ಮುಂಜಾನೆಯೇ ಎರಡೂವರೆ ಗಂಟೆ ನೀರಿನಲ್ಲಿ ತೇಲಿದ ಬಾಲಕ – ನೋಬಲ್ ವರ್ಲ್ಡ್ ರೆಕಾರ್ಡ್ಸ್‌ಗೆ​ ಎಂಟ್ರಿ ಕೊಟ್ಟ

| Updated By: ಸಾಧು ಶ್ರೀನಾಥ್​

Updated on: Jan 17, 2024 | 2:56 PM

ಕಲಿಕೆಯ ಹಂತದಲ್ಲಿ ಶಫಿನ್‌ನಲ್ಲಿದ್ದ ಈಜು ಪ್ರತಿಭೆಯನ್ನು ಅನಿರೀಕ್ಷಿತವಾಗಿ ಕಂಡುಕೊಂಡೆ. ಗಮನಾರ್ಹವಾದ ಪ್ರಾವೀಣ್ಯತೆಯನ್ನು ಪ್ರದರ್ಶಿಸುತ್ತಿದ್ದ. ತರಬೇತಿ ನಂತರ ಈಗ ದಾಖಲೆ ಮಾಡಿರೋದು ಸಂತೋಷ ತಂದಿದೆ ಅಂತಾ ಕೋಚ್ ಆರೋಮಲ್ ಹೇಳಿದ್ದಾರೆ.

ಮುಂಜಾನೆಯೇ ಎರಡೂವರೆ ಗಂಟೆ ನೀರಿನಲ್ಲಿ ತೇಲಿದ ಬಾಲಕ - ನೋಬಲ್ ವರ್ಲ್ಡ್  ರೆಕಾರ್ಡ್ಸ್‌ಗೆ​ ಎಂಟ್ರಿ ಕೊಟ್ಟ
ಮುಂಜಾನೆಯೇ ಎರಡೂವರೆ ಗಂಟೆ ನೀರಿನಲ್ಲಿ ತೇಲಿದ ಬಾಲಕ - ವರ್ಲ್ಡ್ ರೆಕಾರ್ಡ್​​
Follow us on

ಕರಾವಳಿಯಲ್ಲಿ ಸಮುದ್ರವಿದೆ. ಇಲ್ಲಿನ ಬಹುತೇಕರಿಗೆ ಈಜು ಹುಟ್ಟುತ್ತಾನೆ ಬಂದಿರುತ್ತೆ. ಆದ್ರೆ ಇಲ್ಲೊಬ್ಬ ಬಾಲಕ ಈಜನ್ನು ಶಾಲೆಯಲ್ಲಿ ಕಲಿತು ಕೇವಲ ಈಜೋದು ಮಾತ್ರವಲ್ಲದೇ ನೀರಿನಲ್ಲಿ ತೇಲುವ ವಿದ್ಯೆಯನ್ನೂ ಕರಗತ ಮಾಡಿಕೊಂಡಿದ್ದಾನೆ. ಅಷ್ಟೆ ಅಲ್ಲ. ಬರೋಬ್ಬರಿ ಎರಡೂವರೆ ಗಂಟೆ ನೀರಿನಲ್ಲಿ ತೇಲೊ ಮೂಲಕ ನೊಬೆಲ್ ಬುಕ್ ಆಫ್ ರೆಕಾರ್ಡ್ ಗೆ ಎಂಟ್ರಿ ಕೊಟ್ಟಿದ್ದಾನೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ. ಹೀಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ತೇಲುವ ವಿದ್ಯಾರ್ಥಿಯ ಹೆಸರು ಶಫಿನ್ ಮುಸ್ತಾಫಾ. ಮಂಗಳೂರಿನ ಜೆಪ್ಪಿನಮೊಗರು ಬಳಿಯ ಪ್ರೆಸ್ಟೀಜ್ ಇಂಟರ್ನಾಶನಲ್ ಶಾಲೆ ವಿದ್ಯಾರ್ಥಿ. 8ನೇ ತರಗತಿ ಓದುತ್ತಿರೋ ಈತ ಈಜುವುದಲ್ಲಿ ಎಕ್ಸಪರ್ಟ್. ಕೇವಲ ಈಜೋದು ಮಾತ್ರವಲ್ಲ, ನೀರಿನ ಮೇಲೆ ಕೈಕಾಲು ಆಡಿಸದೆ ತೇಲಬಲ್ಲ ಚತುರ ಈತ.

ಮಂಗಳೂರಿನ ಶಫಿನ್ ಮುಸ್ತಫಾ 2 ಗಂಟೆ 30 ನಿಮಿಷ 13 ಸೆಕೆಂಡುಗಳ ಕಾಲ ನೀರಿನ ಮೇಲೆ ತೇಲುವ ಮೂಲಕ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಎಂಟ್ರಿ ಕೊಟ್ಟಿದ್ದಾನೆ. ಮುಂಜಾನೆ 5.30 ರಿಂದ ತೇಲಲು ಆರಂಭಿಸಿದ 14 ವರ್ಷದ ಈ ವಿದ್ಯಾರ್ಥಿ ಈ ದಾಖಲೆಯನ್ನು ನಿರ್ಮಿಸಿದ್ದಾನೆ. ಶಫಿನ್ ಆರೋಮಲ್ ಎಂಬುವವರಿಗೆ ಈ ತರಬೇತಿ ಪಡೆದಿದ್ದಾನೆ. ಸಾಧನೆ ಮಾಡಲು ಬೆಂಬಲ ಮತ್ತು ಮಾರ್ಗದರ್ಶನ ನೀಡಿದ ಶಿಕ್ಷಕರು ಮತ್ತು ಪ್ರೆಸ್ಟೀಜ್ ಇಂಟರ್​​ ನ್ಯಾಷನಲ್ ಶಾಲೆಯ ಆಡಳಿತ ಮಂಡಳಿಗೆ ಶಫೀನ್ ಧನ್ಯವಾದ ಹೇಳಿದ್ದಾನೆ.

ಇನ್ನು ಕೋಚ್ ಆರೋಮಲ್ ಅವರು ಅನಿರೀಕ್ಷಿತವಾಗಿ, ನಾನು ಶಫಿನ್‌ನಲ್ಲಿ ಈಜು ಪ್ರತಿಭೆಯನ್ನು ಕಂಡುಕೊಂಡೆ. ಕಲಿಕೆಯ ಹಂತದಲ್ಲಿ, ಆತ ಗಮನಾರ್ಹವಾದ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದ. ಆರಾಮವಾಗಿ 15-30 ನಿಮಿಷಗಳ ಕಾಲ ಈಜುತ್ತಿದ್ದ. ಆತನ ತರಬೇತಿ ಸಮಯವನ್ನು ವಿಸ್ತರಿಸಿದೆ. ಈಗ ದಾಖಲೆ ಮಾಡಿರೋದು ಸಂತೋಷ ತಂದಿದೆ ಅಂತಾ ಹೇಳಿದ್ದಾರೆ.

ಈ ಹಿಂದೆ 2023ರಲ್ಲಿ ಆಂಧ್ರಪ್ರದೇಶದ ಕರಣಂ ಸ್ನೇಹಿತ್ ಸಿಂಹ ಅವರು 2 ಗಂಟೆ 21 ನಿಮಿಷ 53 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು ಎಂದು ಡಾ.ಎಸ್.ಕೃಷ್ಣಮೂರ್ತಿ. ಕರ್ನಾಟಕದ ಡೈರೆಕ್ಟರ್, ನೊಬೆಲ್ ಬುಕ್ ಆಫ್ ರೆಕಾರ್ಡ್ ಅವರು ತಿಳಿಸಿದ್ದಾರೆ. ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕಾರಿಗಳು, ಪೋಷಕರಾದ ಅಬ್ದುಲ್ ಲತೀಫ್ ಮತ್ತು ಸಫಿಯಾ ಬಾನು ಅವರು ದಾಖಲೆ ಮುರಿಯುವ ಕ್ಷಣಕ್ಕೆ ಸಾಕ್ಷಿಯಾದರು.

ಸದ್ಯ 15 ವರ್ಷದ ಒಳಗಿನ ಬಾಲಕರ ರೆಕಾರ್ಡ್ ನಲ್ಲಿ ಈ ದಾಖಲೆ ನಮೂದಾಗಿದೆ. ಇನ್ನು ಮುಂದೆ ಕೂಡ ಸಾಕಷ್ಟು ದಾಖಲೆಯನ್ನು ಮಾಡವ ಗುರಿಯನ್ನು ಇಟ್ಟುಕೊಂಡಿದ್ದಾನೆ ಶಫಿನ್ ಮುಸ್ತಫಾ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ