ಮಂಗಳೂರು: ಮಂಗಳೂರು ಪೊಲೀಸರು (Mangaluru Police) ಡ್ರಗ್ಸ್ ಮಾಫಿಯಾ (Drug Mafia) ವಿರುದ್ಧ ಸಮರ ಸಾರಿದ್ದು, ಈ ದಂಧೆಯಲ್ಲಿ ಭಾಗಿಯಾಗಿದ ಆರೋಪಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಇದೀಗ ಮಂಗಳೂರು ಸಿಸಿಬಿ (CCB) ಪೊಲೀಸರು ಡ್ರಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ನಿಷೇಧಿತ ಎಮ್ಡಿಎಮ್ಎ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಕಾಟಿಪಳ್ಳ ನಿವಾಸಿ ಶಾಕೀಬ್ ಅಲಿಯಾಸ್ ಶಬ್ಬು (33), ಚೊಕ್ಕಬೆಟ್ಟು ನಿವಾಸಿ ನಿಸಾರ್ ಹುಸೈನ್ ಅಲಿಯಾಸ್ ನಿಚ್ಚು ಬಂಧಿತ ಆರೋಪಿಗಳು. ಆರೋಪಿಗಳ ಬಳಿ ಇದ್ದ 2.6 ಲಕ್ಷ ರೂ. ಮೌಲ್ಯದ ಎಮ್ಡಿಎಮ್ಎ ಡ್ರಗ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮಂಗಳೂರಿನ ವಿವಿಧ ಪ್ರದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು. ಹೀಗೆ ಸುರತ್ಕಲ್ನ ತಡಂಬೈಲ್ ಬೀಚ್ ಬಳಿ ಕಾರಿನಲ್ಲಿ ನಿಷೇಧಿತ ಎಮ್ಡಿಎಮ್ಎ ಮಾರುವಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಆರೋಪಿಗಳ ವಿರುದ್ಧ ಈ ಹಿಂದೆ ಕೊಲೆಯತ್ನ, ಹಲ್ಲೆ, ಸರಗಳ್ಳತನ, ಮನೆಗಳ್ಳತನ, ವಾಹನ ಕಳ್ಳತನದಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ: ಗಾಂಜಾ ಮತ್ತಲ್ಲಿ ಯುವಕನ ದಾಂಧಲೆ: ಸಿನಿಮಿಯ ರೀತಿಯಲ್ಲಿ ಲಾಕ್ ಮಾಡಿದ ಮಂಗಳೂರು ಪೊಲೀಸ್; ವಿಡಿಯೋ ವೈರಲ್
ಇನ್ನು ಮಂಗಳೂರು ಪೊಲೀಸರು ಕಳೆದ 26 ದಿನಗಳಲ್ಲಿ 40 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ನಿಷೇಧಿತ ಎಮ್ಡಿಎಮ್ಎ ಡ್ರಗ್ ಪಾಲು ಹೆಚ್ಚಾಗಿತ್ತು. ಹಾಗೇ ಪೊಲೀಸರು ಹತ್ತು ಪ್ರಕರಣದಲ್ಲಿ ಒಟ್ಟು 22 ಜನ ಪೆಡ್ಲರ್ಗಳನ್ನು ಬಂಧಿಸಿದ್ದರು.
ಈ ಆರೋಪಿಗಳು ಬೆಂಗಳೂರಿನಿಂದ ಎಮ್ಡಿಎಮ್ಎ ಡ್ರಗ್ ಖರೀದಿಸಿ ತಂದು ಕರಾವಳಿ, ಕೇರಳ ಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ನಗರ ಪೊಲೀಸರು ಈ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾ ಇನ್ನು ಹಲವರಿಗಾಗಿ ಶೋಧ ನಡೆಸುತ್ತಿದ್ದು, ಶೀಘ್ರದಲ್ಲೇ ಬಂಧಿಸಿ ಜೈಲಿಗೆ ಅಟ್ಟಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:25 am, Mon, 28 August 23