AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಡಬ್ಲ್ಯೂಆರ್ ಸಿ ನೀಡಿದ ಆದೇಶವನ್ನು ಸಿಡಬ್ಲ್ಯೂಎಂಎ ಮುಂದೆ ಪ್ರಶ್ನಿಸುತ್ತೇವೆ: ಮಹೇಶ್, ಎಂಡಿ-ನೀರಾವರಿ ನಿಗಮ ನಿಯಮಿತ

ಸಿಡಬ್ಲ್ಯೂಆರ್ ಸಿ ನೀಡಿದ ಆದೇಶವನ್ನು ಸಿಡಬ್ಲ್ಯೂಎಂಎ ಮುಂದೆ ಪ್ರಶ್ನಿಸುತ್ತೇವೆ: ಮಹೇಶ್, ಎಂಡಿ-ನೀರಾವರಿ ನಿಗಮ ನಿಯಮಿತ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 26, 2023 | 6:15 PM

Share

ಅಧಿಕಾರಿಗಳ ನಿಯೋಗದಲ್ಲಿದ್ದ ಮಹೇಶ್​, ಕಾವೇರಿ ನೀರು ನಿಯಂತ್ರಣಾ ಸಮಿತಿಯ ಆದೇಶವನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರಶ್ನಿಸಲಿದ್ದೇವೆ ಎಂದು ಹೇಳಿದರು. ದಿನಾಂಕಗಳನ್ನು ಪ್ರಾಧಿಕಾರವೇ ಶೆಡ್ಯೂಲ್ ಮಾಡೋದ್ರಿಂದ ಅದರ ಮುಂದೆಯೇ ಸಮಸ್ಯೆ ಇಡುತ್ತೇವೆ, ನೀರು ಬಿಡುವುದು ಸಾಧ್ಯವೇ ಇಲ್ಲ ಅಂತ ಹೇಳಿದರೂ ನೀರು ಬಿಡುವಂತೆ ಆದೇಶಿಸಲಾಗಿದೆ ಎಂದು ಮಹೇಶ್ ಹೇಳಿದರು.

ದೆಹಲಿ: ಕಾವೇರಿ ನೀರು ಹಂಚಿಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೇ ಅನ್ಯಾಯವಾಗಿದೆ. ಇಂದು ಸಭೆಯೊಂದನ್ನು ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಮುಂದಿನ 18 ದಿನಗಳ ಕಾಲ ತಮಿಳಿನಾಡುಗೆ ನೀರು ಬಿಡುವಂತೆ ಆದೇಶ ಜಾರಿ ಮಾಡಿದೆ. ದೆಹಲಿಯಲ್ಲಿದು ಸಿಡಬ್ಲ್ಯೂಆರ್ ಸಿ  ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡುವಾಗ ಕರ್ನಾಟಕ ನೀರಾವರಿ ನಿಗಮದ (KNNL) ವ್ಯವಸ್ಥಾಪಕ ನಿರ್ದೇಶಕ ಮಹೇಶ್ (Mahesh) ಬಹಳ ಅತಂಕದಲ್ಲಿದ್ದರು. ಇಂದಿನ ಸಭೆಯಲ್ಲಿ ರಾಜ್ಯದ ಪರ ಹಾಜರಿದ್ದ ಅಧಿಕಾರಿಗಳ ನಿಯೋಗದಲ್ಲಿದ್ದ ಮಹೇಶ್​, ಕಾವೇರಿ ನೀರು ನಿಯಂತ್ರಣಾ ಸಮಿತಿಯ ಆದೇಶವನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರಶ್ನಿಸಲಿದ್ದೇವೆ ಎಂದು ಹೇಳಿದರು. ದಿನಾಂಕಗಳನ್ನು ಪ್ರಾಧಿಕಾರವೇ ಶೆಡ್ಯೂಲ್ ಮಾಡೋದ್ರಿಂದ ಅದರ ಮುಂದೆಯೇ ಸಮಸ್ಯೆ ಇಡುತ್ತೇವೆ, ನೀರು ಬಿಡುವುದು ಸಾಧ್ಯವೇ ಇಲ್ಲ ಅಂತ ಹೇಳಿದರೂ ನೀರು ಬಿಡುವಂತೆ ಆದೇಶಿಸಲಾಗಿದೆ ಎಂದು ಮಹೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ