ವರುಣನ ಆರ್ಭಟಕ್ಕೆ ಮುಳುಗಿದ ಕುಕ್ಕೆ ದೇವಸ್ಥಾನ: ಗುಡ್ಡ ಕುಸಿದು ಇಬ್ಬರು ಸಹೋದರಿಯರ ಸಾವು

| Updated By: ಆಯೇಷಾ ಬಾನು

Updated on: Aug 01, 2022 | 11:15 PM

ಭಕ್ತರು ದೇಗುಲ ಭೇಟಿಯನ್ನು 2 ದಿನ ಮುಂದೂಡಲು ಮನವಿ ಮಾಡಿದ್ದಾರೆ. ಇನ್ನು ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿಯ ಸಣ್ಣಪುಟ್ಟ ಸೇತುವೆಗಳು ಮುಳುಗಿವೆ.

ವರುಣನ ಆರ್ಭಟಕ್ಕೆ ಮುಳುಗಿದ ಕುಕ್ಕೆ ದೇವಸ್ಥಾನ:  ಗುಡ್ಡ ಕುಸಿದು ಇಬ್ಬರು ಸಹೋದರಿಯರ ಸಾವು
ವರುಣನ ಆರ್ಭಟಕ್ಕೆ ಮುಳುಗಿದ ಕುಕ್ಕೆ ಆದಿ ಸುಬ್ರಹ್ಮಣ್ಯ ದೇವಸ್ಥಾನ
Follow us on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ವರುಣನ ಆರ್ಭಟ(Karnatak Rain) ಜೋರಾಗಿದೆ.  ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಸಹೋದರಿಯರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಪರ್ವತಮುಖಿ  ಪ್ರದೇಶದಲ್ಲಿ ಗುಡ್ಡ ಕುಸಿದು  ಶ್ರುತಿ(11), ಜ್ಞಾನಶ್ರೀ(6) ಮೃತಪಟ್ಟಿದ್ದಾರೆ. ಸುಬ್ರಹ್ಮಣ್ಯ ಕುಮಾರಧಾರಾ ಬಳಿಯಿರುವ ಪರ್ವತಮುಖಿ ಪ್ರದೇಶದಲ್ಲಿ ಗುಡ್ಡ ಕುಸಿದು ಕುಸುಮಧಾರ, ರೂಪಶ್ರೀ ದಂಪತಿಯ ಇಬ್ಬರು ಪುತ್ರಿಯರು ಮೃತಪಟ್ಟಿದ್ದಾರೆ.

ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಸಿಬ್ಬಂದಿ ಶವ ಹೊರತೆಗೆದಿದ್ದಾರೆ. ಸ್ಥಳೀಯರ ಸಹಕಾರದಿಂದ ಶವಗಳನ್ನು ಹೊರತೆಗೆಯಲಾಗಿದೆ. ಸ್ಥಳಕ್ಕೆ ಪುತ್ತೂರು ಎಸಿ ಗಿರೀಶ್ ನಂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುಕ್ಕೆಯ ಆದಿ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತ

ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದ್ದು ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯದ(Kukke Subrahmanya Temple) ದರ್ಪಣ ತೀರ್ಥ ಉಕ್ಕಿಹರಿದಿದೆ. ಕುಕ್ಕೆಯ ಆದಿ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭಕ್ತರು ಬರದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ‌.ವಿ.ರಾಜೇಂದ್ರ ಮನವಿ ಮಾಡಿದ್ದಾರೆ.

ಭಕ್ತರು ದೇಗುಲ ಭೇಟಿಯನ್ನು 2 ದಿನ ಮುಂದೂಡಲು ಮನವಿ ಮಾಡಿದ್ದಾರೆ. ಇನ್ನು ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿಯ ಸಣ್ಣಪುಟ್ಟ ಸೇತುವೆಗಳು ಮುಳುಗಿವೆ. ಮಳೆ ಅವಾಂತರದಿಂದ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಪರದಾಡುತ್ತಿದ್ದಾರೆ. ಸಂಜೆ 5 ಗಂಟೆಯಿಂದ ಮಳೆ ಬಿಡದೇ ಸುರಿಯುತ್ತಿದೆ.

ಪರ್ವತಮುಖಿ ಬಳಿ ಗುಡ್ಡಕುಸಿತ

ಇನ್ನು ಭಾರಿ ಮಳೆ ಹಿನ್ನೆಲೆ ಸುಬ್ರಹ್ಮಣ್ಯ ಕುಮಾರಧಾರಾ ಬಳಿಯಿರುವ ಪರ್ವತಮುಖಿ ಬಳಿ ಗುಡ್ಡಕುಸಿತವಾಗಿದೆ. ಮನೆ ಮೇಲೆ ಗುಡ್ಡ ಜಾರಿದೆ. ಕುಸುಮಧಾರ, ರೂಪಶ್ರೀ ಎಂಬುವರ ಮನೆ ಮೇಲೆ ಗುಡ್ಡ ಕುಸಿದಿದ್ದು ಇಬ್ಬರು ಮಕ್ಕಳು ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ. ಗುಡ್ಡ ಕುಸಿತ ಆದ ಮನೆ ಒಳಗೆ ದಂಪತಿ ಮಕ್ಕಳಾದ ಶ್ರುತಿ(11), ಜ್ಞಾನಶ್ರೀ(6) ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಅಗ್ನಿಶಾಮಕದಳ ಮತ್ತು ಸುಬ್ರಹ್ಮಣ್ಯ ಪೊಲೀಸರು ದೌಡಾಯಿಸಿದ್ದಾರೆ. ಜೆಸಿಬಿ ಮೂಲಕ ಮಣ್ಣು ತೆಗೆದು ಸ್ಥಳೀಯರಿಂದ ರಕ್ಷಣಾ ಕಾರ್ಯ ನಡೆಸಿದರು. ಆದ್ರೆ ತಾಜಾ ಸುದ್ದಿಯ ಪ್ರಕಾರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

Published On - 9:32 pm, Mon, 1 August 22