ಬಿಪಿನ್ ರಾವತ್​ಗೂ ಬೆಳಗಾವಿಗೂ ಅವಿನಾಭಾವ ನಂಟು; ಅಂದು ಭಾಷಣದಲ್ಲಿ ರಾವತ್ ಹೇಳಿದ್ದೇನು?

ಎರಡನೇ ಬಾರಿಗೆ ಬೆಳಗಾವಿಗೆ ಆಗಮಿಸಿದ್ದ ಬಿಪಿನ್ ರಾವತ್, 2018ರಲ್ಲಿ ಅಕ್ಟೋಬರ್ 30ರಂದು ಶರ್ಕತ್ ಕದನದ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅಂದು ಬಿಪಿನ್ ರಾವತ್ ಭಾರತೀಯ ಭೂಸೇನೆ ಮುಖ್ಯಸ್ಥರಾಗಿದ್ದರು.

ಬಿಪಿನ್ ರಾವತ್​ಗೂ ಬೆಳಗಾವಿಗೂ ಅವಿನಾಭಾವ ನಂಟು; ಅಂದು ಭಾಷಣದಲ್ಲಿ ರಾವತ್ ಹೇಳಿದ್ದೇನು?
ಅಂದು ಬೆಳಗಾವಿಗೆ ಭೇಟಿ ನೀಡಿದ್ದ ಬಿಪಿನ್ ರಾವತ್
Follow us
TV9 Web
| Updated By: sandhya thejappa

Updated on:Dec 09, 2021 | 11:33 AM

ಬೆಳಗಾವಿ: ಬೆಳಗಾವಿವೂ ಮತ್ತು ಬಿಪಿನ್ ರಾವತ್ ನಡುವೆ ಅವಿನಾಭಾವ ನಂಟಿದೆ. ಬೆಳಗಾವಿಯ ಮರಾಠಾ ಲಘು ಪದಾತಿ ದಳದ ಬಗ್ಗೆ ರಾವತ್ ಹೆಚ್ಚಿನ ಅಭಿಮಾನ ಹೊಂದಿದ್ದರು. 2017ರ ನವಂಬರ್ 3ರಂದು ಎಂಎಲ್ಐಆರ್​ಸಿ ಪಾಸಿಂಗ್ ಔಟ್ ಪರೇಡ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಹೊಸದಾಗಿ ಆಯ್ಕೆಯಾದ ಸೈನಿಕರನ್ನು ಉದ್ದೇಶಿಸಿ ಬಿಪಿನ್ ರಾವತ್ ಮಾತನಾಡಿದ್ದರು. ಉಗ್ರರನ್ನ ಹೊಡೆದುರುಳಿಸುವ ಶಕ್ತಿ ಸೇನೆಗಿದೆ. ದೇಶದ ಒಳಗಿರುವ ರಾಷ್ಟ್ರ ವಿರೋಧಿ ಶಕ್ತಿಗಳನ್ನ ಮಟ್ಟಹಾಕಲು ಸಂಕಲ್ಪ ಮಾಡಿದ್ದೇವೆ ಅಂತಾ ಭಾಷಣ ಮಾಡಿದ್ದರು.

ಎರಡನೇ ಬಾರಿಗೆ ಬೆಳಗಾವಿಗೆ ಆಗಮಿಸಿದ್ದ ಬಿಪಿನ್ ರಾವತ್, 2018ರಲ್ಲಿ ಅಕ್ಟೋಬರ್ 30ರಂದು ಶರ್ಕತ್ ಕದನದ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅಂದು ಬಿಪಿನ್ ರಾವತ್ ಭಾರತೀಯ ಭೂಸೇನೆ ಮುಖ್ಯಸ್ಥರಾಗಿದ್ದರು. 1918ರಲ್ಲಿ ಅಕ್ಟೋಬರ್ 23ರಿಂದ 30ರ ವರೆಗೆ ಮಿಸಿಪಿಟೋನಿ ದೇಶದ ಶರ್ಕತ್ ಪ್ರದೇಶದಲ್ಲಿ ಒಟ್ಟೊಮನ್ ಸೈನಿಕರ ವಿರುದ್ಧ ಹೋರಾಡಿ ಮರಾಠಾ ರೆಜಿಮೆಂಟ್ ಸೈನಿಕರು ಜಯಗಳಿಸಿದ್ದರು. ಮರಾಠಾ ಲಘು ಪದಾತಿ ದಳದ ಸೈನಿಕರ ಬಗ್ಗೆ ಬಿಪಿನ್ ರಾವತ್ ಅಪಾರ ಅಭಿಮಾನ ಹೊಂದಿದ್ದರು.

ಭಾರತ ಚೀನಾ ಯುದ್ದದಲ್ಲಿ ಚೀನಿಯರನ್ನ ಹೊಡೆದಿದ್ದ ಕೋಬ್ರಾ ಕಮಾಂಡೋ ತರಬೇತಿ ಬೆಳಗಾವಿಯ ರೆಜಿಮೆಂಟ್​ನಲ್ಲಿ ಆಗಿತ್ತು. ರಾವತ್ ಕೋಬ್ರಾ ಕಮಾಂಡೋ ತರಬೇತಿ ಕುರಿತು ವಿಶೇಷ ಆಸಕ್ತಿ ತೋರಿದ್ದರು.

ಮೂರು ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ದುರ್ಮರಣ ಹೊಂದಿರುವುದು ಇಡೀ ದೇಶವೇ ದಿಗ್ಭ್ರಾಂತಿಯಾಗಿದೆ. ನಂಬಲು ಸಾಧ್ಯವಿಲ್ಲದ ದುರ್ಘಟನೆ. ಯಾಕಾಯ್ತು ಹೇಗಾಯ್ತು ಅನ್ನುವಂಥದ್ದೂ ಮುಖ್ಯ. ಆರ್​ ಫೋರ್ಸ್ ತನಿಖೆ ಮಾಡುತ್ತಿದ್ದಾರೆ. ರಾವತ್ ಗ್ರೇಟ್ ಲೀಡರ್. ಸೈನ್ಯವನ್ನು ಮುಂಚೂಚಿಯಲ್ಲಿ ನಿಂತು ಮುನ್ನಡೆಸಿದ್ದರು. ಡಿಫೆನ್ಸ್ ಪರಿಕರದಲ್ಲಿ ಆತ್ಮ ನಿರ್ಭರ ಆಗಬೇಕು ಅಂತ ಕನಸು ಕಂಡಿದ್ದರು. ಭಾರತದ ಸುರಕ್ಷಗೆ ಬಗ್ಗೆ ಅವರದೇ ದಿಟ್ಟ ನಿಲುವು ತೆಗೆದುಕೊಂಡಿದ್ದರು.  ಅಂಥ ಮಹಾನ್ ವ್ಯಕ್ತಿಯನ್ನು ಇಡೀ ಭಾರತದ ದೇಶ ಕಳೆದುಕೊಂಡಿದೆ. ಅವರ ಬದುಕಿನ ಚರಿತ್ರೆ ತ್ಯಾಗ ಬಲಿದಾನ ಮಕ್ಕಳಿಗೆ ಹೇಳಿ ಕೊಡಬೇಕಿದೆ. ಕರ್ನಾಟಕದ ಜೊತೆ ಅವರ ನಂಟಿತ್ತು. ಬೆಂಗಳೂರಿಗೆ ಹಲವಾರು ಬಾರಿ ಅವರು ಬಂದಿದ್ದಾರೆ. ಕೂರ್ಗ್ ಜೊತೆಗೆ ಅವರಿಗೆ ಅವಿನಾಭಾವ ಸಂಬಂಧ ಇತ್ತು ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ

ತೆಲಂಗಾಣ ಸರ್ಕಾರಿ ಬಸ್​​ನಲ್ಲಿ ಜನಿಸಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಭರ್ಜರಿ ಗಿಫ್ಟ್​ ನೀಡಿದ ಸಾರಿಗೆ ಸಂಸ್ಥೆ; ಜೀವನ ಪರ್ಯಂತ ಉಪಯೋಗವಾಗುವಂಥದ್ದು ಇದು !

ಬಿಪಿನ್​ ರಾವತ್ ನಿಧನದಿಂದ ತೆರವಾದ ಸಿಡಿಎಸ್​ ಹುದ್ದೆ ಮುಂದೆ ಯಾರಿಗೆ?-ಬಲವಾಗಿ ಕೇಳಿಬರುತ್ತಿರುವುದು ಇವರ ಹೆಸರು

Published On - 11:27 am, Thu, 9 December 21

ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ