ಸೆಪ್ಟೆಂಬರ್ 12 ರಿಂದ ಕೆಂಪೇಗೌಡ ಏರ್‌ಪೋರ್ಟ್‌ನ ಟರ್ಮಿನಲ್ 2ರಿಂದ ವಿದೇಶಿ ವಿಮಾನಗಳ ಹಾರಾಟ ಆರಂಭ
ಇಂದಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋಟ್ನ ಗಾರ್ಡನ್ ಟರ್ಮಿನಲ್ ಎರಡರಿಂದ ಹಾರಾಟ ಮಾಡಬೇಕಿದ್ದ ವಿದೇಶಿ ವಿಮಾನಗಳ ಹಾರಾಟವನ್ನು ಸೆಪ್ಟೆಂಬರ್ 12ರ ಬೆಳಿಗ್ಗೆ 10.45 ನಂತರ ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು, ಆಗಸ್ಟ್ 31: ತಾಂತ್ರಿಕ ದೋಷ ಹಾಗೂ ಕೆಲ ಸಮಸ್ಯೆಗಳಿಂದ ಇಂದಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋಟ್ನ (Kempegowda Airport) ಗಾರ್ಡನ್ ಟರ್ಮಿನಲ್ ಎರಡರಿಂದ ಹಾರಾಟ ಮಾಡಬೇಕಿದ್ದ ವಿದೇಶಿ ವಿಮಾನಗಳ ಹಾರಾಟವನ್ನು ಸೆಪ್ಟೆಂಬರ್ 12, ಬೆಳಿಗ್ಗೆ 10.45 ನಂತರ ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ನಿಯಂತ್ರಕರ ಅಂಗೀಕಾರ, ಕಾರ್ಯಾಚರಣೆಯ ದಕ್ಷತೆ ಹಾಗೂ ಪ್ರಯಾಣಿಕರ ಅನುಕೂಲತೆ ಸೇರಿದಂತೆ ವಿವಿಧ ಅಂಶಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿ ಮತ್ತು ಪರಿಗಣಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ವಿಮಾನ ಯಾನ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನಮ್ಮ ಪ್ರಯಾಣಿಕರಿಗೆ ಈ ಬದಲಾವಣೆಯನ್ನು ಸುಗಮವಾಗಿಸಲು ನಾವು ಬದ್ಧರಾಗಿದ್ದೇವೆ. ಹೊಸ ಸೌಲಭ್ಯಕ್ಕೆ ಅಂತಾರಾಷ್ಟ್ರೀಯ ಕಾರ್ಯಾಚರಣೆಯ ಅಡಚಣೆರಹಿತ ಸ್ಥಳಾಂತರಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ನಿಮ್ಮ ತಾಳ್ಮೆ ಮತ್ತು ಅಚಲ ಬೆಂಬಲ ಪ್ರಶಂಸನೀಯ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ತಾಂತ್ರಿಕ ದೋಷ: ಕೆಂಪೇಗೌಡ ಏರ್‌ಪೋರ್ಟ್‌ನ ಟರ್ಮಿನಲ್ 2ರಿಂದ ವಿದೇಶಿ ವಿಮಾನಗಳ ಹಾರಾಟ ಮುಂದೂಡಿಕೆ
ಇಂದಿನಿಂದ ಟರ್ಮಿನಲ್ 2ನಿಂದ ವಿದೇಶಿ ಹಾರಾಟಕ್ಕೆ ಕೆಐಎಬಿ ತಂಡ ಮುಹೂರ್ತ ಫಿಕ್ಸ್ ಮಾಡಿತ್ತು. ಆದರೆ ಕೊನೆ ಕ್ಷಣದಲ್ಲಿ ಮುಂದೂಡಿಕೆ ಮಾಡುವುದಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು. ಸದ್ಯ ಸೆಪ್ಟೆಂಬರ್ 12 ರಿಂದ ಟರ್ಮಿನಲ್ 2 ಕಾರ್ಯಚರಣೆ ಆರಂಭಗೊಳ್ಳಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ತಿಳಿಸಿದ್ದು, ಪ್ರಯಾಣಿಕರು ಖುಷ್ ಆಗಿದ್ದಾರೆ.
ಇದನ್ನೂ ಓದಿ: ಬ್ಯಾಂಕಾಕ್‌ನಿಂದ ಬಂದವನ ಬ್ಯಾಗಲ್ಲಿತ್ತು ಹೆಬ್ಬಾವು, ಮೊಸಳೆ! ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 234 ಪ್ರಾಣಿಗಳ ಜಪ್ತಿ
ಕೆಲ ದಿನಗಳ ಕಾಲ ಅಂದರೆ, ಸೆಪ್ಟೆಂಬರ್ 12 ರ ವರೆಗೆ ಟರ್ಮಿನಲ್ 1 ರಿಂದಲೇ ವಿದೇಶಿ ವಿಮಾನಗಳು ಹಾರಾಟ ನಡೆಸಲಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆ. 31ರಿಂದ ಟರ್ಮಿನಲ್ 1ರಿಂದ ದೇಶಿಯ ಮತ್ತು ಟರ್ಮಿನಲ್ 2ರಿಂದ ವಿದೇಶಿ ವಿಮಾನಗಳ ಹಾರಾಟ ನಡೆಸಬೇಕಿತ್ತು. ಆದರೆ ತಾಂತ್ರಿಕ ದೋಷ ಹಾಗೂ ಕೆಲ ಸಮಸ್ಯೆಗಳಿಂದ ಹಾರಾಟ ಮುಂದೂಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:45 pm, Thu, 31 August 23