AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಪೊಲೀಸ್ ಎಂದು ಹೇಳಿ ನಟಿಯೋರ್ವಳ ತಾಯಿಯಿಂದ ಸಾವಿರಾರು ರೂಪಾಯಿ ಪೀಕಿದ ವ್ಯಕ್ತಿ

ಪೊಲೀಸ್ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ನಟಿಯೋರ್ವಳ ತಾಯಿ ಬಳಿ ಇಲ್ಲಸಲ್ಲದ ಆರೋಪ ಮಾಡಿ ಹಣ ಸುಲಿಗೆ ಮಾಡಿದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಮಂಗಳೂರು: ಪೊಲೀಸ್ ಎಂದು ಹೇಳಿ ನಟಿಯೋರ್ವಳ ತಾಯಿಯಿಂದ ಸಾವಿರಾರು ರೂಪಾಯಿ ಪೀಕಿದ ವ್ಯಕ್ತಿ
ನೊಂದ ಮಹಿಳೆ (ಎಡಚಿತ್ರ)
Rakesh Nayak Manchi
|

Updated on: Mar 10, 2023 | 4:56 PM

Share

ಮಂಗಳೂರು: ಪೊಲೀಸ್ ಸೋಗಿನಲ್ಲಿ ನಟಿಯೋರ್ವಳ ತಾಯಿ ಬಳಿಯಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ. ನೀವು ವೇಶ್ಯವಾಟಿಕೆ ನಡೆಸುತ್ತಿದ್ದೀರಾ, ದಂಧೆ ನಡೆಸುತ್ತಿರುವುದು ಸಾಹೇಬರಿಗೆ ಗೊತ್ತಾಗಿದೆ. ಸಾಹೇಬ್ರ ಜೊತೆ ಸಹಕರಿಸಿದರೆ ದಂಧೆಗೆ ತೊಂದರೆ ಆಗಲ್ಲ, ಹೀಗಾಗಿ ಗೂಗಲ್ ಪೇ ಮಾಡಿದರೆ ರೈಡ್ ಮಾಡಲ್ಲ ಅಂತಾ ಬೆದರಿಕೆ ಹಾಕಿ ಹಣ ವರ್ಗಾಯಿಸಿಕೊಂಡು ಪೊಲೀಸ್ ವೇಷದಾರಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಸಾಜ್ ಪಾರ್ಲರ್ ಇಟ್ಟುಕೊಂಡಿದ್ದ ನಟಿಯೋರ್ವಳ ತಾಯಿ ಇದೀಗ ಅಂಗಡಿ ಮುಚ್ಚಿ ಮನೆಯಲ್ಲೇ ನೆಲೆಸಿದ್ದಾರೆ. ಇವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಶಿವರಾಜ್ ದೇವಾಡಿಗ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ನಿಮ್ಮ ಮನೆಯಲ್ಲಿ ಚಿನ್ನಾಭರಣ, ಹಣ ಇದೆ ಎಂದು ದೂರು ಬಂದಿದೆ. ಪ್ರಕರಣ ಮುಚ್ಚಿಹಾಕಲು ಹಣ ಕೊಡಬೇಕು ಇಲ್ಲವಾದರೆ ಪೊಲೀಸರು ರೈಡ್ ಮಾಡುತ್ತಾರೆ ಎಂದು ಬೆದರಿಕೆಹಾಕಿದ್ದಾನೆ. ಇದರಿಂದ ಹೆದರಿದ ಮಹಿಳೆ ಹತ್ತಿರದ ಮೊಬೈಲ್ ಶಾಪ್​ಗೆ ಹೋಗಿ ಗೂಗಲ್ ಪೇ ಮೂಲಕ 18 ಸಾವಿರ ರೂಪಾಯಿ ವರ್ಗಾಯಿಸಿದ್ದಾರೆ.

ಮರುದಿನ ಮತ್ತೆ ಕರೆ ಮಾಡಿದ ಅದೇ ವ್ಯಕ್ತಿ, ಫೈಲ್ ಪೊಲೀಸ್ ಆಯುಕ್ತರ ಕಚೇರಿಗೂ ಹೋಗಿದೆ, ಪ್ರಕರಣವನ್ನು ಇಲ್ಲವಾಗಿಸಲು ಸಿಬ್ಬಂದಿಗೆ ಹಣ ನೀಡಬೇಕು, ಸಿಸಿಟಿವಿ ಆಫ್ ಮಾಡಿ ಫೈಲ್ ತೆಗೆದುಕೊಳ್ಳಲೂ ಸಿಬ್ಬಂದಿಗೆ ಹಣ ನೀಡಬೇಕು. ಇಲ್ಲವಾದರೆ ಆಯುಕ್ತರು ಮೀಡಿಯಾ ಸಹಿತವಾಗಿ ಮನೆಗೆ ಬರುತ್ತಾರೆ ಎಂದು ಬೆದರಿಕೆ ಹಾಕುತ್ತಾನೆ. ಹೆದರಿಕೊಂಡ ಮಹಿಳೆ ಮತ್ತದೇ ಮೊಬೈಲ್ ಶಾಪ್​ಗೆ ಹೋಗಿ 20 ಸಾವಿರ ರೂಪಾಯಿಯನ್ನು ಅದೇ ನಂಬರ್​ಗೆ ಗೂಗಲ್ ಪೇ ಮಾಡಿದ್ದಾರೆ. ಹೀಗೆ ಒಟ್ಟು 38 ಸಾವಿರ ರೂಪಾಯಿ ಹಣವನ್ನು ಕಳುಹಿಸಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಸೈಬರ್ ಖದೀಮರಿಂದ 7.5 ಲಕ್ಷ ರೂ. ವಂಚನೆ!

ನನಗೊಂದು ಕುಟುಂಬ ಇದೆ. ನಾನೇನು ತಪ್ಪು ಮಾಡದಿದ್ದರೂ ಬೆದರಿಕೆ ಹಾಕಿದಾಗ ಏನೂ ಮಾಡಲಾಗಲಿಲ್ಲ. ಎರಡು ಪೊಲೀಸ್ ಠಾಣೆಯಲ್ಲಿನ ಪರಿಚಯಸ್ಥರಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪೊಲೀಸ್ ಸಮವಸ್ತ್ರದಲ್ಲಿ ಗೇಟ್ ಮುಂದೆ ಬಂದ ವ್ಯಕ್ತಿ ಅರ್ಧ ಗಂಟೆಯೊಳಗೆ ಹಣ ಹಾಕಬೇಕು, ಇಲ್ಲದಿದ್ದರೆ ಸಾಹೇಬ್ರು ಇಲ್ಲೇ ಹತ್ತಿರದಲ್ಲಿದ್ದಾರೆ, ಈಗಲೇ ಕರೆ ಮಾಡುತ್ತೇನೆ ಎಂದೆಲ್ಲಾ ಹೇಳಿ ಬೆದರಿಸಿದ್ದಾನೆ. ಇದರಿಂದ ಹೆದರಿದ ನಾನು ಹಣ ವರ್ಗಾಯಿಸಿದ್ದೇನೆ ಎಂದು ಟಿವಿ9 ಜೊತೆ ಮಹಿಳೆ ಮಾಹಿತಿ ಹಂಚಿಕೊಂಡಿದ್ದಾರೆ. ಬಂದವನು ಪೊಲೀಸ್ ಹೌದಾ ಅಲ್ಲವೊ ಅನ್ನೋದು ಇನ್ನು ಗೊತ್ತಾಗಿಲ್ಲ. ಆದರೆ ಬಂದವನು ಪೊಲೀಸ್ ಹಾಗೆ ಇದ್ದ. ಖಾಕಿ ಪ್ಯಾಂಟ್, ಡ್ರೆಸ್ ಹಾಗೂ ವಾಕಿಟಾಕಿ ಇತ್ತು, ವಾಕಿಟಾಕಿಯಲ್ಲಿ ಮಾತನಾಡುವುದು ಕೂಡ ಕೇಳಿಸುತ್ತಿತ್ತು ಎಂದು ಮಹಿಳೆ ಹೇಳಿದ್ದಾರೆ.

ಪಾಂಡೇಶ್ವರ ಠಾಣೆಯಲ್ಲಿದ್ದಾರೆ ಶಿವಾರಾಜ್ ಹೆಸರಿನ ಸಿಬ್ಬಂದಿ!

ಶಿವರಾಜ್ ಎಂಬ ಹೆಸರಿನ ಸಿಬ್ಬಂದಿ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲೂ ಇದ್ದಾರೆ. ಆದರೆ ಈತ ಅಲ್ಲಿಗೆ ಹೋಗಿಲ್ಲ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮಹಿಳೆ ಈವರೆಗೆ ಪೊಲೀಸ್ ಠಾಣೆಗೆ ದೂರು ನೀಡಿಲ್ಲ, ಆದರೆ ಮಾಹಿತಿ ತಿಳಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!