ಲಾಟರಿ ಗೆದ್ದಿರುವುದಾಗಿ ಹೇಳಿದ್ದರು, ಮುಂದೆ ಆ ನಿವೃತ್ತ ಮಹಿಳೆ ತಮ್ಮ ಜೀವಮಾನ ಉಳಿತಾಯದ 72 ಲಕ್ಷ ಕಳೆದುಕೊಂಡರು!

|

Updated on: Nov 08, 2023 | 10:37 AM

ಸಂತ್ರಸ್ತೆಗೆ ಅರಿವಿಲ್ಲದೆ, ದುಷ್ಕರ್ಮಿಗಳು ಅಕ್ಟೋಬರ್ 26 ಮತ್ತು ನವೆಂಬರ್ 2 ರ ನಡುವೆ ಅವರ ಖಾತೆಗಳಿಗೆ 72.9 ಲಕ್ಷ ರೂ. ವರ್ಗಾಯಿಸಿಕೊಂಡುಬಿಟ್ಟಿದ್ದಾರೆ. ಸಂತ್ರಸ್ತೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗಲೇ ಘಟನೆ ಬೆಳಕಿಗೆ ಬಂದಿರುವುದು. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಟರಿ ಗೆದ್ದಿರುವುದಾಗಿ ಹೇಳಿದ್ದರು, ಮುಂದೆ ಆ ನಿವೃತ್ತ ಮಹಿಳೆ ತಮ್ಮ ಜೀವಮಾನ ಉಳಿತಾಯದ 72 ಲಕ್ಷ ಕಳೆದುಕೊಂಡರು!
ಆ ನಿವೃತ್ತ ಮಹಿಳೆ ತಮ್ಮ ಜೀವಮಾನ ಉಳಿತಾಯದ 72 ಲಕ್ಷ ಕಳೆದುಕೊಂಡರು!
Follow us on

ಮಂಗಳೂರು: ಮಹಿಳೆಯೊಬ್ಬರು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದು, ನಿವೃತ್ತಿಯ ಸಂದರ್ಭದಲ್ಲಿ (Retired woman) ಎರಡು ಬ್ಯಾಂಕ್ ಖಾತೆಗಳಿಗೆ (bank accounts) ವರ್ಗಾವಣೆಯಾಗಿದ್ದ 72.9 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಪೊಲೀಸರ ಪ್ರಕಾರ, ಇಬ್ಬರು ಅಪರಿಚಿತ ವ್ಯಕ್ತಿಗಳು ತಮ್ಮನ್ನು ತಾವು ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂದು ಪರಿಚಯಿಸಿಕೊಂಡು ವಾಟ್ಸಾಪ್ ಮೂಲಕ ತನ್ನನ್ನು ಸಂಪರ್ಕಿಸಿದ್ದರು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ನಂತರ, ಅವರು ವಾಟ್ಸಾಪ್‌ನಲ್ಲಿ (WhatsApp) ವಿವಿಧ ಮೊಬೈಲ್​​ ಸಂಖ್ಯೆಗಳ ಮೂಲಕ ಸಂಪರ್ಕದಲ್ಲಿದ್ದರು. ಲಾಟರಿ (lottery money) ಗೆದ್ದಿರುವುದಾಗಿ ಹೇಳಿದ್ದರು.

ಮುಂದೆ ಲಾಟರಿ ಹಣವನ್ನು ಗೆದ್ದ ಮೇಲೆ, ಆಕೆಯ ಬ್ಯಾಂಕ್ ಖಾತೆಗಳನ್ನು ಅವರು ಸೂಚಿಸಿದ ಫೋನ್ ಸಂಖ್ಯೆಗೆ ಲಿಂಕ್ ಮಾಡಬೇಕೆಂದು ಆರೋಪಿಗಳು ಸಂತ್ರಸ್ತೆಗೆ ಮನವರಿಕೆ ಮಾಡಿದರು. ಅದರಂತೆ ಸಂತ್ರಸ್ತೆ ಆರೋಪಿಯು ಸೂಚಿಸಿದ ಫೋನ್ ಸಂಖ್ಯೆಯನ್ನು ತನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿದ್ದಾರೆ. ಅಕ್ಟೋಬರ್ 26 ರಂದು, ಸಂತ್ರಸ್ತೆ ನಿವೃತ್ತಿಯ ನಂತರ ಸುಮಾರು 50.5 ಲಕ್ಷ ರೂಪಾಯಿಗಳನ್ನು ಅವರ ಎಸ್‌ಬಿಐ ಖಾತೆಗೆ ವರ್ಗಾಯಿಸಿದ್ದಾರೆ. ಅದೇ ವೇಳೆ ಅಕ್ಟೋಬರ್ 31 ರಂದು ಅವರು ತಮ್ಮ ಇಂಡಿಯನ್ ಬ್ಯಾಂಕ್ ಖಾತೆಗೆ 22.3 ಲಕ್ಷ ರೂಪಾಯಿ ಪಡೆದಿದ್ದಾರೆ.

Also read: ಅವರ ಪ್ರೀತಿಗೆ ಎರಡು ಮುದ್ದಾದ ಹೆಣ್ಣು ಮಕ್ಕಳಿದ್ದವು – ಇದೀಗ ಪತ್ನಿಯ ನಿಗೂಢ ಸಾವು, ಗಂಡ ನಾಪತ್ತೆ 

ಸಂತ್ರಸ್ತೆಗೆ ಅರಿವಿಲ್ಲದೆ, ದುಷ್ಕರ್ಮಿಗಳು ಅಕ್ಟೋಬರ್ 26 ಮತ್ತು ನವೆಂಬರ್ 2 ರ ನಡುವೆ ಅವರ ಖಾತೆಗಳಿಗೆ 72.9 ಲಕ್ಷ ರೂ. ವರ್ಗಾಯಿಸಿಕೊಂಡುಬಿಟ್ಟಿದ್ದಾರೆ. ಸಂತ್ರಸ್ತೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗಲೇ ಘಟನೆ ಬೆಳಕಿಗೆ ಬಂದಿರುವುದು. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ (CEN police station) ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ