ಮಂಗಳೂರು: ತಲ್ವಾರ್ ತೋರಿಸಿ ದನಕಳವು ಮಾಡಿದ್ದ ನಾಲ್ವರ ಬಂಧನ
ಶುಕ್ರವಾರ ರಾತ್ರಿ ಬಂಗ್ರಕುಳೂರು ಬಳಿಯ ಮನೆಯ ಹಟ್ಟಿಗೆ ನುಗ್ಗಿ 3 ದನಗಳನ್ನು ಕಳವು ಮಾಡಿದ್ದರು. ಕಳುವಾದ ದನಗಳು ಉಮೇಶ್ ಮಲರಾಯಸಾನ ಹಾಗೂ ಉದಯ ಶೆಟ್ಟಿ ಅವರದ್ದು ಎಂದು ತಿಳಿದುಬಂದಿದೆ.
ಮಂಗಳೂರು: ಶುಕ್ರವಾರ (ಡಿ.03) ಮಂಗಳೂರು ಹೊರವಲಯದ ಬಂಗ್ರಕುಳೂರಿನಲ್ಲಿ ಮಾರಾಕಾಯುಧಗಳನ್ನು ತೋರಿಸಿ 3 ದನಗಳನ್ನು ಕದ್ದಯೊಯ್ದಿದ್ದ ನಾಲ್ವರು ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಕಾವೂರು ಪೊಲೀಸರು ಆರೊಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಉಳ್ಳಾಲದ ಮಹಮ್ಮದ್ ಸಲೀಂ (32). ಮಹಮದ್ ತಂಜಿಲ್(25), ಮಹಮದ್ ಇಕ್ಬಾಲ್( 23) ಮತ್ತು ಮಹಮದ್ ಅಫ್ರೀದ್ ಬಂಧಿತ ಆರೋಪಿಗಳು.
ನಿನ್ನೆ ರಾತ್ರಿ ಬಂಗ್ರಕುಳೂರು ಬಳಿಯ ಮನೆಯ ಹಟ್ಟಿಗೆ ನುಗ್ಗಿ 3 ದನಗಳನ್ನು ಕಳವು ಮಾಡಿದ್ದರು. ಕಳುವಾದ ದನಗಳು ಉಮೇಶ್ ಮಲರಾಯಸಾನ ಹಾಗೂ ಉದಯ ಶೆಟ್ಟಿ ಅವರದ್ದು ಎಂದು ತಿಳಿದುಬಂದಿದೆ. ಕದ್ದ 2 ದನಗಳು ಉಮೇಶ್ ಹಾಗೂ ಒಂದು ದನ ಉದಯ್ ಶೆಟ್ಟಿ ಅವದ್ದು ಎಂದು ಹೇಳಲಾಗಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ರಾತ್ರಿ ವೇಳೆ ಬಂದ ನಾಲ್ವರು ದುಷ್ಕರ್ಮಿಗಳು ತಲ್ವಾರ್ ತೋರಿಸಿ ಉಮೇಶ್ ಹಾಗೂ ಉದಯ ಶೆಟ್ಟಿ ಅವರನ್ನು ಹೆದರಿಸಿ 3 ದನಗಳನ್ನು ಎಳೆದೊಯ್ದಿದ್ದರು. ದನಗಳನ್ನು ಕಳವು ಮಾಡಿದ್ದಲ್ಲದೆ ಅವುಗಳನ್ನು ಕೊಂದು ತಿಂದಿದ್ದಾರೆ ಎಂದು ಆರೋಪಿಲಾಗಿದೆ.
ಈ ಕುರಿತು ಉಮೇಶ್ ಮತ್ತು ಉದಯ್ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಇದರ ಜತೆಗೆ ಕಳ್ಳತನಕ್ಕೆ ಬಳಸಿದ್ದ ತಲ್ವಾರ್, ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Published On - 3:57 pm, Sat, 4 December 21