Kerala Onam bumper Lottery: ಕೇರಳ ತಿರುಓಣಂ ಬಂಪರ್ ಲಾಟರಿ ಡ್ರಾ: ಪುತ್ತೂರಿನ ಮೇಸ್ತ್ರಿ, ನಾಲ್ವರು ಹೆಣ್ಣು ಮಕ್ಕಳ ಚಂದ್ರಯ್ಯಗೆ 50 ಲಕ್ಷ ರೂ ತೃತೀಯ ಬಹುಮಾನ

|

Updated on: Sep 29, 2023 | 10:38 AM

For Dakshina Kannada ನಾನೊಬ್ಬನೇ ಕುಟುಂಬದ ಆಧಾರ, ನಾನು ಆರ್ಥಿಕವಾಗಿ ಬಡವನಾಗಿದ್ದರೂ, ನನ್ನ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ್ದೇನೆ, ಅವರ ಶಿಕ್ಷಣ ಮತ್ತು ಮದುವೆಗೆ ನಾನು ರೂ 10 ಲಕ್ಷ ಸಾಲ ಮಾಡಿದ್ದೇನೆ. ಹಾಗಾಗಿ ಸಾಲವನ್ನು ವಾಪಸ್​​ ಮಾಡಲು ನಾನು ಮೊದಲ ಆದ್ಯತೆ ನೀಡುತ್ತೇನೆ. ದೇವರು ನನ್ನ ಕಷ್ಟವನ್ನು ಅರ್ಥಮಾಡಿಕೊಂಡಿದ್ದಾನೆ ಎಂದು ನಾನು ಭಾವಿಸುತ್ತೇನೆ ಎಂದು ಮೇಸ್ತ್ರಿ ಚಂದ್ರಯ್ಯ ಸಮಾಧಾನಪಟ್ಟರು.

Kerala Onam bumper Lottery: ಕೇರಳ ತಿರುಓಣಂ ಬಂಪರ್ ಲಾಟರಿ ಡ್ರಾ: ಪುತ್ತೂರಿನ ಮೇಸ್ತ್ರಿ, ನಾಲ್ವರು ಹೆಣ್ಣು ಮಕ್ಕಳ ಚಂದ್ರಯ್ಯಗೆ 50 ಲಕ್ಷ ರೂ ತೃತೀಯ ಬಹುಮಾನ
ಕೇರಳ ತಿರುಓಣಂ ಬಂಪರ್ ಲಾಟರಿ ಡ್ರಾ
Follow us on

ಪುತ್ತೂರು, ಸೆಪ್ಟೆಂಬರ್​ 28: ಬಡತನದ ನಡುವೆಯೂ ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಪುತ್ತೂರು ತಾಲೂಕಿನ (Puttur) ಇಳಂತಿಲ ಗ್ರಾಮದ ಎಣ್ಮಡಿ ನಿವಾಸಿ, ಕಷ್ಟಪಟ್ಟು ದುಡಿಯುವ ಮೇಸ್ತ್ರಿ ಚಂದ್ರಯ್ಯ ಕುಂಬಾರ ಅವರ ಮೇಲೆ ತಾಯಿ ಲಕ್ಷ್ಮಿ ದೇವಿ ಮುಗುಳು ನಗೆ ಬೀರಿದ್ದಾಳೆ. ಮೇಸ್ತ್ರಿ ಚಂದ್ರಯ್ಯ (mason Chandraiah Kumbara) ಅವರು ಕೇರಳ ರಾಜ್ಯ ಲಾಟರಿ (Kerala state lottery) ಡ್ರಾದಲ್ಲಿ 50 ಲಕ್ಷ ರೂಪಾಯಿಗಳ ಬಹುಮಾನವನ್ನು ಗೆದ್ದಿದ್ದಾರೆ.

ಚಂದ್ರಯ್ಯ ಕಾನತ್ತೂರಿನ ಶ್ರೀ ನಾಲವಾರ ದೈವಸ್ಥಾನಕ್ಕೆ ಹೋಗಿದ್ದರು. ಅವರು 500 ರೂ ಬೆಲೆಯ ಓಣಂ ಬಂಪರ್ ಲಾಟರಿಯನ್ನು ಖರೀದಿಸಿದರು. ಬಂಪರ್ ಟಿಕೆಟ್​ 25 ಕೋಟಿ ರೂ ಬಹುಮಾನದ್ದಾಗಿತ್ತು. ಆದರೆ ಚಂದ್ರಯ್ಯ ತೃತೀಯ ಸ್ಥಾನ ಪಡೆದರು.

ಇದನ್ನೂ ಓದಿ: ಅಬ್ಬಬ್ಬಾ ಲಾಟರಿ! ಕೈಯಲ್ಲಿ ಕಾಸಿಲ್ಲದಿದ್ದರೂ 11 ಮಹಿಳಾ ಪೌರಕಾರ್ಮಿಕರು ಒಟ್ಟಾಗಿ ಟಿಕೆಟ್​ ಖರೀದಿಸಿ 10 ಕೋಟಿ ಕೇರಳ ಲಾಟರಿ ಗೆದ್ದುಬಿಟ್ಟರು!

ಮಾಧ್ಯಮದವರೊಂದಿಗೆ ಮಾತನಾಡಿದ ಚಂದ್ರಯ್ಯ, ನಾನು ಐದು ಸೆಂಟ್ಸ್ ಜನತಾ ಕಾಲೋನಿ ನಿವಾಸಿ, ನನಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ, ನನ್ನ ಮೊದಲ ಮಗಳು ಪಿಯುಸಿವರೆಗೆ ಓದಿದ್ದಾಳೆ, ಎರಡನೆಯವಳು ಎಂಬಿಎ ಮಾಡುತ್ತಿದ್ದಾಳೆ, ಮೂರನೇ ಮಗಳು ಪದವಿ ಓದುತ್ತಿದ್ದಾಳೆ. ಕೊನೆಯವಳು ಅರೆವೈದ್ಯಕೀಯವನ್ನು ಕೋರ್ಸ್ ಮಾಡ್ತಿದ್ದಾಳೆ ಎಂದು ಮಾಹಿತಿ ಹಂಚಿಕೊಂಡರು.

ನಾನೊಬ್ಬನೇ ಕುಟುಂಬದ ಆಧಾರ, ನಾನು ಆರ್ಥಿಕವಾಗಿ ಬಡವನಾಗಿದ್ದರೂ, ನನ್ನ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ್ದೇನೆ, ಅವರ ಶಿಕ್ಷಣ ಮತ್ತು ಮದುವೆಗೆ ನಾನು ರೂ 10 ಲಕ್ಷ ಸಾಲ ಮಾಡಿದ್ದೇನೆ. ಹಾಗಾಗಿ ಸಾಲವನ್ನು ವಾಪಸ್​​ ಮಾಡಲು ನಾನು ಮೊದಲ ಆದ್ಯತೆ ನೀಡುತ್ತೇನೆ. ದೇವರು ನನ್ನ ಕಷ್ಟವನ್ನು ಅರ್ಥಮಾಡಿಕೊಂಡಿದ್ದಾನೆ ಎಂದು ನಾನು ಭಾವಿಸುತ್ತೇನೆ ಎಂದು ಮೇಸ್ತ್ರಿ ಚಂದ್ರಯ್ಯ ಸಮಾಧಾನಪಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ