ಮಂಗಳೂರು: ಬಾಲಕಿಗೆ ಡ್ರಗ್ಸ್ ನೀಡಿ ಗ್ಯಾಂಗ್ರೇಪ್ ಮಾಡಿದ್ದವರನ್ನು ಬಂಧಿಸಲಾಗಿದೆ. ಉಳ್ಳಾಲ ಠಾಣೆ ಪೊಲೀಸರಿಂದ ಮೂವರು ಆರೋಪಿಗಳ ಸೆರೆಯಾಗಿದೆ. ಅಪ್ರಾಪ್ತೆಗೆ ಮದ್ಯ, ಡ್ರಗ್ಸ್, ಗಾಂಜಾ ನೀಡಿ ಗ್ಯಾಂಗ್ರೇಪ್ ಮಾಡಿದ ಘಟನೆ ಮಂಗಳೂರು ಹೊರವಲಯದ ಅಪಾರ್ಟ್ಮೆಂಟ್ನಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಇಬ್ಬರು, ಮಂಗಳೂರಿನ ಓರ್ವ ಆರೋಪಿ ಬಂಧನ ಮಾಡಲಾಗಿದೆ. ಈ ಹಿಂದೆ ಗುಡ್ಡ ಪ್ರದೇಶಕ್ಕೆ ಕರೆದೊಯ್ದು ಡ್ರಗ್ಸ್ ನೀಡಿದ್ದರು. ಆ ಸಂದರ್ಭದಲ್ಲೂ ಪೋಕ್ಸೊ ಕಾಯ್ದೆಯಡಿ ಕೇಸ್ ಆಗಿತ್ತು. ಮತ್ತೆ ಅದೇ ಬಾಲಕಿಗೆ ಡ್ರಗ್ಸ್ ಆಮಿಷವೊಡ್ಡಿ ಗ್ಯಾಂಗ್ರೇಪ್ ನಡೆದಿರುವುದು ತಿಳಿದುಬಂದಿತ್ತು.
PFI ಮುಖಂಡರನ್ನ ವಿಚಾರಣೆಗೆ ಕರೆದಿದ್ದಕ್ಕೆ ಪ್ರತಿಭಟನೆ ನಡೆಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಹಳೆಗೇಟ್ ಬಳಿ ತಲ್ವಾರ್ ದಾಳಿ ನಡೆದಿತ್ತು. ಪ್ರಕರಣ ಸಂಬಂಧ ಮೂವರನ್ನ ವಿಚಾರಣೆಗೆ ಕರೆತಂದಿದ್ದರು. ಪಿಎಫ್ಐ ಮುಖಂಡರಾದ ಹಮೀದ್ ಮೆಜೆಸ್ಟಿಕ್, ಝಕಾರಿಯ ಕೊಡಿಪ್ಪಾಡಿ ಹಾಗೂ ಮುಸ್ತಫಾ ವಿಚಾರಣೆಗೆ ಕರೆತರಲಾಗಿತ್ತು. ಮೂವರನ್ನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಧರಣಿ ನಡೆದಿದೆ.
ಮಂಗಳೂರು: ನೀರುಮಾರ್ಗ ಬಳಿ ಕಾರಿನಲ್ಲಿದ್ದ ವ್ಯಕ್ತಿ ಮೇಲೆ ಹಲ್ಲೆ; ಐವರ ಬಂಧನ
ನೀರುಮಾರ್ಗ ಬಳಿ ಕಾರಿನಲ್ಲಿದ್ದ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ಮಾಡಿದ್ದ ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶ್, ಚೇತನ್ ಕುಮಾರ್, ಕೀರ್ತಿರಾಜ್ ಸುವೀತ್, ಪರೀಕ್ಷಿತ್ ಬಂಧನ ಮಾಡಲಾಗಿದೆ. ಡಿ.10 ರಂದು ರಾತ್ರಿ ನಡೆದಿದ್ದ ಹಲ್ಲೆಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳಲಾಗಿದೆ. ಬೀಯರ್ ಬಾಟಲಿಗಳಿಂದ ಮೊಹಮ್ಮದ್ ರಿಯಾಜ್ ಮೇಲೆ ಹಲ್ಲೆ ಮಾಡಲಾಗಿತ್ತು. ಇದೀಗ ಮಂಗಳೂರು ಗ್ರಾಮಾಂತರ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ.
ಘಟನೆ ಸಂಬಂಧ ಸ್ಫೋಟಕ ಮಾಹಿತಿ ಬಹಿರಂಗ
ಮಾನವ ಕಳ್ಳಸಾಗಾಣಿಕೆ ಮತ್ತು ವೇಷ್ಯವಾಟಿಕೆ ವಿಚಾರದಲ್ಲಿ ಮಾರಾಮಾರಿ ನಡೆದಿತ್ತು. ವಿಚಾರಣೆ ವೇಳೆ ಆರೋಪಿಗಳಿಂದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಅಡ್ಯಾರು ಪದವು ನಿವಾಸಿ ಮೊಹಮ್ಮದ್ ರಿಯಾಜ್ ಮೇಲೆ ಹಲವು ಪ್ರಕರಣ ದಾಖಲಾಗಿದೆ. ಮಹಿಳೆಯರು, ಯುವತಿಯರು, ವಿದ್ಯಾರ್ಥಿನಿಯರ ಕಳ್ಳಸಾಗಣೆ, ಹುಡುಗಿಯರನ್ನು ವೇಷ್ಯಾವಾಟಿಕೆಗೆ ತಳ್ಳುತ್ತಿದ್ದ ರಿಯಾಜ್ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯುವತಿಯ ಜೊತೆ ಹೋಗುವಾಗ ಹಲ್ಲೆ ನಡೆದಿದೆ. ಹಾಸನ, ಮಂಡ್ಯ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ವಿವಿಧ ಭಾಗದಿಂದ ಯುವತಿಯರ ಕಳ್ಳಸಾಗಾಟ ಮಾಡುತ್ತಿದ್ದ. ಈ ಬಗ್ಗೆ ಮಂಗಳೂರಿನ ವಿವಿಧ ಠಾಣೆಗಳಲ್ಲಿ ಐದಾರು ಪ್ರಕರಣ ದಾಖಲು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳು ಹಲ್ಲೆ ಮಾಡಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ಹಾವೇರಿ: ಆತ್ಮಹತ್ಯೆಗೆ ಯತ್ನಿಸಿದ್ದ ಪತ್ನಿ ಸಾವಿನ ಸುದ್ದಿ ತಿಳಿದು ಪತಿ ನೇಣಿಗೆ
ಆತ್ಮಹತ್ಯೆಗೆ ಯತ್ನಿಸಿದ್ದ ಪತ್ನಿ ಸಾವಿನ ಸುದ್ದಿ ತಿಳಿದು ಪತಿ ನೇಣಿಗೆ ಶರಣಾದ ದಾರುಣ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಶಂಕ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆಯಿಂದ ಬೇಸತ್ತು ತಾಯಿ, ಮಗಳು ವಿಷ ಸೇವಿಸಿದ್ದರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವಾಣಿಶ್ರೀ ಅಗಡಿ (50) ಸಾವನ್ನಪ್ಪಿದ್ದರು. ಪುತ್ರಿ ಕೀರ್ತಿ (21) ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಮಧ್ಯೆ, ಶಂಕ್ರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅತಿವೃಷ್ಟಿಯಿಂದ ಹತ್ತಿ, ಮೆಕ್ಕೆಜೋಳದ ಬೆಳೆ ಹಾನಿಯಾಗಿತ್ತು. ಬ್ಯಾಂಕ್, ಕೈಸಾಲ ಸೇರಿ ಕುಟುಂಬ ₹6.50 ಲಕ್ಷ ಸಾಲಹೊಂದಿತ್ತು. ಸಾಲಬಾಧೆ, ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬದ ದಂಪತಿ ಶಂಕ್ರಪ್ಪ ಅಗಡಿ(56), ವಾಣಿಶ್ರೀ ಅಗಡಿ(50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆನೇಕಲ್: ಪ್ರೀತಿ ನಿರಾಕರಣೆ ಹಿನ್ನೆಲೆ ಯುವತಿ ನೇಣಿಗೆ ಶರಣು
ಪ್ರೀತಿ ನಿರಾಕರಣೆ ಹಿನ್ನೆಲೆ ಯುವತಿ ನೇಣಿಗೆ ಶರಣಾದ ದುರ್ಘಟನೆ ಆನೇಕಲ್ ತಾಲೂಕಿನ ಇಗ್ಗಲೂರು ಬಳಿ ನಡೆದಿದೆ. ಸುಷ್ಮಾ (19) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪ್ರೀತಿಸಿದ ಹುಡುಗ ಮಾತನಾಡುತ್ತಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವ್ಯಾಪಾರ ಮಾಡುವ ಸೋಗಿನಲ್ಲಿ ಬಂದು ದರೋಡೆ
ವ್ಯಾಪಾರ ಮಾಡುವ ಸೋಗಿನಲ್ಲಿ ಬಂದು ದರೋಡೆ ಮಾಡಿದ್ದ 6 ಆರೋಪಿಗಳ ಬಂಧನ ಮಾಡಲಾಗಿದೆ. ಅನಿತಾ, ದೀಪಾ, ವಿಜಯ್, ನವೀನ್, ಮಹಾಲಿಂಗಯ್ಯ, ಚಂದ್ರಶೇಖರ್ ಬಂಧಿಸಲಾಗಿದೆ. ಬಂಧಿತರಿಂದ 9.50 ಲಕ್ಷ ಬೆಲೆಬಾಳುವ ಚಿನ್ನಾಭರಣ, ಒಂದು ಬೈಕ್, 63 ಸಾವಿರ ನಗದು, ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ. ಬಸವೇಶ್ವರ ನಗರ ನಿವಾಸಿಯೊಬ್ಬರ ಬಳಿ ದರೋಡೆ ಮಾಡಿದ ಗ್ಯಾಂಗ್ ಬಂಧನಕ್ಕೆ ಒಳಗಾಗಿದೆ.
ಬೆಳಗಾವಿ: ಕಾಂಗ್ರೆಸ್ ಸಂಭ್ರಮಾಚರಣೆಯಲ್ಲಿ ಕೀಸೆಗಳ್ಳರ ಹಾವಳಿ
ಕಾಂಗ್ರೆಸ್ ಸಂಭ್ರಮಾಚರಣೆಯಲ್ಲಿ ಕೀಸೆಗಳ್ಳರ ಹಾವಳಿ ಕಂಡುಬಂದಿದೆ. ಮೃತ್ಯುಂಜಯ ಎಂಬುವವರ ಜೇಬಿಗೆ ಕತ್ತರಿ ಹಾಕಿದ ಖದೀಮರು 25 ಸಾವಿರ ಹಣ ದೋಚಿದ್ದಾರೆ. ಹಣ ಕಳೆದುಕೊಂಡು ಮೃತ್ಯುಂಜಯ ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ ಪಿಯು ಕಾಲೇಜು ಮುಂಭಾಗದಲ್ಲಿ ಘಟನೆ ನಡೆದಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Bengaluru Crime: ಕೆಲಸ ಕೊಡಿಸುವ ಆಸೆ ಹುಟ್ಟಿಸಿ ಯುವತಿಯನ್ನು ವೇಶ್ಯಾವಾಟಿಕೆಗೆ ಬಳಕೆ; ಪೊಲೀಸರ ದಾಳಿ ವೇಳೆ ಜಾಲ ಪತ್ತೆ
ಇದನ್ನೂ ಓದಿ: Crime News: ತಾಯಿ ಮಗಳ ಸರ ಕದಿಯಲು ಯತ್ನ; ಸರಗಳ್ಳರನ್ನು ಚೇಸ್ ಮಾಡಿ ಸೆರೆಹಿಡಿದ ಪೊಲೀಸರು!