ಮಂಗಳೂರಿನ ಸುರತ್ಕಲ್​ ಬಳಿಯ ಟೋಲ್​ ಸಂಗ್ರಹ ಕೇಂದ್ರ ರದ್ದು: ನಳೀನ್ ಕುಮಾರ್ ಕಟೀಲ್

| Updated By: ವಿವೇಕ ಬಿರಾದಾರ

Updated on: Nov 14, 2022 | 7:00 PM

ಮಂಗಳೂರಿನ ಸುರತ್ಕಲ್​ ಬಳಿಯ ಟೋಲ್​ ಸಂಗ್ರಹ ಕೇಂದ್ರ ರದ್ದಾಗಿದ್ದು, ಪ್ರತಿಭಟನಾಕಾರರಿಗೆ ಜಯ ಲಭಿಸಿದೆ.

ಮಂಗಳೂರಿನ ಸುರತ್ಕಲ್​ ಬಳಿಯ ಟೋಲ್​ ಸಂಗ್ರಹ ಕೇಂದ್ರ ರದ್ದು: ನಳೀನ್ ಕುಮಾರ್ ಕಟೀಲ್
ಸುರತ್ಕಲ್ ಟೋಲ್ ಗೇಟ್ (ಸಂಗ್ರಹ ಚಿತ್ರ)
Follow us on

ದಕ್ಷಿಣ ಕನ್ನಡ: ಮಂಗಳೂರಿನ ಸುರತ್ಕಲ್​ ಬಳಿಯ ಟೋಲ್​ ಸಂಗ್ರಹ ಕೇಂದ್ರ ರದ್ದಾಗಿದ್ದು, ಪ್ರತಿಭಟನಾಕಾರರಿಗೆ ಜಯ ಲಭಿಸಿದೆ. ಸುರತ್ಕಲ್​ ಬಳಿಯ ಟೋಲ್​ ಸಂಗ್ರಹ ಕೇಂದ್ರವನ್ನು ತೆರವುಗೊಳಿಸುವಂತೆ ಟೋಲ್​ ವಿರೋಧಿ ಹೋರಾಟ ಸಮಿತಿ, ಕಾಂಗ್ರೆಸ್​, DYFI, ಸಿಪಿಐಎಂ ಸೇರಿ ಸಮಾನ ಮನಸ್ಕ ಸಂಘಟನೆಗಳ ಸಮಿತಿ ಅಕ್ಟೋಬರ್​ 28ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿತ್ತು. ಅಲ್ಲದೆ ಪ್ರತಿಭಟನಾಕಾರರು ವಾರದ ಹಿಂದೆ ಟೋಲ್​ ಗೇಟ್​ಗೆ ಮುತ್ತಿಗೆ ಹಾಕಿದ್ದರು.

“ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್​ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ”, ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್​ ಕಟೀಲ್​ ಟ್ವೀಟ್​ ಮಾಡಿದ್ದಾರೆ.

ಟೋಲ್​ ಸಂಗ್ರಹ ಕೇಂದ್ರ ತೆರವಿಗೆ ಏಕೆ ಒತ್ತಾಯ

ಈ ಟೋಲ್ ಗೇಟ್ 2015 ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆರಂಭಗೊಂಡಿದೆ. ಹೈವೆಯಲ್ಲಿ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಇರಬೇಕಾದದ್ದು ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ಸುರತ್ಕಲ್ ಟೋಲ್ ಆ ನಿಯಮವನ್ನು ಮೀರಿದೆ ಎಂಬ ಆರೋಪವಿದೆ. ಸುರತ್ಕಲ್ ಟೋಲ್​ನಿಂದ ಹೆಜಮಾಡಿ ಟೋಲ್ ಪ್ಲಾಜಾ ದೂರ ಕೇವಲ 17 ಕಿ.ಮೀ. ಸುರತ್ಕಲ್ ಟೋಲ್ ‌ಮುಚ್ಚುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗಿತ್ತು. ಆದರೆ ಮುಚ್ಚುವ ಬದಲು ಹೊಸ ಗುತ್ತಿಗೆದಾರನಿಗೆ ಟೋಲ್ ವಹಿಸಲು ಟೆಂಡರ್‌ ನೀಡಲಾಗಿದೆ. ಹೀಗಾಗಿ ನಿರ್ಣಾಯಕ ಹೋರಾಟಕ್ಕೆ ಸಂಘಟನೆಗಳು ಮುಂದಾಗಿದ್ದವು. ಈಗ ಅವರ ಹೋರಾಟಕ್ಕೆ ಜಯ ಲಭಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:54 pm, Mon, 14 November 22