ಬೆಳಗಾವಿ ಅಧಿವೇಶನದ ಬಳಿಕ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಪರಿವರ್ತನೆಯಾಗಲಿದೆ: ನಳಿನ್ ಕುಮಾರ್ ಕಟೀಲ್, ಸಂಸದ
ಹಸ್ತದೊಳಗೆ ಹಸ್ತ ಆಪರೇಶನ್ ನಡೆದಿದೆ ಎಂದು ಹೇಳಿದರು. ಸುಮಾರು 30-40 ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಹೊರಬರಲಿದ್ದಾರೆ, ಅದು ಅವರಿಗೆ ಗೊತ್ತಿರುವುದರಿಂದ ಬಿಜೆಪಿ ಶಾಸಕರು ಮತ್ತು ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಅಂತ ಬಟ್ಟೆ ಹಾವು ಬಿಡುತ್ತಾರೆ, ಬೆಳಗಾವಿ ಆಧಿವೇಶನದ ನಂತರ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಪರಿವರ್ತನೆಯಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷನ ಜವಾಬ್ದಾರಿಯನ್ನು ಬಿವೈ ವಿಜಯೇಂದ್ರ ಅವರಿಗೆ ವಹಿಸಿಕೊಟ್ಟ ಬಳಿಕ ಕೊಂಚ ನಿರಾಳರಾದಂತೆ ಕಾಣುವ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ವಿಜಯೇಂದ್ರ ರಾಜ್ಯಾಧ್ಯಕ್ಷನ ಮಾಡಿರುವ ಕಾರಣ ಕೆಲ ಹಿರಿಯ ನಾಯಕರು ಪಕ್ಷ ತೊರೆಯಲಿರುವ ಬಗ್ಗೆ ಹರಡಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಾಯಕರು ಸುಖಾಸುಮ್ಮನೆ ವದಂತಿ ಹರಡುತ್ತಿದ್ದಾರೆ. ಅಸಲಿಗೆ ಅವರ ಪಕ್ಷವೇ ಸಿದ್ದರಾಮಯ್ಯ (Siddaramaiah) ಬಣ, ಶಿವಕುಮಾರ್ (Shivakumar) ಬಣ, ಸತೀಶ್ ಬಣ ಅಂತ ಒಡೆದ ಮನೆಯಾಗಿದೆ. ಮತ್ತೊಂದೆಡೆ ಪ್ರಿಯಾಂಕ್ ಖರ್ಗೆ ನಾನು ಸಿಎಂ ಆಗ್ತೀನಿ ಅಂತಿದ್ದಾರೆ. ಹಸ್ತದೊಳಗೆ ಹಸ್ತ ಆಪರೇಶನ್ ನಡೆದಿದೆ ಎಂದು ಹೇಳಿದರು. ಸುಮಾರು 30-40 ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಹೊರಬರಲಿದ್ದಾರೆ, ಅದು ಅವರಿಗೆ ಗೊತ್ತಿರುವುದರಿಂದ ಬಿಜೆಪಿ ಶಾಸಕರು ಮತ್ತು ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಅಂತ ಬಟ್ಟೆ ಹಾವು ಬಿಡುತ್ತಾರೆ, ಬೆಳಗಾವಿ ಆಧಿವೇಶನದ ನಂತರ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಪರಿವರ್ತನೆಯಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ