ದಕ್ಷಿಣ ಕನ್ನಡ ಜಿಲ್ಲೆ ಜನರ ರಕ್ತದ ಬಣ್ಣ ಕೇಸರಿ, ಕುಯ್ದ್ರೆ ಬರೋದು ಕೆಂಪು ರಕ್ತ ಅಲ್ಲ: ಮಾಳವಿಕಾ ಅವಿನಾಶ್
ದಕ್ಷಿಣ ಕನ್ನಡ ಜಿಲ್ಲೆಯ ಜನರ ರಕ್ತದ ಬಣ್ಣ ಕೇಸರಿ, ಕುಯ್ದ್ರೆ ಬರೋದು ಕೆಂಪು ರಕ್ತ ಅಲ್ಲ, ಕೇಸರಿ ಬಣ್ಣದ ರಕ್ತ ಎಂದು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್(Malavika Avinash) ಹೇಳಿದ್ದಾರೆ. ಪುತ್ತೂರಿನಲ್ಲಿ ನಡೆದ ನಾರಿಶಕ್ತಿ ಮಹಿಳಾ ಸಮಾವೇಶದಲ್ಲಿ ಅಬ್ಬರದ ಭಾಷಣ ಮಾಡಿದ ಅವರು, ‘ 28ಕ್ಕೆ 28 ಕ್ಷೇತ್ರ ಗೆಲ್ಲುವ ಸವಾಲು ನಮ್ಮ ಮುಂದಿದೆ ಎಂದರು.
ದಕ್ಷಿಣ ಕನ್ನಡ, ಏ.10: ಲೋಕಸಭಾ ಚುನಾವಣೆ(Lok sabha election) ಹತ್ತಿರವಾಗುತ್ತಿದ್ದಂತೆ ಅದರ ಕಾವು ಜೋರಾಗಿದೆ. ಉಭಯ ಪಕ್ಷಗಳು ಕೂಡ ಅಬ್ಬರದ ಪ್ರಚಾರವನ್ನ ಕೈಗೊಂಡಿದ್ದಾರೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ರಕ್ತದ ಬಣ್ಣ ಕೇಸರಿ, ಕುಯ್ದ್ರೆ ಬರೋದು ಕೆಂಪು ರಕ್ತ ಅಲ್ಲ, ಕೇಸರಿ ಬಣ್ಣದ ರಕ್ತ ಎಂದು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್(Malavika Avinash) ಹೇಳಿದ್ದಾರೆ. ಪುತ್ತೂರಿನಲ್ಲಿ ನಡೆದ ನಾರಿಶಕ್ತಿ ಮಹಿಳಾ ಸಮಾವೇಶದಲ್ಲಿ ಅಬ್ಬರದ ಭಾಷಣ ಮಾಡಿದ ಅವರು, ‘ 28ಕ್ಕೆ 28 ಕ್ಷೇತ್ರ ಗೆಲ್ಲುವ ಸವಾಲು ನಮ್ಮ ಮುಂದಿದೆ ಎಂದರು.
ಮೋದಿಜಿ ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ
ಇನ್ನು ಬ್ರಿಜೇಶ್ ಚೌಟ ಅಭ್ಯರ್ಥಿ ಅಲ್ಲ, ನನ್ನ ಲೆಕ್ಕದಲ್ಲಿ ಅವರು ಲೋಕಸಭಾ ಸದಸ್ಯ. ಜೊತೆಗೆ ಮೋದಿಜಿ ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ಆದರೆ, ಎಷ್ಟು ಅಂತರದಲ್ಲಿ ಗೆಲ್ಲಿಸುತ್ತೇವೆ ಎಂಬ ಸವಾಲು ನಮ್ಮ ಮುಂದಿದೆ. 26 ನೇ ತಾರೀಖು ಹೆಚ್ಚಿನ ಮದುವೆ ಮುಹೂರ್ತ ಇದೆಯಂತೆ, ಮದುವೆಗೆ ಹೋಗ್ತಿನಿ ಎಂದು ನರೇಂದ್ರ ಮೋದಿಗೆ ಅನ್ಯಾಯ ಮಾಡಿ ಹೋಗಿ ಬಿಟ್ಟಿರಾ?, ಅದಕ್ಕೂ ಮುಂಚೆ ಬಟನ್ ಒತ್ತಿ ಎಲ್ಲಿಗಾದರೂ ಹೋಗೋಕೆ ಹೇಳಿ ಎಂದರು.
ಇದನ್ನೂ ಓದಿ:ನೂರಾರು ವರ್ಷಗಳಿಂದ ಇದ್ದರೂ ಸಿಗದ ಹಕ್ಕು ಪತ್ರಗಳು; ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು
ಕಾಂಗ್ರೆಸ್ ಪಕ್ಷ ಎಲ್ಲದರ ಮೇಲೂ ತಮ್ಮ ಬೋರ್ಡ್ನ್ನು ಹಾಕಿಕೊಳ್ಳುತ್ತದೆ. ಹೀಗಾಗಿ ಜನರಿಗೆ ನಾವು ಮನವರಿಕೆ ಮಾಡಿಕೊಡಬೇಕು. ಸತತ ನಾಲ್ಕು ವರ್ಷಗಳ ಕಾಲ ಉಚಿತ ಆಹಾರವನ್ನ ಕೊಟ್ಟ ದೇಶ ಇರುವುದಕ್ಕೆ ಸಾಧ್ಯವಿಲ್ಲ. ಆದರೆ ನಮ್ಮ ದೇಶದ 80 ಕೋಟಿ ಜನರಿಗೆ 2020 ರಿಂದ ಇಲ್ಲಿಯವರೆಗೂ ನಡೆಯುತ್ತಿದೆ. ಅನ್ನಸಂತರ್ಪಣೆ, ಧಾನ್ಯ ಸಂತರ್ಪಣೆ ಮೂಲಕ ಎಂದರು. ಮತ್ತೊಮ್ಮೆ ನಾನು ಬರುವಷ್ಟರಲ್ಲಿ ಬ್ರಿಜೇಶ್ ಚೌಟ ಅವರು ಸಂಸತ್ ಸದಸ್ಯ ಆಗಿರಲಿ ಎಂದು ಹಾರೈಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:59 pm, Wed, 10 April 24