ಮಂಗಳೂರು, ನ.20: ಅವಸರದಲ್ಲಿ ಬಿಟ್ಟು ಹೋಗಿದ್ದ 50 ಸಾವಿರ ಮೌಲ್ಯದ ವಸ್ತುಗಳಿದ್ದ ಬ್ಯಾಗ್ಅನ್ನು ಮಾಲಿಕರಿಗೆ ವಾಪಸ್ ನೀಡಿವ ಮೂಲಕ ಕಂಡಕ್ಟರ್ (Conductor) ಪ್ರಾಮಾಣಿಕತೆ ಮರೆದಿದ್ದಾರೆ. ಉಡುಪಿಯಿಂದ ಮಂಗಳೂರಿಗೆ (Mangalore) ತೆರಳುತ್ತಿದ್ದ (ಕೆಎ 20 ಎಎ 8296) ಬಸ್ನಲ್ಲಿ ಮಹಿಳೆಯೊಬ್ಬರು ಅವಸರದಲ್ಲಿ ವ್ಯಾನಿಟಿ ಬ್ಯಾಗ್ ಬಿಟ್ಟು ಹೋಗಿದ್ದರು. ವ್ಯಾನಿಟಿ ಬ್ಯಾಗ್ನಲ್ಲಿ 50,000 ರೂ ಮೌಲ್ಯದ ವಸ್ತುಗಳಿದ್ದವು.
ಈ ಬ್ಯಾಗ್ಅನ್ನು ಕಂಡೆಕ್ಟರ್ ಪಾಂಡೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಸೋಮವಾರ (ನವೆಂಬರ್ 20) ರಂದು ಪಾಂಡೇಶ್ವರ ಪೊಲೀಸ್ ಠಾಣೆ ಎಎಸ್ಐ ಶ್ರೀಧರ್ ಅವರು ವ್ಯಾನಿಟ್ ಬ್ಯಾಗ್ ಮಾಲಿಕರನ್ನು ಕರೆಸಿದ್ದಾರೆ. ನಂತರ ಕಂಡಕ್ಟರ್ ಜಯರಾಜ್ ಕೂಡ ಠಾಣೆಗೆ ಆಗಮಿಸಿದರು. ಈ ವೇಳೆ ಎಎಎಸ್ಐ ಸಮ್ಮುಖದಲ್ಲಿ ಕಂಡಕ್ಟರ್ ಜಯರಾಜ್, ಮಹಿಳೆಗೆ ವ್ಯಾನಿಟಿ ಬ್ಯಾಗ್ ಅನ್ನು ಹಿಂತಿರುಗಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಬಸ್ಸಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮರೆತು ಹೋದವರಿಗೆ ಹಿಂದಿರುಗಿಸಿದ ಕಂಡಕ್ಟರ್!
ಕಂಡೆಕ್ಟರ್ ಜಯರಾಜ್ ಅವರ ಪ್ರಾಮಾಣಿಕತೆ ಸ್ಪೂರ್ತಿದಾಯಕವಾಗಿದೆ. ಕಂಡಕ್ಟರ್ ಜಯರಾಜ್ ಅವರ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ