AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಬಂದ್​ಗೆ ನಮ್ಮ ಬೆಂಬಲವಿಲ್ಲ ಎಂದ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘ

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘದಿಂದ ಬಂದ್​ಗೆ ಬೆಂಬಲವಿಲ್ಲ. ನಾಳೆ ಎಂದಿನಂತೆ ಖಾಸಗಿ ಸಿಟಿ ಬಸ್, ಸರ್ವೀಸ್ ಬಸ್ ಸಂಚಾರ ಮಾಡಲಿದೆ ಎಂದು ಟಿವಿ 9 ಗೆ ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ ಹೇಳಿದ್ದಾರೆ.

ಕರ್ನಾಟಕ ಬಂದ್​ಗೆ ನಮ್ಮ ಬೆಂಬಲವಿಲ್ಲ ಎಂದ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘ
ಖಾಸಗಿ ಬಸ್​
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on:Sep 28, 2023 | 1:02 PM

Share

ದಕ್ಷಿಣ ಕನ್ನಡ, ಸೆ.28: ತಮಿಳುನಾಡಿಗೆ ಕಾವೇರಿ ನೀರು(Cauvery Water) ಬಿಡುವಂತೆ ಸುಪ್ರೀಂ ಕೋರ್ಟ್​ ಆದೇಶ ನೀಡಿತ್ತು. ಈ ಹಿನ್ನಲೆ ರಾಜ್ಯಾದ್ಯಂತ ರೈತಪರ ಸಂಘಟನೆಗಳು ಭುಗಿಲೆದಿದ್ದು, ಅದರಂತೆ ಮಂಗಳವಾರ(ಸೆ.26) ವಿವಿಧ ಸಂಘಟನೆಗಳು ಬೆಂಗಳೂರು ಬಂದ್​ಗೆ  ಕರೆ ನೀಡಿತ್ತು. ಇದೀಗ ಮತ್ತೆ ಸರ್ಕಾರದ ವಿರುದ್ಧ ನಾಳೆ(ಸೆ.29) ಕರ್ನಾಟಕ ಬಂದ್​ಗೆ ಕರೆ ನೀಡಿದೆ. ಅದರಂತೆ ಬಸ್​, ಕ್ಯಾಬ್​, ಹೊಟೇಲ್​ ಸೇರಿದಂತೆ ಅನೇಕ ಸಂಘಗಳು ರಾಜ್ಯಾದ್ಯಂತ ಬೆಂಬಲ ಸೂಚಿಸಿವೆ. ಈ ಮಧ್ಯೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘದಿಂದ ಬಂದ್​ಗೆ ಬೆಂಬಲವಿಲ್ಲ. ನಾಳೆ ಎಂದಿನಂತೆ ಖಾಸಗಿ ಸಿಟಿ ಬಸ್, ಸರ್ವೀಸ್ ಬಸ್ ಸಂಚಾರ ಮಾಡಲಿದೆ ಎಂದು ಟಿವಿ 9 ಗೆ ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ ಹೇಳಿದ್ದಾರೆ.

ಕರ್ನಾಟಕ ಬಂದ್​ಗೆ ನಮ್ಮ ಬೆಂಬಲವಿಲ್ಲ

ಹೌದು, ಸಾರಿಗೆ ವ್ಯವಸ್ಥೆಯಲ್ಲಿ ಈಗಿರುವ ಯಥಾಸ್ಥಿತಿಯೆ ನಾಳೆ ಮುಂದುವರಿಯುತ್ತೆ. ನೈತಿಕವಾಗಿ ಬೆಂಬಲ ಕೊಡುತ್ತೇವೆ. ಆದ್ರೆ,  ಪ್ರತಿಭಟನೆ ಮಾಡಲ್ಲ. ಈ ಹಿಂದೆ ಪರಿಸರಕ್ಕೆ ಮಾರಕವಾದ ಎತ್ತಿನಹೊಳೆ ಯೋಜನೆ ಬೇಡ ಅಂದಿದ್ದೆವು. ಆದ್ರೆ, ಆ ಭಾಗದ ಶಾಸಕರು, ಕನ್ನಡಪರ ಹೋರಾಟಗಾರರು ಯಾರು ಬೆಂಬಲಿಸಿರಲಿಲ್ಲ. ನಾವು ಬಂದ್​ಗೆ ಕರೆ ಕೊಟ್ಟರೂ, ಕರ್ನಾಟಕ ಬಂದ್ ಆಗಿರಲಿಲ್ಲ. ನೀರು ಎಲ್ಲರ ಹಕ್ಕು ಎಂಬ ವಾದವನ್ನು ಅವರು ಮಂಡಿಸುತ್ತಿದ್ದರು. ರಾಜ್ಯದಲ್ಲಿ ತುಳು ಎರಡನೇ ರಾಜ್ಯಭಾಷೆಯಾಗಬೇಕೆಂದು ಒತ್ತಾಯಿಸಿದ್ದೆವು. ಆದರೆ ಸದನದಲ್ಲಿ ಈ ಭಾಗದ ಶಾಸಕರು ಧ್ವನಿಯೆತ್ತಿದಾಗ, ಆ ಭಾಗದ ಶಾಸಕರು ದೈವ ದೇವರ ಹೆಸರಲ್ಲಿ ತಮಾಷೆಯ ದೃಷ್ಟಿಯಲ್ಲಿ ನೋಡಿದರು ಎಂದರು.

ಇದನ್ನೂ ಓದಿ:ಕಾವೇರಿ‌ ಹೋರಾಟಕ್ಕಿಳಿದ ಪ್ರತಿಭಟನಾಕಾರರಿಗೆ ಶಾಕ್: ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ವಿರುದ್ಧ ಎಫ್​ಐಆರ್

ಹೀಗಾಗಿ ನಾವು ನೈತಿಕವಾಗಿ ಅವರ ಜೊತೆ ಇರುತ್ತೇವೆ. ‘ನಾವು ಪ್ರತ್ಯೇಕ ಆಗಬೇಕು ಎಂಬ ಯಾವುದೇ ಇಚ್ಛೆ ನಮಗಿಲ್ಲ. ತುಳುನಾಡು ಕನ್ನಡಕ್ಕೆ ಯಾವತ್ತು ವಿರೋಧವೆಂದು ಅಲ್ಲ. ಮಂಗಳೂರಿನ ಜನ ಬೆಂಗಳೂರು, ಮದ್ರಾಸ್, ಚೆನೈನಲ್ಲಿರಬಹುದು. ಆದ್ರೆ, ಈ ವಾದ ನಮ್ಮದಲ್ಲ. ನಮಗೆ ಸಮಸ್ಯೆ ಎದುರಾದಾಗ ಯಾಕೆ ನಮ್ಮ ಜೊತೆ ನಿಂತಿಲ್ಲ ಎಂಬುದು ನಮ್ಮ ವಾದ. ಇಡೀ ದೇಶವೇ ನಮ್ಮದು ಎಲ್ಲಿ ಹೋಗಿಯಾದರು ವ್ಯಾಪಾರ ವಹಿವಾಟು ಮಾಡಬಹುದು ಎಂದು ಮಂಗಳೂರಿನಲ್ಲಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಸರ್ವಕಾಲೇಜು ವಿದ್ಯಾರ್ಥಿ ಸಂಘದಿಂದ ಕಾವೇರಿ‌ ನೀರಿಗಾಗಿ ಹೋರಾಟಕ್ಕೆ ಕರೆ

ಮಂಗಳೂರು: ಕಾವೇರಿಗಾಗಿ ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಸೆ.30 ರಂದು ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸರ್ವಕಾಲೇಜು ವಿದ್ಯಾರ್ಥಿ ಸಂಘದಿಂದ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂದು ವಿದ್ಯಾರ್ಥಿ ಸಂಘ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ‘ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ಜನತೆ ಪ್ರತಿಭಟಿಸುವುದಿಲ್ಲ ಎಂಬ ಅಪವಾದವಿದೆ. ಆದರೆ, ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಜಲ, ನೆಲ, ಭಾಷೆ ವಿಚಾರದಲ್ಲಿ ಹೋರಾಟವಾದಾಗ ಭಾಗವಹಿಸಿದೆ. ನೇತ್ರಾವತಿ ಉಳಿವಿಗಾಗಿಯೂ ಹೋರಾಟ ನಡೆಸಿದ್ದೇವೆ. ಇದೀಗ ಕಾವೇರಿ ವಿಚಾರದಲ್ಲಿಯೂ ಬೆಂಬಲ ನೀಡುವುದು ನಮ್ಮ ಆದ್ಯ ಕರ್ತವ್ಯ. ಹೀಗಾಗಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಸಂಪೂರ್ಣ ಬೆಂಬಲ ನೀಡುತ್ತೆ. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಸಾಮಾಜಿಕ ಕಳಕಳಿಯ ಸಂಘಟನೆಗಳು ಭಾಗವಹಿಸುವಂತೆ ವಿದ್ಯಾರ್ಥಿ ಸಂಘ ವಿನಂತಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Thu, 28 September 23