ಮಂಗಳೂರು: ಬೀಚ್​ಗೆ ಹೋಗಿದ್ದ ಮೂವರು ಪ್ರವಾಸಿಗರು ಸಮುದ್ರಪಾಲು, ಓರ್ವ ರಕ್ಷಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 08, 2025 | 7:33 PM

ಮುರಡೇಶ್ವರ, ಉಡುಪಿ ಸೇರಿದಂತೆ ಕರ್ನಾಟಕದಲ್ಲಿರುವ ವಿವಿಧ ಬೀಚ್​ಗಳಲ್ಲಿ ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಲೇ ಇವೆ. ಬೀಚ್​ಗೆ ಬರುವ ಪ್ರವಾಸಿಗರು ಸಮುದ್ರ ಪಾಲಾಗುತ್ತಿರುವ ಪ್ರಕರಣಗಳು ಹೆಚ್ಚಿವೆ. ಆದರೂ ಸಹ ಸಂಬಂಧಪಟ್ಟ ಜಿಲ್ಲಾಡಳಿತ ಯಾವುದೇ ಸುರಕ್ಷಿತ ಕ್ರಮಕ್ಕೆ ಮುಂದಾಗಿತ್ತಿಲ್ಲ. ಇದೀಗ ಮಂಗಳೂರಿನಲ್ಲಿ ಬೀಚ್​ಗೆ ಬಂದಿದ್ದ ನಾಲ್ವರು ಪ್ರವಾಸಿಗರ ಪೈಕಿ ಮೂವರು ನೀರುಪಾಲಾಗಿರುವ ಘಟನೆ ನಡೆದಿದೆ.

ಮಂಗಳೂರು: ಬೀಚ್​ಗೆ ಹೋಗಿದ್ದ ಮೂವರು ಪ್ರವಾಸಿಗರು ಸಮುದ್ರಪಾಲು, ಓರ್ವ ರಕ್ಷಣೆ
ಮಂಗಳೂರು: ಬೀಚ್​ಗೆ ಹೋಗಿದ್ದ ಮೂವರು ಪ್ರವಾಸಿಗರು ಸಮುದ್ರಪಾಲು, ಓರ್ವ ರಕ್ಷಣೆ
Follow us on

ಮಂಗಳೂರು, ಜನವರಿ 08: ಬೀಚ್‌ಗೆ (Beach) ಪ್ರವಾಸಕ್ಕೆ ಬಂದಿದ್ದ ಮೂವರು ವ್ಯಕ್ತಿಗಳು ಸಮುದ್ರಪಾಲಾಗಿರುವಂತಹ ಘಟನೆ ಮಂಗಳೂರಿನ ಕುಳಾಯಿ ಬಳಿಯ ಹೊಸಬೆಟ್ಟು ಬೀಚ್ ಬಳಿ ನಡೆದಿದೆ.  ಚಿತ್ರದುರ್ಗದ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್​​ ಮತ್ತು ಬೆಂಗಳೂರಿನ‌ ಸತ್ಯವೇಲು ಮೃತರು. ಬೀದರ್‌ನ ಪರಮೇಶ್ವರ್‌ನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇಂಜಿನಿಯರಿಂಗ್ ಮುಗಿಸಿ ಕೆಲಸದ ಕಾರಣಕ್ಕೆ ನಾಲ್ವರು ಮಂಗಳೂರಿಗೆ ಬಂದಿದ್ದರು. ಈಜಬೇಡಿ ಅಂತ ಕರಾವಳಿ ಕಾವಲು ಪಡೆ ಪೊಲೀಸ್ ಎಚ್ಚರಿಕೆ ಕೊಟ್ಟರು ಯುವಕರು ಕ್ಯಾರೇ ಎಂದಿಲ್ಲ. ಮಂಗಳೂರು ಹೊರವಲಯದ ಕುಳಾಯಿಯ ನಿರ್ಮಾಣ ಹಂತದ ಮೀನುಗಾರಿಕಾ ಜೆಟ್ಟಿಯಿಂದ ಸಮುದ್ರಕ್ಕೆ ಹಾರಿದ್ದರು. ಈ ವೇಳೆ ನಾಲ್ವರೂ ನೀರಿನ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ.

ಸಮುದ್ರ ಬದಿ ಬಲೆ ಹಾಕುತ್ತಿದ್ದ ಮೀನುಗಾರರಿಂದ ಓರ್ವನ ರಕ್ಷಣೆ ಮಾಡಲಾಗಿದೆ. ಲೈಫ್ ಜಾಕೆಟ್ ಹಿಡಿದುಕೊಂಡು ಈಜಿಕೊಂಡು ಸ್ಥಳೀಯ ಮೀನುಗಾರ ವಿದ್ಯಾಧರ್ ತೆರಳಿ ಓರ್ವನ ರಕ್ಷಿಸಿದ್ದಾರೆ. ಸ್ಥಳೀಯ ಮೀನುಗಾರರು ಮೂವರ ಮೃತದೇಹ ಮೇಲಕ್ಕೆತ್ತಿದ್ದಾರೆ.

ಹಳೆ ವೈಷಮ್ಯ: ಗ್ಯಾಂಗ್​ನಿಂದ ಹೊರ ರಾಜ್ಯದ 9 ಕಾರ್ಮಿಕರ ಮೇಲೆ ಹಲ್ಲೆ

ಹಳೆ ವೈಷಮ್ಯದ ಹಿನ್ನೆಲೆ  ಗ್ಯಾಂಗ್​ನಿಂದ ಹೊರ ರಾಜ್ಯದ 9 ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವಂತಹ ಘಟನೆ ಮಂಗಳೂರು ಬಳಿಯ ಕೋಟೆಕಾರು ಮಡ್ಯಾರ್​ನಲ್ಲಿ ತಡರಾತ್ರಿ ನಡೆದಿದೆ. ಕೋಟೆಕಾರು ಮಡ್ಯಾರು ಬಳಿಯಿರುವ ಚಂದನ್ ಡೆಕೊರೇಟರ್ಸ್​​ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ.

ಇದನ್ನೂ ಓದಿ: ಕನ್ಯೆ ಸಿಗದ ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ ಜಾಲ?

​ಇನೋವಾ ಕಾರಿನಲ್ಲಿ ಮಾಸ್ಕ್​​ ಧರಿಸಿ ಬಂದು ಗ್ಯಾಂಗ್​ನಿಂದ ಹಲ್ಲೆ ಮಾಡಲಾಗಿದೆ. ಮೊದಲು ಬಂಟ್ಸ್​ ಹಾಸ್ಟೆಲ್​ನ ಐರಿಸ್​​ ಡೆಕೊರೇಟರ್ಸ್​ ಸಂಸ್ಥೆಯಲ್ಲಿ ಕಾರ್ಮಿಕ ಕೆಲಸ ಮಾಡುತ್ತಿದ್ದ. ಬಳಿಕ ಕೆಲಸ ತ್ಯಜಿಸಿ ಚಂದನ್​ ಡೆಕೊರೇಟರ್ಸ್​ ಸಂಸ್ಥೆಯನ್ನು ಸೇರಿದ್ದರು. ಹೀಗಾಗಿ ಗ್ಯಾಂಗ್​ನಿಂದ ಹಲ್ಲೆ ಮಾಡಲಾಗಿದೆ.

ಇನ್ನು ಕಾರ್ಮಿಕರ ಮೇಲೆ ಹಲ್ಲೆನಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಹಲ್ಲೆ ನಡೆಸಿದ ಆರೋಪಿಗಳು ಉಳ್ಳಾಲ ಠಾಣೆಗೆ ಶರಣಾಗಿರುವ ಮಾಹಿತಿ ಇದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್​​ಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮಹಿಳೆ ಸಾವು

ಮತ್ತೊಂದು ಪ್ರಕರಣದಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೊರವಲಯದಲ್ಲಿ ಕಾರು ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕರಿಯಮ್ಮ(43) ಮೃತ ಮಹಿಳೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕರಿಯಮ್ಮ ಪತಿ ಕೊತ್ಲೇಶ್​ಗೆ​ ಹೊಸಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ಹೆಂಡ್ತಿ ಆರೋಗ್ಯ ವಿಚಾರಿಸಲು ಬಂದಿದ್ದ ಯುವತಿ ಮೇಲೆ ಬಿತ್ತು ಕಣ್ಣು, ಹೊಡೆದು ಕೊಂದ ಪೋಷಕರು

ಕೂಡ್ಲಿಗಿಯಿಂದ ಗುಣಸಾಗರದ ಜಾತ್ರೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಕಾರು ಚಾಲಕ ಪರಾರಿ ಆಗಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:17 pm, Wed, 8 January 25