ಮಂಗಳೂರಿನಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ ವಿಚಾರ; ​ಕಮಿಷನರ್​​ ಶಶಿಕುಮಾರ್​​ರಿಂದ ಖಡಕ್​ ಎಚ್ಚರಿಕೆ

TV9 Web
| Updated By: ವಿವೇಕ ಬಿರಾದಾರ

Updated on:Aug 09, 2022 | 2:41 PM

ಮಂಗಳೂರಿನಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ ವಿಚಾರವಾಗಿ  ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್​  ಸುದ್ದಿಗೋಷ್ಠಿ ನಡೆಸಿದ್ದಾರೆ.

ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ ವಿಚಾರವಾಗಿ  ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಇಂಟರ್​ನೆಟ್ ಕರೆ ಮತ್ತು ಬೈಕ್​ನಲ್ಲಿ ಫಾಲೋ ಮಾಡುತ್ತಿದ್ದರೆಂದು ಕಂಕನಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. 28 ವರ್ಷದ ಯುವಕನಿಗೆ ಇಂಟರ್ನೆಂಟ್​ ಕರೆ ಮಾಡಿ ಬೈದಿದ್ದಾರೆ. ಆದರೆ ಜೊಮೆಟೋ ಡೆಲಿವರಿ ಬಾಯ್ ಯುವಕನನ್ನು ಫಾಲೋ ಮಾಡಿದ್ದಾನೆ ಎಂದು ಹೇಳಿದರು.

ಸಿಸಿಟಿವಿ ಪರಿಶೀಲಿಸಿ ದೂರು ನೀಡಿದ್ದವರಿಗೆ ಮಾಹಿತಿ ನೀಡಿದ್ದೇವೆ. ಸದ್ಯದ ಅಹಿತಕರ ಪರಿಸ್ಥಿತಿ ನೋಡಿ ಅವರು ಆತಂಕಕ್ಕೊಳಗಾಗಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ. 3-4 ಬಾರಿ ಇಂಟರ್​ನೆಟ್​ ಕರೆ ಬಂದಿದ್ದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದರು.

ನಮಗೆ ನೊಂದವರು, ಆರೋಪಿಗಳ ಸಂಬಂಧ ಅಷ್ಟೇ ಮುಖ್ಯವಾಗಿದೆ. ಇದರಲ್ಲಿ ಸಂಘಟನೆ ಮತ್ತೊಂದರ ಬಗ್ಗೆ ನಮಗೆ ಅವಶ್ಯಕತೆ ಇಲ್ಲ. ಉಳ್ಳಾಲದಲ್ಲಿ ನಡೆದ ಹಲ್ಲೆ ಯತ್ನ ಪ್ರಕರಣದ ಬಗ್ಗೆ ಸುಳ್ಳು ಮಾಹಿತಿ ದೊರೆತಿದೆ. ವದಂತಿ ಹರಡಿದ್ದ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಯಾವುದೇ ಸುಳ್ಳು ಸುದ್ದಿ ಹರಡಿದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

Published on: Aug 09, 2022 02:40 PM