ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ರೀತಿಯಲ್ಲೇ ಮಂಗಳೂರಿನ ಉದ್ಯಮಿ ಪುತ್ರ ಸಾವು!

ನದಿ ದಡದ ಮೇಲೆ ಕಾರು ನಿಲ್ಲಿಸಿ ನೀರಿಗೆ ಹಾರಿ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ರೀತಿಯಲ್ಲೇ ಮಂಗಳೂರಿನ ಉದ್ಯಮಿಯೊಬ್ಬರ ಪುತ್ರ ಸಹ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡು ಬಳಿ ನಡೆದಿದೆ.

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ರೀತಿಯಲ್ಲೇ ಮಂಗಳೂರಿನ ಉದ್ಯಮಿ ಪುತ್ರ ಸಾವು!
ಅಭಿಷೇಕ್ ಆಳ್ವ
Updated By: ಗಂಗಾಧರ​ ಬ. ಸಾಬೋಜಿ

Updated on: Nov 07, 2025 | 5:05 PM

ಮಂಗಳೂರು, ನವೆಂಬರ್​ 07: ನಗರದ ಉದ್ಯಮಿಯ ಪುತ್ರನ (businessman Son) ಮೃತದೇಹ ಶಾಂಭವಿ ನದಿ ತೀರದಲ್ಲಿ ಪತ್ತೆ ಆಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡು ಬಳಿ ನಡೆದಿದೆ. ಉದ್ಯಮಿ ನವೀನ್ ಚಂದ್ರ ಆಳ್ವಾ ಪುತ್ರ ಅಭಿಷೇಕ್ ಆಳ್ವ (29) ಮೃತ ಯುವಕ. ಮುಲ್ಕಿ ಬಳಿ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ (death) ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಅಭಿಷೇಕ್, ನವಂಬರ್ 5ರ ರಾತ್ರಿ ಮೂಲ್ಕಿ ಬಪ್ಪನಾಡು ಬ್ರಿಡ್ಜ್ ಬಳಿ ತಮ್ಮ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಬಪ್ಪನಾಡು ಸಮೀಪ ನದಿ ತೀರದಲ್ಲಿ ಮೃತದೇಹ ಪತ್ತೆ ಆಗಿದೆ. ಅಭಿಷೇಕ್ ತಮ್ಮ ತಂದೆಯ ಉದ್ಯಮವನ್ನು ಮುನ್ನಡೆಸುತ್ತಿದ್ದರು ಎಂಬ ಮಾಹಿತಿಯಿದೆ.

ಇದನ್ನೂ ಓದಿ: ಹೆತ್ತ ಕರುಳನ್ನೇ ಕತ್ತರಿಸಿದ ಮಗ: ಹತ್ಯೆ ಮಾಡಿ ನಾಟಕವಾಡಿದ್ದ ನಿವೃತ್ತ ಸರ್ಕಾರಿ ನೌಕರ ಅರೆಸ್ಟ್

ತಿರುವೈಲು ಗುತ್ತು ಕರಾವಳಿ ಕಂಬಳದಲ್ಲಿ ಗುರುತಿಸಿಕೊಂಡಿದ್ದ ಪ್ರಖ್ಯಾತ ಮನೆತನ. ಅಭಿಷೇಕ್ ನಾಪತ್ತೆ ಕುರಿತು ಪಡುಬಿದ್ರಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ ನಡೆದಿದೆ. ಲೋಕೇಶ್ ಎಂಬುವರ ಪುತ್ರ ಗಗನ್(14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.

ಇದನ್ನೂ ಓದಿ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ! ಅಮೇಲೇನಾಯ್ತು?

ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಎಂದಿನಂತೆ ಶಾಲೆಗೆ ತೆರಳಿ ವಾಪಸ್ ಆಗಿದ್ದ. ನಿನ್ನೆ ಸಂಜೆ ಶಾಲೆಯಿಂದ ವಾಪಸಾಗಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಆಟೋ ಪಲ್ಟಿಯಾಗಿ ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಬಳಿ ಆಟೋ ಪಲ್ಟಿಯಾಗಿ ಕಾಲೇಜು ವಿದ್ಯಾರ್ಥಿನಿ ಪ್ರೇಮಾ(18) ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಐವರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:00 pm, Fri, 7 November 25