ಮಂಗಳೂರು: ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಂಗಳೂರಿನ ಉರ್ವಾದ ಕೋಡಿಕಲ್, ಕಾವೂರು, ಪಣಂಬೂರು ಎಂಬಲ್ಲಿ ನಾಗ ದೇವರ ಮೂರ್ತಿಗಳನ್ನು ಭಗ್ನಗೊಳಿಸಿದ್ದರು. ಸರಣಿ ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣಗಳು ಮಂಗಳೂರು ಪೊಲೀಸರಿಗೆ ಸವಾಲಾಗಿತ್ತು. ಆದರೆ ಮಹತ್ವದ ಕಾರ್ಯಾಚರಣೆಯಲ್ಲಿ 8 ಮಂದಿ ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಕಾವೂರು ನಿವಾಸಿ ಸಫ್ವಾನ್, ಮೊಹಮ್ಮದ್ ಸುಹೈಲ್, ಪ್ರವೀಣ್ ಅನಿಲ್ ಮೊಂತೆರೊ, ನಿಖಿಲೇಶ್, ಸುರತ್ಕಲ್ನ ಜಯಂತ್ ಕುಮಾರ್, ಬಂಟ್ವಾಳದ ಪ್ರತೀಕ್, ಕೂಳೂರಿನ ಮಂಜುನಾಥ್, ಹಾಸನ ನಿವಾಸಿ ನೌಷಾದ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು ನಾಗ ದೇವರ ಮೂರ್ತಿ ಭಗ್ನಗೊಳಿಸಿ ಗಲಭೆ ಸೃಷ್ಟಿಸಿ ಶಾಂತಿ ಕದಡಲು ಸಂಚು ರೂಪಿಸಿದ್ದರು. ಅಲ್ಲದೇ ಸರಗಳ್ಳತನ, ದರೋಡೆ ಪ್ರಕರಣಗಳ ಹಿಂದೆ ಬಿದ್ದ ಪೊಲೀಸರ ದಿಕ್ಕು ತಪ್ಪಿಸಲು ಈ ರೀತಿ ದೇವರ ಮೂರ್ತಿ ಭಗ್ನಗೊಳಿಸಿದ್ದಾರೆ ಎಂತಲೂ ಹೇಳಲಾಗುತ್ತಿದೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜನರಿಗೆ ಬಿಜೆಪಿ ಕೊಟ್ಟ ಗಿಫ್ಟ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಕ್ಕೊಂದು ಅಹಿತಕರ ಘಟನೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ಯುಟಿ ಖಾದರ್, ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಫ್ರೀಹ್ಯಾಂಡ್ ಕೊಟ್ಟಿಲ್ಲ. ಪೊಲೀಸರಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಲಾಗಿದೆ. ಅಧಿಕಾರಿಗಳು ಕೆಲಸ ಮಾಡಲು ಆಗ್ತಿಲ್ಲ, ಕೈಕಟ್ಟಿ ಹಾಕಲಾಗಿದೆ. ರಾಜಕೀಯವಾಗಿ ಅಧಿಕಾರಿಗಳ ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ. ಒಂದೆಡೆ ಸಮಾಜಘಾತುಕ ಶಕ್ತಿಗಳು ಧಮ್ಕಿ ಹಾಕುತ್ತಿವೆ. ಜಿಲ್ಲಾಧಿಕಾರಿಗಳ ಕಾಲರ್ಪಟ್ಟಿ ಹಿಡಿಯುವ ಧಮ್ಕಿ ಹಾಕುತ್ತೀವಿ. ಇದೇ ಜನರಿಗೆ ಬಿಜೆಪಿ ಕೊಟ್ಟಿರುವ ಗಿಫ್ಟ್, ಬಿಜೆಪಿ ಸಾಧನೆ ಅಂತ ಹೇಳಿದರು.
ಇದನ್ನೂ ಓದಿ
ಟಿವಿ9 ಡೇರ್2ಡ್ರೀಮ್ ಪ್ರಶಸ್ತಿ ಸೀಸನ್-3ರ ಪ್ರದಾನ ಸಮಾರಂಭ ನವೆಂಬರ್ 30 ಮಧ್ಯಾಹ್ನ 1ಕ್ಕೆ
ಲಂಚ ತೆಗೆದುಕೊಳ್ಳುವ ಇಲಾಖೆಯಿಂದಲೇ ತನಿಖೆ ಮಾಡಿಸೋದಾ? ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ- ಸಿದ್ದರಾಮಯ್ಯ ಆಗ್ರಹ
Published On - 2:02 pm, Sat, 27 November 21