ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
ಸೆಪ್ಟೆಂಬರ್ 3 ರ ರಾತ್ರಿ 9.11 ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗಿದೆ. ಸ್ವಲ್ಪ ಸಮಯದ ನಂತರ ವಿಮಾನದ ಹಿಂಭಾಗದಿಂದ ಸುಡುವ ವಾಸನೆ, ಸಹ ಪ್ರಯಾಣಿಕರಿಗೆ ಬಂದಿದೆ. ಸ್ವಲ್ಪ ಸಮಯದ ನಂತರ ಈ ವಾಸನೆ ಶೌಚಾಲಯದಿಂದ ಬರುತ್ತಿದೆ ಎಂದು ಪ್ರಯಾಣಿಕರು ಅರಿತರು.
ಬೆಂಗಳೂರು: ಭಾನುವಾರ ರಾತ್ರಿ ಕೋಲ್ಕತ್ತಾದಿಂದ (Kolkata) ಬೆಂಗಳೂರಿಗೆ (Bengaluru) ಬರುತ್ತಿದ್ದ ಇಂಡಿಗೋ ವಿಮಾನದ (IndiGo Airplane) ಶೌಚಾಲಯದೊಳಗೆ ಧೂಮಪಾನ (Smoking) ಮಾಡಿದ ಆರೋಪದ ಮೇಲೆ ಜಿ ಕರುಣಾಕರನ್ ಎಂಬ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಸೆಕ್ಷನ್ 336 ಅಡಿಯಲ್ಲಿ ಸಾರ್ವಜನಿಕ ಸುರಕ್ಷತೆಗೆ ದಕ್ಕೆ, ಸೆಕ್ಷನ್ 25 (3ಬಿ) ನಿಯಮ ಉಲ್ಲಂಘನೆ ಮತ್ತು ಏರ್‌ಕ್ರಾಫ್ಟ್ ನಿಯಮ 1937 ರ ಅಡಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 3 ರ ರಾತ್ರಿ 9.11 ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗಿದೆ. ಸ್ವಲ್ಪ ಸಮಯದ ನಂತರ ವಿಮಾನದ ಹಿಂಭಾಗದಿಂದ ಸುಡುವ ವಾಸನೆ, ಸಹ ಪ್ರಯಾಣಿಕರಿಗೆ ಬಂದಿದೆ. ಸ್ವಲ್ಪ ಸಮಯದ ನಂತರ ಈ ವಾಸನೆ ಶೌಚಾಲಯದಿಂದ ಬರುತ್ತಿದೆ ಎಂದು ಪ್ರಯಾಣಿಕರು ಅರಿತರು. ತಕ್ಷಣವೇ ಈ ವಿಚಾರವನ್ನು ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ಸಿಬ್ಬಂದಿ ಶೌಚಾಲಯದ ಬಾಗಿ ತಟ್ಟಿದ್ದಾರೆ.
ಒಳಗಿದ್ದ ಜಿ ಕರುಣಾಕರನ್ ಬಾಗಿಲು ತೆರೆದಾಗ ಅವರ ಕೈಯಲ್ಲಿ ಬೀಡಿ ಇರುವುದು ಕಂಡಿದೆ. ಜಿ ಕರುಣಾಕರನ್ ತಕ್ಷಣವೇ ಅರ್ಧ ಸೇದಿದ ಬೀಡಿಯನ್ನು ಶೌಚಾಲಯದೊಳಗೆ ಹಾಕಿ ಫ್ಲೆಶ್ ಮಾಡಲು ಯತ್ನಿಸಿದರು ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಬಳಿಕ ವಿಮಾನವು ಕೆಐಎನಲ್ಲಿ ಲ್ಯಾಂಡ್ ಆದ ತಕ್ಷಣ, ಜಿ ಕರುಣಾಕರನ್ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಸೆಪ್ಟೆಂಬರ್ 12 ರಿಂದ ಕೆಂಪೇಗೌಡ ಏರ್‌ಪೋರ್ಟ್‌ನ ಟರ್ಮಿನಲ್ 2ರಿಂದ ವಿದೇಶಿ ವಿಮಾನಗಳ ಹಾರಾಟ ಆರಂಭ
ಇಂಡಿಗೋ ವಿಮಾನ 3 ಗಂಟೆ ವಿಳಂಬ, ನಾವೇನು ಭಿಕ್ಷುಕರಾ ಎಂದ ಪ್ರಯಾಣಿಕ
ಬೆಂಗಳೂರಿನಿಂದ ತೂತುಕುಡಿಗೆ ತೆರಳಬೇಕಿದ್ದ ಇಂಡಿಗೋ ವಿಮಾನ ಮೂರು ಗಂಟೆ 11 ನಿಮಿಷ ತಡವಾಗಿತ್ತು. ಸೋಮವಾರ ಮಧ್ಯಾಹ್ನ 1.15ಕ್ಕೆ ಹೊರಡಬೇಕಿದ್ದ ವಿಮಾನ ಸಂಜೆ 4.26ಕ್ಕೆ ಟೇಕಾಫ್ ಆಗಿದೆ. ವಿಮಾನ ತಡವಾಗಿ ಬರುವುದರಿಂದ ಟೇಕಾಫ್ ತಡವಾಗಲಿದೆ ಎಂದು ಅನೌನ್ಸ್ ಮಾಡಲಾಯ್ತು.
ಇದರಿಂದ ಬೇಸರಗೊಂಡ ಪ್ರಯಾಣಿಕ ಎಕ್ಸ್ (ಟ್ವಿಟರ್) ಮೂಲಕ ವಿಮಾನಯಾನ ಸಚಿವಾಲಯಕ್ಕೆ ಟ್ಯಾಗ್ ಮಾಡಿ ಮಧ್ಯಾಹ್ನ 1.15ಕ್ಕೆ ಹೊರಡಬೇಕಿದ್ದ ವಿಮಾನ ಸಂಜೆ 4.26ಕ್ಕೆ ಟೇಕಾಫ್ ಆಗಿದೆ. ಅಲ್ಲದೇ ನಮಗೆ ಅರ್ಧ ಸ್ಯಾಂಡ್ವಿಚ್ ನೀಡಿ ನಮ್ಮನ್ನು ಭಿಕ್ಷುಕರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:37 am, Tue, 5 September 23