ಕೆರೆಯಂತಾದ ರಸ್ತೆಗಳು..ಕೆಟ್ಟು ನಿಂತ ವಾಹನಗಳು: ಬೆಂಗಳೂರಿನ ಮಳೆಯನ್ನು ವಿಡಿಯೋನಲ್ಲಿ ನೋಡಿ

ಕೆರೆಯಂತಾದ ರಸ್ತೆಗಳು..ಕೆಟ್ಟು ನಿಂತ ವಾಹನಗಳು: ಬೆಂಗಳೂರಿನ ಮಳೆಯನ್ನು ವಿಡಿಯೋನಲ್ಲಿ ನೋಡಿ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Sep 01, 2023 | 8:11 AM

Bengaluru Rain: ಮುಂಗಾರು ಮಳೆ ಕೈ ಕೊಟ್ಟು ಬಿಸಿಲ ತಾಪ ಹೆಚ್ಚಾಗಿದ್ದ ಬೆಂಗಳೂರಿಗೆ ನಿನ್ನೆ (ಆಗಸ್ಟ್ 31) ರಾತ್ರಿ ವರುಣಾ ದೇವ ಕೃಪೆ ತೋರಿದ್ದಾನೆ ನಿನ್ನೆ ರಾತ್ರಿ 9ರ ಸುಮಾರಿಗೆ ಶುರುವಾದ ಮಳೆಯ ಅಬ್ಬರ‌ ಬೆಳಗಿನ ಜಾವವಾದ್ರು ನಿಂತಿಲ್ಲ. ‌ಮಳೆ ಬಂದು ತಂಪು ಮಾಡಿದ್ರೇ ಮಳೆಯಿಂದ ಆದ ಅನಾಹುತಗಳಿಂದ ಜನ ನಿದ್ದೆಗೆಟ್ಡಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 01):  ನಿನ್ನೆ ರಾತ್ರಿ  (ಆಗಸ್ಟ್ 31)  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಏಕಾಏಕಿ ಶುರುವಾದ ಜೋರು ಮಳೆ (Rain)ಸತತ ಒಂದುವರೆ ಗಂಟೆಗಳ ಕಾಲ ಬಿಟ್ಟು ಬಿಡದೇ ಅಬ್ಬರಿಸಿತ್ತು.. ಬಳಿಕ ಕೊಂಚ ಅಬ್ಬರವನ್ನ ಕಡಿಮೆ ಮಾಡಿಕೊಂಡ‌ ಮಳೆರಾಯ ರಾತ್ರಿ ಇಡೀ ಅಗಾಗ ಜೋರಾಗಿ ಅಬ್ಬರಿತ್ತು.  ಮಳೆ ಬರೋದಕ್ಕೆ ಶುರುವಾಗ್ತಿದ್ದಂತೆ ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ಪದ್ಮನಾಭನಗರ, ಹಬ್ಬಾಳ, ಸಂಪಗಿರಾಮನಗರ, ಗೋರಗುಂಟೆ ಪಾಳ್ಯ, ಆರ್ ಎಂವಿ ಲೇಔಟ್, ಸಹಕಾರ ನಗರ,‌ಶಾಂತಿನಗರ ಬೊಮ್ಮಸಂದ್ರ ಸೇರಿದಂತೆ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿತ್ತು..ಬಿಬಿಎಂಪಿ‌ ಸಿಬ್ಬಂದಿಗಳು ನೀರು ಹೊರ ಹಾಕಲು ಮೋಟರ್ ಗಳನ್ನ ಬಳಿಸಿ ನೀರಿನ್ನ ಹೊರ ಹಾಕಲು ಪ್ರಯತ್ನ ಪಡ್ತಿದ್ರೇ ಮನೆಯವರು ಅಯ್ಯೋ ಇದೇನಲ್ಲ ಕಾರ್ಮ ನಮಗೆ ಅಂತಾ ಮಳೆ ನೀರಿನ ಜೊತೆಗೆ ಮೋರಿ ನೀರನ್ನ ಮನೆಯಿಂದ‌ ಹೊರ ಹಾಕಲು ಹರಸಾಹಸ ಪಟ್ಟರು. ಇನ್ನೂ ಮಳೆಯಿಂದ ಬೆಂಗಳೂರಿನ ಬಹುತೇಕ ರಸ್ತೆಗಳು ಕೆರೆಯಂತೆ ಆಗಿದ್ದು, ಶೇಷಾದ್ರಿಪುರಂ ಅಂಡರ್ ಪಾಸ್ ನಲ್ಲಿ ಖಾಸಗಿ ಬಸ್ ಒಂದು ನೀರಿನಲ್ಲಿ ಸಿಲುಕಿ ಕೆಟ್ಟು ನಿಂತಿತ್ತು.‌ ಇನ್ನೂ ಭದ್ರಪ್ಪ ಲೇಔಟ್ ನ ರೈಲ್ವೇ ಅಂಡರ್ ಪಾಸ್ ನಲ್ಲಿ ಆಟೋ ಒಂದು ಮುಳುಗಿ ನಿಂತಿತ್ತು.. ಜೊತೆಗೆ ಬೆಂಗಳೂರಿನ ನಾನಾ ಕಡೆ ಮರಗಳು ಧರೆಗೆ ಉರುಳಿವೆ.

ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ