ಕಾವೇರಿ ವಿವಾದ: ಬೀದಿ ಬೀದಿ ತೆರಳಿ ಬಂದ್ಗೆ ಸಹರಿಸುವಂತೆ ಜನರಲ್ಲಿ ಮನವಿ ಮಾಡಿದ ವಾಟಾಳ್
ಕಾವೇರಿ ನದಿ ವಿವಾದ ವಿಚಾರವಾಗಿ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ರಾಜ್ಯ ಬಂದ್ಗೆ ಎಲ್ಲರೂ ಸಹಕಾರ ನೀಡಬೇಕು. ಹೋಟೆಲ್, ಶಾಪಿಂಗ್ ಮಾಲ್ಗಳು, ಅಂಗಡಿಗಳು ಬಂದ್ ಮಾಡಬೇಕು ಎಂದು ತೆರೆದ ವಾಹನದಲ್ಲಿ ಬೀದಿ ಬೀದಿಗೆ ತೆರಳಿ ಲೌಡ್ ಸ್ಪೀಕರ್ ಮೂಲಕ ಜನರಿಗೆ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 27: ಕಾವೇರಿ ವಿವಾದ ಹಿನ್ನೆಲೆ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ರಾಜ್ಯ ಬಂದ್ಗೆ ಎಲ್ಲರೂ ಸಹಕಾರ ನೀಡಬೇಕು. ಹೋಟೆಲ್, ಶಾಪಿಂಗ್ ಮಾಲ್ಗಳು, ಅಂಗಡಿಗಳು ಬಂದ್ ಮಾಡಬೇಕು ಎಂದು ತೆರೆದ ವಾಹನದಲ್ಲಿ ಬೀದಿ ಬೀದಿಗೆ ತೆರಳಿ ಲೌಡ್ ಸ್ಪೀಕರ್ ಮೂಲಕ ಜನರಿಗೆ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಮನವಿ ಮಾಡಿದ್ದಾರೆ. ಬಳಿಕ ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂದ್ಗೆ ಎಲ್ಲ ಸಂಘಟನೆಗಳು ಬೆಂಬಲ ನೀಡಿವೆ ಎಂದು ತಿಳಿಸಿದ್ದಾರೆ.
ರಾಜ್ಯದ ಜನರಿಗಾಗಿ ನಾವು ಅನೇಕ ಬಂದ್ಗೆ ಬೆಂಬಲ ನೀಡಿದ್ದೇವೆ. ಸೆಪ್ಟೆಂಬರ್ 29ರ ಕರ್ನಾಟಕ ಬಂದ್ ಬಹಳ ಮುಖ್ಯವಾದದ್ದು. ಈ ಬಂದ್ ಒಂದು ಜಿಲ್ಲೆಗೆ ಮಾತ್ರ ಸೀಮಿತಲ್ಲ, ಕರ್ನಾಟಕದಾದ್ಯಂತ ಬಂದ್ ನಡೆಯಲಿದೆ. ಟೋಲ್, ರೈಲು, ಹೆದ್ದಾರಿ, ವಿಮಾನ ಹಾರಾಟ ಬಂದ್ ಆಗಲಿದೆ. ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಲಿದೆ.
ಇದನ್ನೂ ಓದಿ: ಸೆ.29ರ ಕರ್ನಾಟಕ ಬಂದ್ಗೆ ಬೆಂಬಲ ಕೊಟ್ಟ ಸಂಘಟನೆಗಳು ಯಾವುವು? ಇಲ್ಲಿದೆ ಪಟ್ಟಿ
ಪ್ರತಿಭಟನಾ ರ‍್ಯಾಲಿಯನ್ನು ತಡೆಯದಂತೆ ಸರ್ಕಾರಕ್ಕೆ ಮನವಿ ನೀಡಿರುವ ವಾಟಾಳ್ ನಾಗರಾಜ್, ಒಂದು ವೇಳೆ ತಡದದ್ದೆ ಆದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಕರ್ನಾಟಕ ಬಂದ್ 100% ಯಶಸ್ವಿಯಾಗಲಿದೆ. ರಾಜ್ಯಾದ್ಯಂತ ಎಲ್ಲಾ ಸಂಘಟನೆಗಳಿಂದ ಬಂದ್ಗೆ ಬೆಂಬಲ ಸಿಗುತ್ತಿದೆ. ಶಾಂತಿಯುತವಾಗಿ ಚಳವಳಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಮನವಿ ತಿರಸ್ಕರಿಸಿದ CWRC: ರಾಜ್ಯದ ಜನತೆಯ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ ಎಂದ ಡಿಕೆ ಶಿವಕುಮಾರ್
ಕರ್ನಾಟಕ ಬಂದ್ ಹಿನ್ನೆಲೆ ಕನ್ನಡ ಚಿತ್ರರಂಗದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಫಿಲ್ಮ್ ಚೇಂಬರ್ ನಮಗೆ ಭರವಸೆ ನೀಡಿದೆ. ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ಆಯೋಜಿಸಿರುವ ಪ್ರತಿಭಟನಾ ರ‍್ಯಾಲಿ ಎಲ್ಲಾ ಕಲಾವಿದರು ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಮಂತ್ರಿಯಾದ್ಮೇಲೆ ಸರ್ವಾಧಿಕಾರಿಯಾಗಿದ್ದಾರೆ
ಡಿಸಿಎಂ ಡಿಕೆ ಶಿವಕುಮಾರ್ ಮಂತ್ರಿ ಆದ ಮೇಲೆ ಸರ್ವಾಧಿಕಾರಿಯಾಗಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರ ಬೆಂಬಲಿಸುತ್ತೆ ಆದರೆ ನಮ್ಮಲ್ಲಿ ಸುಮ್ಮನಾಗುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಈ ಹಿಂದೆ ಯಾರೂ ಈ ರೀತಿ ಮಾತನಾಡಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಹಲವು ಭಾರಿ ಬಂದ್ಗೆ ಕರೆ ನೀಡುತ್ತೇವೆ. ಮೇಕೆದಾಟು ವಿಚಾರವಾಗಿ ಪ್ರತಿಭಟನೆ ನಡೆಸಿದ್ದೀರಿ, ಅಧಿಕಾರಕ್ಕೆ ಬಂದ ಮೇಲೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:45 pm, Wed, 27 September 23