ಸಂಘರ್ಷಕ್ಕೆ ಕಾರಣವಾಯ್ತು ಮಸೀದಿ ಭೂ ವಿವಾದ: ಮುಸ್ಲಿಂ ಕುಟುಂಬ, ಆಡಳಿತ ಮಂಡಳಿ ಕಿತ್ತಾಟ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 28, 2024 | 5:43 PM

ಮಂಗಳೂರಿನ ಬಿಕರ್ನಕಟ್ಟೆಯ ಅಹ್ಸನುಲ್ ಮಸೀದಿಯ ಖಬರಸ್ತಾನದ ಭೂಮಿಯನ್ನು ಕಬಳಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ. ಟಿಪ್ಪು ಸುಲ್ತಾನ್ ಕಾಲದ ಈ ಖಬರಸ್ತಾನದ ಭೂಮಿಯನ್ನು ಉಸ್ಮಾನ್ ಕುಟುಂಬ ಕಬಳಿಸಿದೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆ ವೇಳೆ ಮಹಿಳೆಯೊಬ್ಬರು ದೊಣ್ಣೆಯಿಂದ ದಾಳಿ ನಡೆಸಿ ಬ್ಯಾನರ್ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಘರ್ಷಕ್ಕೆ ಕಾರಣವಾಯ್ತು ಮಸೀದಿ ಭೂ ವಿವಾದ: ಮುಸ್ಲಿಂ ಕುಟುಂಬ, ಆಡಳಿತ ಮಂಡಳಿ ಕಿತ್ತಾಟ
ಸಂಘರ್ಷಕ್ಕೆ ಕಾರಣವಾಯ್ತು ಮಸೀದಿ ಭೂ ವಿವಾದ: ಮುಸ್ಲಿಂ ಕುಟುಂಬ, ಆಡಳಿತ ಮಂಡಳಿ ಕಿತ್ತಾಟ
Follow us on

ಮಂಗಳೂರು, ಡಿಸೆಂಬರ್​ 28: ಟಿಪ್ಪು ಸುಲ್ತಾನ್ ಕಾಲದ ಖಬರಸ್ತಾನ ಭೂಮಿ (land) ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದ್ದು, ಮಸೀದಿ ಆಡಳಿತ ಮಂಡಳಿಯಿಂದ ಪ್ರತಿಭಟನೆ ಮಾಡಲಾಗಿದೆ. ಇದೇ ವೇಳೆ ಭೂಕಬಳಿಕೆ ಆರೋಪ ಹೊತ್ತ ಮಹಿಳೆ ಹಾಗೂ ಕುಟುಂಬದಿಂದ ರಂಪಾಟ ಮಾಡಲಾಗಿದ್ದು, ದೊಣ್ಣೆಯಿಂದ ದಾಳಿ ನಡೆಸಿ ಪ್ರತಿಭಟನಾಕಾರನ ಶರ್ಟ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕರ್ನಕಟ್ಟೆಯ ಅಹ್ಸನುಲ್ ಮಸೀದಿಯಲ್ಲಿ ಘಟನೆ ನಡೆದಿದೆ.

ಪ್ರಕರಣದ ಬಗ್ಗೆ ಅಹ್ಸನುಲ್​ ಮಸೀದಿ ಆಡಳಿತ ಮಾತನಾಡಿದ್ದು, ಹಲವು ವರ್ಷಗಳಿಂದ ಮಸೀದಿ ಪಕ್ಕದ 30 ಸೆಂಟ್ಸ್ ಜಾಗ ಖಬರಸ್ತಾನ ಆಗಿತ್ತು. ನೂರಾರು ವರ್ಷಗಳಿಂದ ಪೂರ್ವಜರ ಮೃತದೇಹ ದಫನ ಮಾಡಲಾಗಿದೆ. ನೂರಾರು ಮುಸ್ಲಿಂ ಕುಟುಂಬಗಳ ಶವ ಧಪನ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಅದು ದಫನ ಭೂಮಿ ಅಲ್ಲ, ನಮ್ಮ ಖಾಸಗಿ ಜಾಗವೆಂದು ಉಸ್ಮಾನ್ ಕುಟುಂಬ ಆರೋಪಿಸುತ್ತಿದೆ.

ಇದನ್ನೂ ಓದಿ: ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂ ವಂಚನೆ: ಸ್ಪಷ್ಟನೆ ನೀಡಿದ ಮಂಗಳೂರು ಸಮಾಜ ಸೇವಾ ಬ್ಯಾಂಕ್

30 ಸೆಂಟ್ಸ್ ಜಾಗ ತಮ್ಮ ಹೆಸರಿನಲ್ಲೇ ಇರುವುದಾಗಿ ಉಸ್ಮಾನ್ ಕುಟುಂಬದ ವಾದವಾಗಿದ್ದು, ಆದರೆ ಜಾಗ ತಮ್ಮದು ಎಂದು ಮಸೀದಿ ಆಡಳಿತ ಮಂಡಳಿ ಹೇಳುತ್ತಿದೆ. ಹೊಡೆದಾಡಿಕೊಳ್ಳುವ ಹಂತಕ್ಕೂ ಮುಸ್ಲಿಂ ಕುಟುಂಬ ಹಾಗೂ ಮಸೀದಿ ಆಡಳಿತ ಮಂಡಳಿಯ ಕಿತ್ತಾಟ ತಲುಪಿದೆ. ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜೆಡಿಎಸ್ ಮಾಜಿ ಶಾಸಕ ವಿರುದ್ಧ ಸರ್ಕಾರಿ ಭೂಮಿ ಒತ್ತುವರಿ ಆರೋಪ

ಬೆಂಗಳೂರು ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಕೋಲಾರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕು ಚಿನ್ನಪಲ್ಲಿ ಬಳಿ ಹತ್ತಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ಮಾಜಿ ಶಾಸಕ ಸ್ಥಳೀಯರು ಹಾಗೂ ಅಂಬೇಡ್ಕರ್ ಯುವ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸೈಬರ್ ವಂಚಕರಿಗೆ ಭಾರತದಿಂದ 500ಕ್ಕೂ ಹೆಚ್ಚು ಸಿಮ್ ಪೂರೈಸಿದ್ದ ಆರೋಪಿ ಬಂಧನ

ದೇವನಹಳ್ಳಿ ಜೆಡಿಎಸ್‌ನ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ದ ಸರ್ಕಾರಿ ಭೂಮಿ ಒತ್ತುವರಿ ಆರೋಪ ಇದಾಗಿದ್ದು, ಚಿನ್ನಪಲ್ಲಿ ಸರ್ವೆ ನಂ-20 ರಲ್ಲಿ ಒಂದಷ್ಟು ಜಮೀನು ಖರೀದಿ ಮಾಡಿರುವ ಅವರು ಪಕ್ಕದಲ್ಲೆ ಇರುವ ಸರ್ವೇ ನಂ.21 ರಲ್ಲಿ ಇರುವ ಸರ್ಕಾರಿ ಗೋಮಾಳ ಭೂಮಿ ಮೇಲೂ ಕಣ್ಣು ಹಾಕಿದ್ದಾರೆ. ಸುಮಾರು 76 ಎಕರೆ ಗೋಮಾಳ ಭೂಮಿಯಲ್ಲಿ ಹತ್ತಾರು ಎಕರೆ ಭೂಮಿಯನ್ನ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.