Hanuman Flag Campaign: ಕರ್ನಾಟಕದಲ್ಲಿ ಹನುಮ ಧ್ವಜ ಅಭಿಯಾನ: ರಸ್ತೆ, ಮನೆ ಮನೆಯಲ್ಲಿ ಬಾವುಟ ಹಾರಿಸುತ್ತೇವೆ: ವಿಹೆಚ್​ಪಿ

| Updated By: Digi Tech Desk

Updated on: Jan 29, 2024 | 1:04 PM

Mandya Hanuman Flag Row: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಗ್ರಾಮದ 108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಈ ವಿಚಾರ ತೀರ್ವ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ವಿಶ್ವ ಹಿಂದೂ ಪರಿಷತ್​ ಸುದ್ದಿಗೋಷ್ಠಿ ನಡೆಸಿ ರಾಜ್ಯ ಕಾಂಗ್ರೆಸ್​ಗೆ ಎಚ್ಚರಿಕೆ ನೀಡಿದೆ.

Hanuman Flag Campaign: ಕರ್ನಾಟಕದಲ್ಲಿ ಹನುಮ ಧ್ವಜ ಅಭಿಯಾನ: ರಸ್ತೆ, ಮನೆ ಮನೆಯಲ್ಲಿ ಬಾವುಟ ಹಾರಿಸುತ್ತೇವೆ: ವಿಹೆಚ್​ಪಿ
ವಿಹೆಚ್​ಪಿ ಮುಖಂಡ ಶರಣ್ ಪಂಪುವೆಲ್
Follow us on

ಮಂಗಳೂರು, ಜನವರಿ 29: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ (Hanuman Flag) ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಊರಿನ ರಾಮಭಕ್ತರು ಒಟ್ಟಾಗಿ ಸೇರಿ ಹನುಮ ಧ್ವಜ ಹಾರಿಸಿದ್ದಾರೆ. ಆದರೆ ಮುಸ್ಲಿಂರ ಓಟಿಗಾಗಿ ರಾಜ್ಯ ಸರ್ಕಾರ (Karnataka Government) ಧ್ವಜ ತೆಗೆದಿದೆ. ಈ ಘಟನೆಯನ್ನು ವಿ‌ಹೆಚ್​ಪಿ, ಬಜರಂಗದಳ ಖಂಡಿಸುತ್ತೆ. ಹನುಮ ಧ್ವಜ ಕೆಳಗಿಳಿಸಿದ ರೀತಿ ಮತ್ತೆ ಹನುಮ ಧ್ವಜ ಹಾರಿಸಬೇಕು. ಇಲ್ಲದಿದ್ದರೆ ಇಡೀ ರಾಮಭಕ್ತರಿಗೆ ಕರೆ ನೀಡುತ್ತೇವೆ. ರಾಜ್ಯದಲ್ಲಿ ಹನುಮ ಧ್ವಜ ಅಭಿಯಾನ ಮಾಡುತ್ತೇವೆ. ರಸ್ತೆ, ಮನೆ ಮನೆಯಲ್ಲಿ ಹನುಮ ಧ್ವಜ ಹಾರಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ (VHP)​ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಈ ಮೂಲಕ ಹನುಮ ಭಕ್ತಿಯನ್ನು ಸರ್ಕಾರಕ್ಕೆ ತೋರಿಸುತ್ತೇವೆ. ಹಿಂದೂ ಸಮಾಜಕ್ಕೆ, ರಾಮ-ಹನುಮ ಭಕ್ತರ ಮನಸ್ಸಿಗೆ ನೋವಾಗಿದೆ. ರಾಷ್ಟ್ರ ಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ. ಆದರೆ ಅದನ್ನು ಹಾರಿಸಲು ಅದರದ್ದೇ ಆದ ನೀತಿ ನಿಯಮಗಳಿವೆ. ರಾಷ್ಟ್ರ ಧ್ವಜಕ್ಕೂ ಅವಮಾನ ಮಾಡಿದ್ದಾರೆ. ಈ ರೀತಿ ಮಾಡಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಹಿಂದೂಸ್ತಾನ್​ದಲ್ಲಿ ಕೇಸರಿ ಧ್ವಜವೇ ಹಾರಾಡುತ್ತೆ: ಮುತಾಲಿಕ್​​

ಇನ್ನು ಪ್ರಕರಣ ಸಂಬಂಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ಈ ಕಾಂಗ್ರೆಸ್ ನವರಿಗೆ ಕೇಸರಿ ಕಂಡ್ರೆ ಆಗಲ್ಲ. ಹಿಂದೂ, ಹಿಂದುತ್ವ ಕಂಡ್ರೆ ಆಗಲ್ಲ. ಇಡೀ ದೇಶದಲ್ಲಿ ಶ್ರೀ ರಾಮನ ಅಲೆಯಲ್ಲ, ಸುನಾಮಿಯೇ ಎದ್ದಿದೆ. ಮನೆ ಮನೆ, ಹಳ್ಳಿ ಹಳ್ಳಿಗಳಲ್ಲಿ ಆ ವೈಭವ ನೋಡಲಾಗದೇ ಹೊಟ್ಟೆ ಉರಿತಾಯಿದೆ ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ವಿವಾದ: ರಾಜ್ಯ ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್​ ಖರ್ಗೆ ವಾಗ್ದಾಳಿ

ಕೇಸರಿ ಯಾವುದೋ ವ್ಯಕ್ತಿ, ಧರ್ಮ ಪಕ್ಷದ್ದೋ ಅಲ್ಲ, ಸಾವಿರಾರು ವರ್ಷದಿಂದ ಬಂದ ಕೇಸರಿ ಪತಾಕೆ ನಿಮಗೇನು ತೊಂದರೆ ಕೊಡುತ್ತಿದೆ. ಮುಸ್ಲಿಂ ವ್ಯಕ್ತಿಗಳು ಅಡ್ಡಪಡಿಸಿದರೇ, ಅವರಿಗೆ ಹೇಳಿ. ಇದು ಪಾಕಿಸ್ತಾನ ಅಲ್ಲ, ಅಫ್ಘಾನಿಸ್ತಾನ ಅಲ್ಲ, ಭಾರತ ಎಂದು. ಹಿಂದೂಸ್ತಾನ್​ದಲ್ಲಿ ಕೇಸರಿ ಧ್ವಜವೇ ಹಾರಾಡುತ್ತೆ. ಇದನ್ನ ಅವರಿಗೆ ಹೇಳೋದು ಬಿಟ್ಟು, ಇವತ್ತು ಕೇಸರಿ ಧ್ವಜ ಇಳಿಸುವ ಕಾಂಗ್ರೆಸ್​​ನವರು ಧರ್ಮ ದ್ರೋಹಿಗಳು ಎಂದರು.

ಎರಡು ದಿನಗಳ‌ ಹಿಂದೆ ಮಂಡ್ಯ ಜಿಲ್ಲೆಯ ಕೆರಗೋಡನಲ್ಲಿ, ಕೇಸರಿ ಬಣ್ಣದ ಹನುಮನ ಚಿತ್ರವಿರುವ ಧ್ವಜವನ್ನ ತೆಗೆದು ಹಾಕಿದ್ದಾರೆ. ಯಾರೂ ಕಂಪ್ಲೇಟ್ ಕೊಡದೇ, ಯಾವುದೇ ವಿವಾದ ಇಲ್ಲದೇ ಈಗ ಅದನ್ನ ಸಡನ್ ಆಗಿ ತೆಗೆಯುವ ಕಾರಣ ಏನು 108 ಅಡಿಯ ಧ್ವಜದ ಕಂಬ ಇದೆ, ಇದನ್ನ ನೋಡಿದರೇ ಅಲ್ಲಿರುವ ನಾಗರಿಕರ, ಯುವಕರ ಉತ್ಸಾಹವನ್ನ ಮೆಚ್ಚಬೇಕು. ಶ್ರೀರಾಮನ ಮೇಲಿರುವ ಕಳಕಳಿ ಇಂದ ಜನವರಿ 22ರಂದು ಆ ಕಂಬವನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಜನವರಿ 26 ರಂದು, ಹನುಮ ಧ್ವಜ ಇಳಿಸಿ ಆ ಕಂಬದ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಾರೆ. ಮಾರನೇಯ ದಿನ ಹನುಮ ಧ್ವಜ ಹಾಕಿದ್ದಾರೆ. ಅದೇ ಸ್ಥಳದಲ್ಲಿ ಮತ್ತೆ ಹನುಮಧ್ವಜ ಪ್ರತಿಷ್ಠಾಪನೆ ಆಗಬೇಕು ಎಂದು ಮುತಾಲಿಕ್ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:57 pm, Mon, 29 January 24