ಮಂಗಳೂರು-ಬೆಂಗಳೂರು ವಿಮಾನ ಸಂಚಾರ ಹೆಚ್ಚಳ: ಇಲ್ಲಿದೆ ಡೀಟೇಲ್ಸ್​

| Updated By: ವಿವೇಕ ಬಿರಾದಾರ

Updated on: Sep 05, 2023 | 10:50 AM

ಇಂಡಿಗೋ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸೆಪ್ಟೆಂಬರ್ 7 ರಿಂದ 6ಇ 6858 ವಿಮಾನವನ್ನು ಮರು ಪರಿಚಯಿಸಲಿದೆ. ಈ ವಿಮಾನವು ಮಂಗಳೂರಿಗೆ ಬೆಳಿಗ್ಗೆ 8.35 ಕ್ಕೆ ಬರುತ್ತದೆ. ಮತ್ತು 6ಇ 5347 ವಿಮಾನ ಬೆಳಿಗ್ಗೆ 9.10 ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಡಲಿದೆ.

ಮಂಗಳೂರು-ಬೆಂಗಳೂರು ವಿಮಾನ ಸಂಚಾರ ಹೆಚ್ಚಳ: ಇಲ್ಲಿದೆ ಡೀಟೇಲ್ಸ್​
ಇಂಡಿಗೋ ವಿಮಾನ
Follow us on

ಮಂಗಳೂರು: ಸೆಪ್ಟೆಂಬರ್​ 7 ರಿಂದ ಪ್ರತಿದಿನ ಮಂಗಳೂರು (Mangalore) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (International Airport) ರಾಜ್ಯ ರಾಜಧಾನಿ ಬೆಂಗಳೂರಿಗೆ (Bengaluru) ಸಂಚರಿಸುವ ವಿಮಾನಗಳ ಸಂಖ್ಯೆ ಹೆಚ್ಚಳವಾಗಲಿದೆ. ಶನಿವಾರ ಆರು ಮತ್ತು ವಾರದ ಇತರ ಆರು ದಿನಗಳಲ್ಲಿ ಪ್ರತಿದಿನ ಐದು ವಿಮಾನಗಳು ಮಂಗಳೂರು-ಬೆಂಗಳೂರು ನಡುವೆ ಸಂಚರಿಸಲಿವೆ. ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಸ್ತುತ ನಾಲ್ಕು ವಿಮಾನಗಳನ್ನು ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಅಕ್ಟೋಬರ್​ 28ರವರೆಗೆ ಹೆಚ್ಚುವರಿ ವಿಮಾನ ಸೇವೆಯನ್ನು ಒದಗಿಸಲು ತಿರ್ಮಾನಿಸಿದೆ.

ಇಂಡಿಗೋ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸೆಪ್ಟೆಂಬರ್ 7 ರಿಂದ 6ಇ 6858 ವಿಮಾನವನ್ನು ಮರು ಪರಿಚಯಿಸಲಿದೆ. ಈ ವಿಮಾನವು ಮಂಗಳೂರಿಗೆ ಬೆಳಿಗ್ಗೆ 8.35 ಕ್ಕೆ ಬರುತ್ತದೆ. ಮತ್ತು 6ಇ 5347 ವಿಮಾನ ಬೆಳಿಗ್ಗೆ 9.10 ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಡಲಿದೆ. ಬೆಳಿಗ್ಗೆ 6.50ಕ್ಕೆ 6ಇ 0255 ಕ್ಕೆ ಬೆಂಗಳೂರಿನ ಮೂಲಕ ಪಾಟ್ನಾಗೆ ಹೊರಡುತ್ತದೆ. ಈ ಮೂಲಕ ಶನಿವಾರ ಮಂಗಳೂರಿನಿಂದ ಬೆಂಗಳೂರಿಗೆ ಬರುವ ಆರನೇ ವಿಮಾನ ಇದಾಗಿದೆ.

ಇದನ್ನೂ ಓದಿ: ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಇಂಡಿಗೋ ಮಂಗಳವಾರ, ಗುರುವಾರ, ಭಾನುವಾರ ಮತ್ತು ಶನಿವಾರದಂದು ತನ್ನ ಮಂಗಳೂರು-ಪುಣೆ ವಿಮಾನದ ಕಾರ್ಯಾಚರಣೆಯ ದಿನಗಳು ಮತ್ತು ಸಮಯವನ್ನು ರಿ ಶೆಡ್ಯುಲ್​ ಮಾಡಿದೆ. ವಿಮಾನ 6ಇ 294 ಮಂಗಳೂರಿಗೆ ಸಂಜೆ 5.50 ಕ್ಕೆ ಆಗಮಿಸುತ್ತದೆ. ಮಂಗಳವಾರ, ಗುರುವಾರ ಮತ್ತು ಭಾನುವಾರದಂದು ಸಂಜೆ 6.35 ಕ್ಕೆ 6ಇ 298 ವಿಮಾನ ಪುಣೆಗೆ ಹೊರಡಲಿದೆ. ಶನಿವಾರ, 6ಇ 359 ವಿಮಾನವು ಬೆಂಗಳೂರಿನಿಂದ ಸಂಜೆ 5.50 ಕ್ಕೆ ಮಂಗಳೂರಿಗೆ ಆಗಮಿಸುತ್ತದೆ. ನಂತರ 6ಇ 298 ವಿಮಾನದಲ್ಲಿ 6.35 ಕ್ಕೆ ಪುಣೆಗೆ ಹೊರಡಲಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಪ್ರಾರಂಭಿಸಲು ಇತರ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಕಾರಾತ್ಮಕ ಭಾವನೆ ಇದೆ. ಕ್ಟೋಬರ್ 29 ರಿಂದ ಪ್ರಾರಂಭವಾಗುವ ಚಳಿಗಾಲದ ವೇಳಾಪಟ್ಟಿಯಲ್ಲಿ ಈ ಹೊಸ ವಿಮಾನಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:49 am, Tue, 5 September 23