೆ ಎಂಬ ಮಾಹಿತಿ ಇದೆ ಎಂದು ನವೀನ್ ಎಲಿಮಲೆ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.