AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆ.29ರ ಕರ್ನಾಟಕ ಬಂದ್​ಗೆ ಬೆಂಬಲ ಕೊಟ್ಟ ಸಂಘಟನೆಗಳು ಯಾವುವು? ಇಲ್ಲಿದೆ ಪಟ್ಟಿ

Karnataka Bandh: ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ವಿವಿಧ ಸಂಘಟನೆಗಳು ನೀಡಿದ್ದ ಬೆಂಗಳೂರು ಬಂದ್‌ ಯಶಸ್ವಿಯಾಗಿದ್ದು ಈಗ ಮತ್ತೆ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆವತ್ತು ಬಂದ್ ಎಫೆಕ್ಟ್ ಯಾವ ರೀತಿ ಆಗಬಹುದು. ಖಂಡ ಕರ್ನಾಟಕ ಬಂದ್​ಗೆ ಯಾವ ಯಾವ ಸಂಘಟನೆಗಳೂ ಬೆಂಬಲ ನೀಡಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೆ.29ರ ಕರ್ನಾಟಕ ಬಂದ್​ಗೆ ಬೆಂಬಲ ಕೊಟ್ಟ ಸಂಘಟನೆಗಳು ಯಾವುವು? ಇಲ್ಲಿದೆ ಪಟ್ಟಿ
ಸಾಂದರ್ಭಿಕ ಚಿತ್ರ
Vinayak Hanamant Gurav
| Edited By: |

Updated on: Sep 27, 2023 | 11:48 AM

Share

ಬೆಂಗಳೂರು, ಸೆ.27: ನಮ್ಮ ರಾಜ್ಯದ ಕೆ‌ಆರ್‌ಎಸ್ ಜಲಾಶಯದಿಂದ ಕಾವೇರಿ ನೀರು ತಮಿಳುನಾಡಿಗೆ ಬಿಡಲೇ ಬೇಕಾದ ಅನಿವಾರ್ಯತೆಗೆ ರಾಜ್ಯ ಸರ್ಕಾರ ಸಿಲುಕಿದೆ (Cauvery Water Dispute). ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್‌ ಆದೇಶಕ್ಕೆ ತಲೆ ಬಾಗಲೇಬೇಕಾದ ಅನಿವಾರ್ಯತೆ ಸಿಲುಕಿರುವ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಈ ವಿಚಾರವಾಗಿ ರಾಜ್ಯದಲ್ಲಿ ಹೋರಾಟ ತೀವ್ರಗೊಂಡಿದ್ದು ರೈತಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ನೀಡಿದ ಬೆಂಗಳೂರು ಬಂದ್‌ (Bengaluru Bandh) ಕರೆಗೆ ಇಡೀ ಬೆಂಗಳೂರು ಸ್ತಬ್ಧ ಆಗಿತ್ತು. ಆದರೆ ಈಗ ಮತ್ತೆ ಎರಡೇ ದಿನಗಳ ಅಂತರದಲ್ಲಿ ಕರ್ನಾಟಕ ಬಂದ್​ಗೆ (Karnataka Bandh) ಕರೆ ಕೊಡಲಾಗಿದೆ.

ಕಾವೇರಿ ಹೋರಾಟ ವಿಚಾರವಾಗಿ ಎರಡು ಬಣಗಳ ನಡುವೆ ಮೂಡದ ಒಮ್ಮತದಿಂದಾಗಿ ಈ ಒಂದೇ ವಾರದಲ್ಲಿ 29 ನೇ ತಾರೀಖಿನಂದು ಎರಡು ದಿನಗಳ ಅತಂರದಲ್ಲಿ ಬೆಂಗಳೂರು ಅಷ್ಟೇ ಅಲ್ಲದೇ ಇಡೀ ಕರ್ನಾಟಕ ರಾಜ್ಯ ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ ಬಂದ್‌ಗೆ ಗೂಡ್ಸ್ ವಾಹನ್, ಖಾಸಗಿ ವಾಹನ ಮಾಲೀಕರು, ಖಾಸಗಿ ಶಾಲೆಗಳು, ಲಾರಿ ಮಾಲೀಕರು ಹಾಗೂ ಚಾಲಕರು, ಸರ್ಕಾರಿ ನೌಕರು ಹಾಗೂ ಆಟೋ ಚಾಲಕರು ಹಾಗೂ ಮಾಲೀಕರು ಸೇರಿದಂತೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ.

150ಕ್ಕೂ ಅಧಿಕ ಸಂಘಟನೆಗಳ ಬೆಂಬಲದಿಂದ ಬೆಂಗಳೂರು ಬಂದ್ ಸಕ್ಸಸ್ ಆಗಿದೆ. ಇನ್ನೂ ಶುಕ್ರವಾರ 29ನೇ ತಾರೀಖಿನಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಇದೇ ತರಹ ರಾಜ್ಯದ ಎಲ್ಲ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದರೆ ಬೆಂಗಳೂರು ಬಂದ್ ತರಹ ಕರ್ನಾಟಕ ಬಂದ್‌ ಕೂಡ ಯಶಸ್ವಿ ಆಗುವ ಸಾರ್ಧಯತೆ ಇದೆ. ಅತ್ತ ಕರಾವಳಿ, ಉತ್ತರ ಕರ್ನಾಟಕ ಕೂಡ ಕರ್ನಾಟಕ ಬಂದ್ ಬೆಂಬಲಕ್ಕೆ ನಿಂತಿವೆ.

ಇದನ್ನೂ ಓದಿ: ಬೆಂಗಳೂರು, ಕರ್ನಾಟಕ ಬಂದ್​: ಮುನ್ನೆಚ್ಚರಿಕೆ ಕ್ರಮ ಕೋರಿ ಹೈಕೋರ್ಟ್​ಗೆ ಅರ್ಜಿ

ವಾಟಾಳ್ ನಾಗರಾಜ್ ಕರೆಗೆ ಬೆಂಬಲ ಕೊಟ್ಟ ಸಂಘಟನೆಗಳು ಯಾವುವು?

ಆದರ್ಶ್ ಆಟೋ ಚಾಲಕರ ಸಂಘ, ಓಲಾ ಉಬರ್ ಸಂಘ, ಡಾಕ್ಟರ್ ರಾಜ್ ಕುಮಾರ್ ಸೇನೆ, ಕನ್ನಡ ಜನ ಶಕ್ತಿ ಕೇಂದ್ರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಜನ ಸೈನ್ಯ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ, ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ, ಕುವೆಂಪು ಕಲಾನಿಕೇತನ, ಕರ್ನಾಟಕ ಜನ ಪರ ವೇದಿಕೆ, ಕರ್ನಾಟಕ ರಾಜ್ಯ ಕಾರ್ಮಿಕರ ಜಾಗೃತಿ ಸಂಘಟನೆ, ಕರುನಾಡ ರೈತ ಸಂಘ, ಕರ್ನಾಟಕ ರಾಜ್ಯ ತಮಟೆ ಕಲಾವಿದರ ಒಕ್ಕೂಟ, ಕರ್ನಾಟಕ ಕನ್ನಡ ಸೇವಾ ಸಂಘ, ಜನಹಿತ ಕರ್ನಾಟಕ ರಕ್ಷಣಾ ವೇದಿಕೆ, ಕರುನಾಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಅಖಿಲ ಕರ್ನಾಟಕ ರಾಜ್ ಕುಮಾರ್ ಅಭಿಮಾನಿಗಳ ಸಂಘ, ಕರವೇ ಶಿವರಾಮೇಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ಕನ್ನಡ ಸೇನೆ, ಕನ್ನಡ ಒಕ್ಕೂಟ,ಕನ್ನಡ ಜಾಗೃತಿ ವೇದಿಕೆ, ಲಾರಿ ಮಾಲೀಕರ ಸಂಘ, ಕರಾರ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ, ಕರ್ನಾಟಕ ವಿಚಾರ ವೇದಿಕೆ, ಅಖಿಲ ಕರ್ನಾಟಕ ಡಾಕ್ಟರ್ ರಾಜ್ ಕುಮಾರ್ ಸಾಂಸ್ಕೃತಿಕ ಸಂಸ್ಥೆ, ಬೆಂಗಳೂರಿಗರು ನಾಗರಿಕರ ಕನ್ನಡ ವೇದಿಕೆ, ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ, ಕನ್ನಡ ಪರ ಸಂಘಟನೆ, ಜನ ಶಕ್ತಿ ಕೇಂದ್ರ, ಡಾಕ್ಟರ್ ರಾಜ್ ಕರ್ನಾಟಕ ಜನಪರ ವೇದಿಕೆ, ಕ. ಸಾ. ಪ ಬೆಂಗಳೂರು ನಗರ ಜಿಲ್ಲೆ, ದಂಡು ಪ್ರದೇಶ, ಕೈಗಾರಿಕೆ ಒಕ್ಕೂಟ ಜಲಮಂಡಳಿ ಕನ್ನಡ ಸಂಘ, ಕಾಮತ್ ಹೋಟೇಲ್, ಕರ್ನಾಟಕ ನವನಿರ್ಮಾಣ ಸೇನ್.

ಜನಪರ ವೇದಿಕೆ, ಕರ್ನಾಟಕ ನವಶಕ್ತಿ, ಆಟೋ ಮಾಲೀಕರ ಸಂಘ, ಮಾರುಕಟ್ಟೆ ಸಂಘ,ಕರ್ನಾಟಕ ರಕ್ಷಣಾ ಪಡೆ,ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿ ಸಂಘ, ರಾಜ್ಯ ಒಕ್ಕಲಿಗರ ಒಕ್ಕೂಟ, ಕನ್ನಡ ಚಳವಳಿ ವೇದಿಕೆ, ಕನ್ನಡ ಕ್ರಿಯಾ ಸಮಿತಿ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ನವಜ್ಯೋತಿ ಸಂಘ, ಕಸ್ತೂರಿ ಕನ್ನಡ ಬಳಗ, ಅನಕೃ ಕನ್ನಡ ಸಂಘ, ಕನ್ನಡ ವೇದಿಕೆ ಮಹಿಳಾ ಘಟಕ, ಕರ್ನಾಟಕ ನೇಕಾರರ ಹಿತ ರಕ್ಷಣಾ ವೇದಿಕೆ, ಸರ್ವಜ್ಞ ಮಿತ್ರ ವ್ರಂದ, ಕರ್ನಾಟಕ ಕಹಳೆ ಸಮಿತಿ, ಕರುನಾಡ ಸೈನ್ಯ ಅಖಿಲ ಕರ್ನಾಟಕ ಪುನೀತ್ ರಾಜ್, ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ವೇದಿಕೆ, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ಸಾಹಿತ್ಯ ಪರಿಷತ್, ವಿಶ್ವ ಮಾನವ ಕುವೆಂಪು ಕಲಾ ನಿಕೇತನ, ಕರ್ನಾಟಕ ರಕ್ಷಣಾ ವೇದಿಕೆ, ಕೊಪ್ಪಳ, ಕರುನಾಡ ರೈತ ಕಾರ್ಮಿಕರ ರಕ್ಷಣಾ ವೇದಿಕೆ, ಅಖಂಡ ಕರ್ನಾಟಕ ಜನ ಜಾಗೃತಿ ವೇದಿಕೆ, ಅಖಿಲ ಕರ್ನಾಟಕ ರಾಜ್ಯ ಕನ್ನಡಾಂಬೆ ಹಿತರಕ್ಷಣಾ ವೇದಿಕೆ, ಕರ್ನಾಟಕ ಕಾರ್ಮಿಕರು ನಾಗರಿಕರ ವೇದಿಕೆ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸಂಘಟನೆಗಳ ಒಕ್ಕೂಟ,ಕನ್ನಡ ಕೈಗಾರಿಕಾ ಒಕ್ಕೂಟ ಸಂಘ, ಕನ್ನಡ ಸಂಘ, ಕನ್ನಡ ಪ್ರಗತಿಪರ ಹೋರಾಟಗಾರ ಒಕ್ಕೂಟ, ಕರ್ನಾಟಕ ಜನ ಸೈನ್ಯ, ಕನ್ನಡ ಪಕ್ಷ ದೊಡ್ಡ ಬಳ್ಳಾಪುರ, ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆ, ವಾಟಾಳ್ ಕನ್ನಡ ಶಕ್ತಿ, ಕರ್ನಾಟಕ ವಿಷ್ಣು ಸೇನೆ,ಕನ್ನಡ ಸಂಘಟನೆಗಳ ಒಕ್ಕೂಟ, ಕರ್ನಾಟಕ ಸ್ವಾಭಿಮಾನಿ ವೇದಿಕೆ, ಕನ್ನಡ ಒಕ್ಕೂಟ, ಜೈ ಕರುನಾಡ ವೇದಿಕೆ, ಕರುನಾಡ ಸಂರಕ್ಷಣಾ ವೇದಿಕೆ, ಕಸ್ತೂರಿ ಕನ್ನಡ ಜನ ಪರ ವೇದಿಕೆ, ಕರುನಾಡ ಸೇವಕರು, ನರಸಿಂಹ ಪಡೆ, ವಿಶ್ವ ವಿಜಯ ಕನ್ನಡ ವೇದಿಕೆ, ಸಂಗೊಳ್ಳಿ ರಾಯಣ್ಣ ಯುವ ಸೇನೆ, ಕರ್ನಾಟಕ ಜಾಗೃತಿ ಸಮಿತಿ, ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಸಂಘ. ವಿಶ್ವ ಕನ್ನಡ ಸಾಮ್ರಾಜ್ಯ, ಜಲ ಸಂರಕ್ಷಣಾ ಸೀಮಿತ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ