ಸೌದಿ ಅರೇಬಿಯಾ: ಒಂಟೆಗೆ ಕಾರು ಡಿಕ್ಕಿ ಹೊಡೆದು ಮಂಗಳೂರಿನ ಮೂವರು, ಬಾಂಗ್ಲಾದ ಓರ್ವನ ಸಾವು
ಖುರೈಸ್ ರಸ್ತೆಯ ಮಾರ್ಗವಾಗಿ SAQCO ಕಂಪನಿಯ ನಾಲ್ಕು ನೌಕರರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಒಂಟೆಗೆ ಡಿಕ್ಕಿ ಹೊಡೆದಿದೆ.
ಮಂಗಳೂರು: ಸೌದಿ ಅರೇಬಿಯಾದ(Saudi Arabia) ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಕಾರೊಂದು ಒಂಟೆಗೆ(Camel) ಡಿಕ್ಕಿ ಹೊಡೆದಿದ್ದು ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಂಗಳೂರು ಮೂಲದ ಅಕಿಲ್, ನಾಸಿರ್, ರಿಜ್ವಾನ್ ಹಾಗೂ ಬಾಂಗ್ಲಾ ಮೂಲದ ಯುವಕ ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಖುರೈಸ್ ರಸ್ತೆಯ ಮಾರ್ಗವಾಗಿ SAQCO ಕಂಪನಿಯ ನಾಲ್ಕು ನೌಕರರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಒಂಟೆಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಸೌದಿಯ ಅಲ್ ಹಸ್ಸಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಸೌದಿಯ ಅಧಿಕಾರಿಗಳು ಮಂಗಳೂರಿನ ಸಂತ್ರಸ್ತ ಕುಟುಂಬದವರಿಗೆ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಅಕಿಲ್ ಮಂಗಳೂರಿನ ಬೋಳಾರ್ ನಿವಾಸಿಯಾಗಿದ್ದು, ರಿಜ್ವಾನ್ ಹಳೆಯಂಗಡಿ ಕದಿಕೆ ನಿವಾಸಿಯಾಗಿದ್ದರು.
ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ಸನ್ನಿಧಾನದಲ್ಲಿಯೇ ಮದ್ಯ ಮಾರಾಟ, ದಂಧೆಕೋರರಿಗೆ ಸಾಥ್ ಕೊಟ್ಟರಾ ಅಬಕಾರಿ, ಪೊಲೀಸ್ ಸಿಬ್ಬಂದಿ
Published On - 1:32 pm, Sat, 4 February 23