ಮಂಗಳೂರು: ನಗರದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ. ಅನ್ಯಕೋಮಿನ ಜೋಡಿ ಮೇಲೆ ಗುಂಪಿನಿಂದ ಹಲ್ಲೆ ನಡೆದಿದೆ. ಮಂಗಳೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ವಾಮಂಜೂರು ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ಖಾಸಗಿ ಬಸ್‌ನಲ್ಲಿ ಕುಳಿತಿದ್ದ ಜೋಡಿಯನ್ನ ಪ್ರಶ್ನಿಸಿ ಹಲ್ಲೆ ಮಾಡಲಾಗಿದೆ. ಬಸ್ ನಿರ್ವಾಹಕ, ಕೆಲ ಯುವಕರ ಗುಂಪಿನಿಂದ ಹಲ್ಲೆ ನಡೆದಿದೆ. ಯುವಕನ ಮೇಲೆ ಹಲ್ಲೆ ನಡೆಸುವ ವಿಡಿಯೋ ವೈರಲ್ ಆಗಿದೆ.
ನೆಲಮಂಗಲ: ಮಲ್ಲಿಕಾರ್ಜುನ ಎಂಬುವರ 70 ಸಾವಿರ ಮೌಲ್ಯದ ಬೈಕ್ ಕಳವು
ನೆಲಗದರನಹಳ್ಳಿಯಲ್ಲಿ ಮನೆ ಕಾಂಪೌಂಡ್ನಲ್ಲಿ ನಿಲ್ಲಿಸಿದ್ದ ಬೈಕ್ ಕಳವಾಗಿದೆ. ಮಲ್ಲಿಕಾರ್ಜುನ ಎಂಬುವರ 70 ಸಾವಿರ ಮೌಲ್ಯದ ಬೈಕ್ ಕಳವಾಗಿದೆ. ಬೈಕ್ ಕದ್ದೊಯ್ದ ಇಬ್ಬರು ದುಷ್ಕರ್ಮಿಗಳ ಕೃತ್ಯ ಸಿಸಿಕ್ಯಾಮಾರದಲ್ಲಿ ಸೆರೆ ಆಗಿದೆ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಜಯಪುರ: IDFC ಬ್ಯಾಂಕ್ ಉದ್ಯೋಗಿ ರಘು ಸುಧೀರ್ ನೇಣಿಗೆ ಶರಣು
IDFC ಬ್ಯಾಂಕ್ ಉದ್ಯೋಗಿ ರಘು ಸುಧೀರ್ ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ. ಟಿಪ್ಪುನಗರದಲ್ಲಿ ಸ್ನೇಹಿತರ ಜೊತೆ ಬಾಡಿಗೆ ರೂಮ್ನಲ್ಲಿದ್ದ ರಘು, ಮೂಲತಃ ಯಾದಗಿರಿ ಜಿಲ್ಲೆ ಹುಣಸಗಿ ನಿವಾಸಿ ಎಂದು ತಿಳಿದುಬಂದಿದೆ. ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿ ಉಪಾಹಾರಕ್ಕೆ ಹೊರಬಂದಿದ್ದರು. ರಘು ತಾಯಿ, ಮನೆಯವರು ಕರೆಮಾಡಿದರು ಸ್ವೀಕರಿಸಿರಲಿಲ್ಲ. ಹೀಗಾಗಿ ಬ್ಯಾಂಕ್ಗೆ ಕರೆ ಮಾಡಿ ರಘು ತಾಯಿ ವಿಚಾರಿಸಿದ್ದರು. ಬ್ಯಾಂಕ್ ಸಿಬ್ಬಂದಿ ರೂಮ್ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಕರ್ತವ್ಯನಿರತ ಗಾರ್ಮೆಂಟ್ಸ್ ಉದ್ಯೋಗಿ ಸಾವು
ಬೆಂಗಳೂರಿನಲ್ಲಿ ಕರ್ತವ್ಯನಿರತ ಗಾರ್ಮೆಂಟ್ಸ್ ಉದ್ಯೋಗಿ ಸಾವನ್ನಪ್ಪಿದ ಘಟನೆ ಗೊರಗುಂಟೆಪಾಳ್ಯದ ಇಂಡೋಸ್ ಗಾರ್ಮೆಂಟ್ಸ್ನಲ್ಲಿ ನಡೆದಿದೆ. ಗಾರ್ಮೆಂಟ್ಸ್ ಉದ್ಯೋಗಿ ಶಂಕರ್ ನಾಗ್(31) ಸಾವನ್ನಪ್ಪಿದ್ದಾರೆ. ಕೆಲಸದ ಒತ್ತಡದಿಂದ ಹೃದಯಾಘಾತವಾಗಿ ಸಾವು ಆರೋಪ ಕೇಳಿಬಂದಿದೆ. ಗಾರ್ಮೆಂಟ್ಸ್ ಬಳಿ ಮೃತ ಕಾರ್ಮಿಕನ ಶವವಿಟ್ಟು ಪ್ರತಿಭಟನೆ ನಡೆಸಲಾಗಿದೆ. ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹನ್ನೊಂದು ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ; ಯೋಧನಿಗೆ ಜೀವಾವಧಿ ಶಿಕ್ಷೆ