ಮಂಗಳೂರು ವಿದ್ಯಾರ್ಥಿನಿಗೆ ವಕೀಲ ಕಿರುಕುಳ ಕೇಸ್: ಇನ್ನೂ ವಕೀಲ ರಾಜೇಶ್ ಭಟ್ ನಾಪತ್ತೆ, ಸಹಾಯ ಮಾಡಿದ ಸ್ನೇಹಿತ ಅರೆಸ್ಟ್

ಮಂಗಳೂರಿನ ಬೊಂದೆಲ್ ನಿವಾಸಿ ಅನಂತ್ ಭಟ್, ವಕೀಲ ರಾಜೇಶ್ ಭಟ್ ಪರಾರಿಯಾಗಲು ಸಹಾಯ ಮಾಡಿದ್ದ. ರಾಜೇಶ್ ಭಟ್ ಕಾರು, ಫೋನ್ ಸಹ ಅಜ್ಞಾತ ಸ್ಥಳದಲ್ಲಿಟ್ಟಿದ್ದ. ಹೀಗಾಗಿ ಅನಂತ್ ಭಟ್ನನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರು ವಿದ್ಯಾರ್ಥಿನಿಗೆ ವಕೀಲ ಕಿರುಕುಳ ಕೇಸ್: ಇನ್ನೂ ವಕೀಲ ರಾಜೇಶ್ ಭಟ್ ನಾಪತ್ತೆ, ಸಹಾಯ ಮಾಡಿದ ಸ್ನೇಹಿತ ಅರೆಸ್ಟ್
ವಕೀಲ ರಾಜೇಶ್ ಭಟ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 28, 2021 | 10:17 AM

ಮಂಗಳೂರು: ಇಂಟರ್ನ್‌ಶಿಪ್ ವಿದ್ಯಾರ್ಥಿನಿಗೆ ವಕೀಲನಿಂದ ಕಿರುಕುಳ ಕೇಸ್ಗೆ ಸಂಬಂಧಿಸಿ ಈವರೆಗೂ ವಕೀಲ ರಾಜೇಶ್ ಭಟ್ ಪತ್ತೆಯಾಗಿಲ್ಲ. ಸದ್ಯ ರಾಜೇಶ್ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಅನಂತ್ ಭಟ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ರಾಜೇಶ್ ಭಟ್ಗಾಗಿ ಮಂಗಳೂರು ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಮಂಗಳೂರಿನ ಬೊಂದೆಲ್ ನಿವಾಸಿ ಅನಂತ್ ಭಟ್, ವಕೀಲ ರಾಜೇಶ್ ಭಟ್ ಪರಾರಿಯಾಗಲು ಸಹಾಯ ಮಾಡಿದ್ದ. ರಾಜೇಶ್ ಭಟ್ ಕಾರು, ಫೋನ್ ಸಹ ಅಜ್ಞಾತ ಸ್ಥಳದಲ್ಲಿಟ್ಟಿದ್ದ. ಹೀಗಾಗಿ ಅನಂತ್ ಭಟ್ನನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ರಾಜೇಶ್ ತಪ್ಪಿಸಿಕೊಳ್ಳಲು ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜೇಶ್ನನ್ನು ಬೇರೆ ಸ್ಥಳದಲ್ಲಿ ಬಿಟ್ಟು ಬಂದಿರುವುದಾಗಿ ಅನಂತ್ ಮಾಹಿತಿ ನೀಡಿದ್ದು ಅಲ್ಲಿ ಬೇರೆ ಕಾರು, ಮೊಬೈಲ್, ಸಿಮ್ ಬಳಸ್ತಿರುವ ಬಗ್ಗೆ ಅನಂತ್ ವಿಚಾರಣೆ ವೇಳೆ ಮಾಹಿತಿ ಬಹಿರಂಗ ಪಡಿಸಿದ್ದಾನೆ.

ಟಿವಿ9 ಬಳಿ ಸಂತ್ರಸ್ತೆ ಅಳಲು ಟಿವಿ9 ಜೊತೆ ಮಾತನಾಡಿದ ಸಂತ್ರಸ್ತೆ ಸೆಪ್ಟೆಂಬರ್ 25ರಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಕಚೇರಿಗೆ ಹೋಗಿದ್ದೆ. ಮಧ್ಯಾಹ್ನದವರೆಗೂ ಕಚೇರಿಯಲ್ಲಿ ಕೆಲಸ ಮಾಡಿದೆ. ಕೆ.ಎಸ್.ಎನ್. ರಾಜೇಶ್ ಭಟ್ ಮಧ್ಯಾಹ್ನ 2:00 ಗಂಟೆಗೆ ತನ್ನ ಚೇಂಬರಿಗೆ ನನ್ನನ್ನು ಕರೆದಿದ್ದರು. ಎಮೋಷನಲ್ ಕೇಸ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ವೇಳೆ ನಾನು ತನ್ನ ಕೌಟುಂಬಿಕ ಸಮಸ್ಯೆ ಹೇಳಿಕೊಂಡಿದ್ದೆ. ಆಗ ನನ್ನನ್ನು ಸಂತೈಸಲು ವಕೀಲ ರಾಜೇಶ್ ತಬ್ಬಿಕೊಂಡರು. ಬ್ಯಾಡ್ ಟಚ್ ಗಮನಕ್ಕೆ ಬಂದರೂ ಗೊಂದಲದಲ್ಲಿದ್ದೆ. ಖಾಸಗಿ ಅಂಗಾಂಗಗಳನ್ನ ಮುಟ್ಟಿ ಕಿರುಕುಳ ನೀಡಿದ್ದ ರಾಜೇಶ್. ಆಗ ನಾನು ಆತನಿಂದ ತಪ್ಪಸಿಕೊಂಡು ಹೊರ ಹೋಗಿದ್ದಾಗಿ ಸಂತ್ರಸ್ತ ಯುವತಿ ಮಂಗಳೂರಿನಲ್ಲಿ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಇನ್ನು ಹೊರಗೆ ಗೊತ್ತಾದರೆ ನಿನ್ನ ಡೆಡ್ ಬಾಡಿ ಸಿಗುತ್ತೆ ಅಂತ ಬೆದರಿಕೆ ಹಾಕಿದ್ದಾರೆ ಎಂದರು.

ಸಿಸಿಟಿವಿ ಫುಟೇಜ್ ಡಿಲೀಟ್ ಇನ್ನು ಸೆಪ್ಟೆಂಬರ್ 25 ಮತ್ತು 26ರ ಸಿಸಿಟಿವಿ ಫುಟೇಜ್ ಡಿಲೀಟ್ ಆಗಿದೆ. ಮಂಗಳೂರಿನ ಕರಂಗಲ್ಪಾಡಿ ಯಲ್ಲಿರುವ ವಕೀಲ ರಾಜೇಶ್ ಭಟ್ ಕಚೇರಿಗೆ ನೆನ್ನೆ ಮಹಜರಿಗೆ ಹೋದ ವೇಳೆ ಡಿಲೀಟ್ ಆಗಿರುವ ವಿಚಾರ ಬೆಳಕಿಗೆ‌ ಬಂದಿದೆ.

ಸಂತ್ರಸ್ತೆ ಕೆಲಸಕ್ಕೆ ಸೇರಿದ ಕೆಲದಿನಗಳಲ್ಲಿ ವಕೀಲ ರಾಜೇಶ್ ಭಟ್ ವಾಟ್ಸಪ್ ಮೆಸೇಜ್ನಲ್ಲಿ ಸೆಲ್ಫಿ ಕೇಳಿದ್ದನಂತೆ. ಈ ವೇಳೆ ಸೆಲ್ಫಿ ಕಳಿಸಲು ಸಂತ್ರಸ್ತ ಯುವತಿ ನಿರಾಕರಿಸಿದ್ದಳಂತೆ. ಸಿಸಿಟಿವಿಯಲ್ಲಿದ್ದ ಸಂತ್ರಸ್ತ ಯುವತಿಯ ಚಲನವಲನ ವಿಡಿಯೋಗಳು ಮತ್ತು ಫೋಟೋ ಕ್ರಾಪ್ ಮಾಡಿ ಆಕೆಯ ಮೊಬೈಲ್ಗೆ ರಾಜೇಶ್ ಭಟ್ ಕಳುಹಿಸುತ್ತಿದ್ದನಂತೆ. ಯಾವಾಗಲೂ ಸ್ಮೈಲ್ ಮಾಡುತ್ತಾ ಇರು ಚೆನ್ನಾಗಿ ಕಾಣುತ್ತೀಯ ಅಂತ ಕಾಮೆಂಟ್ ಮಾಡುತ್ತಿದ್ದ ಎಂದು ಸಂತ್ರಸ್ತೆ ಟಿವಿ9 ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಇನ್ನು ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಈ ರೀತಿ ಆಗುತ್ತಿರುವ ಬಗ್ಗೆ ತಿಳಿಸಲು ಸಂತ್ರಸ್ತೆ ಆರೋಪಿ ರಾಜೇಶ್ ಭಟ್ ಪತ್ನಿಯನ್ನು ಸಂಪರ್ಕಿಸಿದ್ದರು. ರಾಜೇಶ್ ಭಟ್ನ ಲೈಂಗಿಕ ಕಿರುಕುಳದ ಬಗ್ಗೆ ಪತ್ನಿಗೆ ಮಾಹಿತಿ ನೀಡಿದ್ದರು. ಕಚೇರಿಯ ಸಿಸಿಟಿವಿ ದೃಶ್ಯವನ್ನು ಕೂಡ ಪರಿಶೀಲಿಸಿ ಅಂತ ಹೇಳಿದ್ರು. ತಾನು ಆರೋಪಿಯ ಪತ್ನಿ ಜೊತೆ ಮಾತನಾಡಿರುವ ಆಡಿಯೋ ರೆಕಾರ್ಡ್ ಮಾಡಿರುವ ವಿಚಾರ ಸಂತ್ರಸ್ತೆ ಟಿವಿ9ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಬಾರ್ ಅಸೋಸಿಯೇಷನ್​ನಿಂದ ವಕೀಲ ರಾಜೇಶ್ ಭಟ್ ಅಮಾನತು

Published On - 10:06 am, Thu, 28 October 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?