ಹುಬ್ಬಳ್ಳಿಯಲ್ಲಿ ಹನ್ನೊಂದು ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ; ಯೋಧನಿಗೆ ಜೀವಾವಧಿ ಶಿಕ್ಷೆ
ಯಲ್ಲಪ್ಪನ ಹೆಂಡತಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು. ಈ ಪ್ರಕರಣ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಸುಧೀರ್ಘ ವಿಚಾರಣೆ ಬಳಿಕ ನ್ಯಾಯಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಹುಬ್ಬಳ್ಳಿ: ಹನ್ನೊಂದು ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯೋಧನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹುಬ್ಬಳ್ಳಿಯ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿ ಸಿಆರ್ಪಿಎಫ್ ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರಗೆ ಜೀವಾವಧಿ ಶಿಕ್ಷೆ ಹಾಗೂ 2ಲಕ್ಷದ 20 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಯೋಧ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ. ಈ ಪ್ರಕರಣ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರಗೆ 2010 ರಲ್ಲಿ ಮದುವೆಯಾಗಿದ್ದ. ಆದರೆ ಯೋಧ ಹಾಗೂ ಆತನ ಪತ್ನಿ ನಡುವೆ ವಾಗ್ವಾದ ಉಂಟಾಗಿ ಹೆಂಡತಿ ತವರು ಸೇರಿದ್ದಳು. ಯೋಧನ ತಾಯಿಯ ಆಸ್ತಿ ತಮ್ಮ ಹೆಸರಿಗೆ ಬರುವಂತೆ ಮಾಡಲು ಸಂಬಂಧಿಗಳು ಸಹಕರಿಸಲಿಲ್ಲ ಎಂಬ ದ್ವೇಷವಿತ್ತಂತೆ. ಬೆಟದೂರು ಗ್ರಾಮದ ಯಲ್ಲಪ್ಪ ಭಜಂತ್ರಿ (38) ಸೋಮಪ್ಪ ಭಜಂತ್ರಿ (11) ಐಶ್ವರ್ಯ ಭಜಂತ್ರಿ (9)ಯನ್ನು ಬಂದೂಕಿನಿಂದ ಗಂಡು ಹಾರಿಸಿ ಹತ್ಯೆಗೈದಿದ್ದ. ಅಲ್ಲದೇ ಮದನ್ಕುಮಾರ ಎಂಬುವವರ ಮೇಳೆ ಹಲ್ಲೆ ಮಾಡಿದ್ದ.
ಯಲ್ಲಪ್ಪನ ಹೆಂಡತಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು. ಈ ಪ್ರಕರಣ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಸುಧೀರ್ಘ ವಿಚಾರಣೆ ಬಳಿಕ ನ್ಯಾಯಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಬೆದರಿಕೆ ಪ್ರೀತಿಸಿ ಮದುವೆಯಾದ ಜೋಡಿಗೆ ಯುವತಿ ಮನೆಯಿಂದ ಜೀವ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದ್ದು, ರಕ್ಷಣೆಗಾಗಿ ಜೋಡಿ ಕೊಪ್ಪಳ ಎಸ್ಪಿ ಮೋರೆ ಹೋಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾದ ವಿದ್ಯಾಶ್ರೀ, ಪ್ರಶಾಂತ್ ಕಟ್ಟಿಮನಿ ಮದುವೆಯಾದ ಪ್ರೇಮಿಗಳು. 2013ರಲ್ಲೇ ಮದುವೆ ಆ ವಿದ್ಯಾಶ್ರೀ ಮತ್ತು ಪ್ರಶಾಂತ್ ಮದುವೆಯಾಗಿದ್ದಾರೆ. ಮದುವೆ ನಂತರ ತನ್ನ ತವರು ಮನೆಯಲ್ಲೇ ವಿದ್ಯಾಶ್ರೀ ಇದ್ದಳು. ಜಾತಿ ಕಾರಣಕ್ಕೆ ಮದುವೆಗೆ ವಿರೋಧ ವ್ಯಕ್ತಪಡಿಸಿದ ಯುವತಿ ಕುಟುಂಬ, ಜೀವ ಬೆದರಿಕೆ ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ
ಬಿಪಿನ್ ರಾವತ್ಗೂ ಬೆಳಗಾವಿಗೂ ಅವಿನಾಭಾವ ನಂಟು; ಅಂದು ಭಾಷಣದಲ್ಲಿ ರಾವತ್ ಹೇಳಿದ್ದೇನು?
Published On - 12:10 pm, Thu, 9 December 21