ವೇದಿಕೆಗೆ ಆಗಮಿಸಿದ ಯತೀಂದ್ರ ಸಿದ್ದರಾಮಯ್ಯರನ್ನು ಸ್ವಾಗತಿಸುವ ಸಿಎಂ ಸಿದ್ದರಾಮಯ್ಯ ಅಸಲಿಗೆ ಅವರೇ ವರುಣಾದ ಶಾಸಕ ಅನ್ನುತ್ತಾರೆ!
ಅವರು ಮಾತಾಡುತ್ತಿರುವಾಗಲೇ ಪುತ್ರ ಯತೀಂದ್ರ ಸಿದ್ದರಾಮಯ್ಯ ವೇದಿಕೆಗೆ ಬಂದಾಗ ಸಿದ್ದರಾಮಯ್ಯ; ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಆಗಮಿಸಿದ್ದಾರೆ ಅವರನ್ನು ಸ್ವಾಗತಿಸಬೇಕು ಅಂತ ಹೇಳಿದಾಗ ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕುತ್ತಾರೆ.
ಮೈಸೂರು: ನಗರದಲ್ಲಿಂದು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಒಂದು ಹಿತವಚನ ನೀಡಿದರು. ಜನರು ತಮ್ಮ ಕಷ್ಟ ಸುಖಗಳಿಗೆ ಸ್ಪಂದಿಸಲಿ, ಸಮಸ್ಯೆಗಳನ್ನು ಬಗೆಹರಿಸಲಿ ಅಂತ ಅವರ ಪ್ರತಿನಿಧಿಯಾಗಿ ತಮ್ಮನ್ನು ಆರಿಸಿದ್ದಾರೆ, ಸುಮ್ಮನೆ ಕೂರೋದಿಕ್ಕಲ್ಲ, ಈ ಅರಿವು ತನ್ನಲ್ಲಿ ಮೊದಲಿಂದಲೂ ಇತ್ತು ಎಂದು ಹೇಳಿದರು. ಅವರು ಮಾತಾಡುತ್ತಿರುವಾಗಲೇ ಪುತ್ರ ಯತೀಂದ್ರ ಸಿದ್ದರಾಮಯ್ಯ (Dr Yatindra Siddaramaiah) ವೇದಿಕೆಗೆ ಆಗಮಿಸಿದಾಗ ಸಿದ್ದರಾಮಯ್ಯ, ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಬಂದಿದ್ದಾರೆ ಅವರನ್ನು ಸ್ವಾಗತಿಸಬೇಕು ಅಂತ ಹೇಳಿದಾಗ ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕುತ್ತಾರೆ. ಅಸಲಿಗೆ ವರುಣ ಕ್ಷೇತ್ರದ (Varuna Constituency) ಶಾಸಕ ಅವನೇ, ನನ್ನ ಗೆಲುವಿಗಾಗಿ ಬಹಳ ಕಷ್ಟಪಟ್ಟಿದ್ದಾನೆ, ನೀವು ವೋಟು ಹಾಕುದ್ದೀರಿ ನಿಮಗೆ ಕೃತಜ್ಞತೆಗಳು ಎಂದು ಸಿದ್ದರಾಮಯ್ಯ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ