Suicide: ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದು ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ವಿಜೇಶ್ ಶೆಟ್ಟಿಗಾರ್ ಎಂಬ ತಂದೆ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದಿದ್ದಾರೆ. ಬಳಿಕ ಪತ್ನಿಯನ್ನು ಕರೆದುಕೊಂಡು ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Suicide: ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದು ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಸಾಂದರ್ಭಿಕ ಚಿತ್ರ
Updated By: ಆಯೇಷಾ ಬಾನು

Updated on: Jun 23, 2022 | 10:04 PM

ಮಂಗಳೂರು: ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದು ಬಳಿಕ ಪತ್ನಿಯೊಂದಿಗೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಪದ್ಮನೂರು ಬಳಿ ನಡೆದಿದೆ. ರಶ್ಮಿತಾ 14, ಉದಯ್ 11, ದಕ್ಷಿತ್ 04 ಮೃತ ದುರ್ದೈವಿಗಳು. ವಿಜೇಶ್ ಶೆಟ್ಟಿಗಾರ್ ಎಂಬ ತಂದೆ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದಿದ್ದಾನೆ. ಬಳಿಕ ಪತ್ನಿಯನ್ನು ಕರೆದುಕೊಂಡು ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ವಿಜೇಶ್ ಶೆಟ್ಟಿಗಾರ್ ತನ್ನ ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದಿದ್ದಾನೆ. ಬಳಿಕ ಪತ್ನಿ ಮನೆಗೆ ಬಂದಾಗ ಆಕೆಯನ್ನೂ ಸಹ ಬಲವಂತವಾಗಿ ಕರೆದುಕೊಂಡು ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಸ್ಥಳೀಯರು ಅವರನ್ನು ತಡೆದು ಬುದ್ಧಿ ಹೇಳಿದ್ದಾರೆ. ಆದ್ರೆ ಅಮಾಯಕ ಮೂರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: BBMP ward delimitation: ಬಿಬಿಎಂಪಿ 243 ವಾರ್ಡುಗಳ ವಿಂಗಡಣೆಯಾಯ್ತು: ಆಕ್ಷೇಪಣೆ-ಸಲಹೆಗಳನ್ನು ಸಾರ್ವಜನಿಕರು ಅಂತರ್ಜಾಲ ತಾಣದಲ್ಲಿ ಸಲ್ಲಿಸಬಹುದು

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಹರಿದ ನೆತ್ತರು
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ನೆತ್ತರು ಹರಿದಿದೆ. ತಂಗಿಯನ್ನ ಚುಡಾಯಿಸಿದ ಕಾರಣಕ್ಕೆ ಅಣ್ಣಂದಿರು ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿಯಲ್ಲಿ ನಡೆದಿದೆ. ಚಂದ್ರಶೇಖರ್ ಎಂಬಾತನಿಗೆ ಯುವತಿಯ ಅಣ್ಣ-ತಮ್ಮ ಚಾಕು ಇರಿದಿದ್ದಾರೆ. ಕುಟುಂಬಸ್ಥರು ಗಾಯಾಳು ಚಂದ್ರುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

Published On - 8:16 pm, Thu, 23 June 22