ಮಂಗಳೂರು, ಫೆಬ್ರವರಿ 12: ರಸ್ತೆ ದಾಟುತ್ತಿದ್ದ ಕಾಡು ಹಂದಿಗಳಿಗೆ (wild pig) ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಕಾಡು ಹಂದಿಗಳಿಗೆ ಗಾಯಗಳಾಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಗಾಯಗೊಂಡ ಹಂದಿಗಳಿಗೆ ಚಿಕಿತ್ಸೆ ನೀಡುವ ಬದಲು ಹಗ್ಗದಿಂದ ಕೈ-ಕಾಲು ಕಟ್ಟಿ ತಮ್ಮ ತಮ್ಮ ವಾಹನಗಳಲ್ಲಿ ಸಾರ್ವಜನಿಕರು ತುಂಬಿಕೊಂಡು ಹೋಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮೈಸೂರು-ನಂಜನಗೂಡು ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಇತ್ತೀಚೆಗೆ ತಡರಾತ್ರಿ ರಸ್ತೆ ದಾಟುವ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ 18 ತಿಂಗಳ ಗಂಡು ಹುಲಿಯೊಂದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿತ್ತು. ಕೆಲವು ತಿಂಗಳ ಹಿಂದೆ ತನ್ನ ತಾಯಿಯೊಂದಿಗೆ ಕಾಣಿಸಿಕೊಂಡ ನಾಲ್ಕು ಮರಿಗಳಲ್ಲಿ ಇದೂ ಒಂದಾಗಿದೆ ಎಂದು ತಿಳಿದು ಬಂದಿತ್ತು.
ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಕಣಜಿ, ಜ್ಯಾಂತಿ ಗ್ರಾಮದಲ್ಲಿರುವ ಪಶು ಆಸ್ಪತ್ರೆಯ ಕಟ್ಟಡ ಇಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಇಂಥಹ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿಯೇ ಪಶು ವೈದ್ಯರು ಸಿಬ್ಬಂದಿಗಳು ಕುಳಿತುಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಕಟ್ಟಡವನ್ನ ನೋಡಿದರು ಒಳಗಡೆಗೆ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇಂತಹ ಕಟ್ಟಡವನ್ನ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಿಕೊಡುವ ಕೆಲಸವನ್ನ ಪಶು ಇಲಾಕೆ ಮುಂದಾಗಿಲ್ಲ.
ಇದು ಸಹಜವಾಗಿಯೇ ಪಶು ಆಸ್ಪತ್ರೆಗೆ ಚಿಕಿತ್ಸೆಗೆಂದು ಜಾನುವಾರುಗಳನ್ನ ತೆಗೆದುಕೊಂಡು ಬರುವ ರೈತರ ಆಕ್ರೋಶ ಹೆಚ್ಚಿಸುಂತೆ ಮಾಡಿದೆ. ಇದರ ಜೊತೆಗೆ ಈ ಪಶು ಆಸ್ಪತ್ರೆಯೂ ಗಲೀಜು ತುಂಬಿದ ಸ್ಥಳದಲ್ಲಿದ್ದು ಇಲ್ಲಿಗೆ ರೈತರು ತಮ್ಮ ಜಾನುವಾರು, ಕುರಿ, ಕೋಳಿ, ಸಾಕು ನಾಯಿಗಳನ್ನ ತೆಗೆದುಕೊಂಡು ಬಂದರೆ ಅವರು ಮುಗು ಮುಚ್ಚಿಕೊಂಡೆ ತಾವು ತಂದಿರುವ ಪ್ರಾಣಿಗಳಿಗೆ ಚಿಕಿತ್ಸೆಕೊಡಿಸಿಕೊಂಡು ಹೋಗುವಂತ ಸ್ಥಿತಿ ಇಲ್ಲಿದೆ ಎಂದು ರೈತರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದು ಈ ಕಟ್ಟಡ ನೆಲಸಮ ಮಾಡಿ ಒಳ್ಳೆಯ ಕಡ್ಡ ಕಟ್ಟಿಕೊಡಿ ಎಂದು ರೈತರು ಮನವಿ ಮಾಡಿದ್ದಾರೆ.
ವನ್ಯಜೀವಿಗಳ ಅಂಗಾಂಗಗಳನ್ನು ಮನೆಯಲ್ಲಿ ಇಟ್ಟುಕೊಳ್ಳೂವುದು ಎಷ್ಟೊಂದು ಅಪರಾಧ ಎನ್ನುವುದು ಸದ್ಯ ಎಲ್ಲರಿಗೂ ಮನವರಿಕೆ ಆಗಿದೆ. ಶೋಕಿಗಾಗಿ ವನ್ಯಜೀವಿಗಳ ಅಂಗಾಂಗ ಮನೆಯಲ್ಲಿ ಇಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಈಗ ಇಂತಹ ವನ್ಯಜೀವಿಗಳ ವಸ್ತುಗಳನ್ನು ಇಟ್ಟುಕೊಂಡು ಮಾಜಿ ಗೃಹ ಸಚಿವರ ಕ್ಷೇತ್ರದ ವ್ಯಕ್ತಿಯು ಇಕ್ಕಟ್ಟಿಗೆ ಸಿಲುಕಿದ್ದರು. ಮಾಜಿ ಗೃಹ ಸಚಿವರ ಎಂಟ್ರಿಯಿಂದ ಆ ವ್ಯಕ್ತಿಗೆ ಬಂಧನದಿಂದ ಬಿಗ್ ರಿಲೀಫ್ ಸಿಕ್ಕಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.