ಅವರ ಪ್ರೀತಿಗೆ ಎರಡು ಮುದ್ದಾದ ಹೆಣ್ಣು ಮಕ್ಕಳಿದ್ದವು – ಇದೀಗ ಪತ್ನಿಯ ನಿಗೂಢ ಸಾವು, ಗಂಡ ನಾಪತ್ತೆ
ಎರಡು ವರ್ಷದ ಒಬ್ಬಳು ಹಾಗೂ ಎಳು ತಿಂಗಳ ಇನ್ನೊಬ್ಬಳು ಹೀಗೆ ಇಬ್ಬರು ಮಕ್ಕಳಿದ್ದಾರೆ ಆ ದಂಪತಿಗೆ. ಹೆರಿಗೆ ಆದ ಬಳಿಕ ತವರಿನಿಂದ ಈಗ ಪತಿಯ ಮನೆ ಸೇರಿ ಎರಡು ತಿಂಗಳಾಗಿದೆ ಅಷ್ಟೇ. ಅಷ್ಟರಲ್ಲಿಯೇ ಸಾವನ್ನಪ್ಪಿದ್ದು ದುರಂತವೇ ಸರಿ. ಅವರ ತಂದೆ ಹೇಳುವಂತೆ ನಿಜಕ್ಕೂ ಇದು ಆತ್ಮಹತ್ಯೆಯಲ್ಲ. ಅವರೇ ಹೊಡೆದು ಹಾಕಿ ನಂತರ, ನೇಣು ಬಿಗಿದಿದ್ದಾರೆ.
ಅವರಿಬ್ಬರು ಪ್ರೀತಿಯಿಂದ ಇದ್ದರು (Lovely couple). ಒಂದಾದ ಮೇಲೆ ಒಂದರಂತೆ ಮುದ್ದಾದ ಎರಡು ಹೆಣ್ಣು ಮಕ್ಕಳು ಹುಟ್ಟಿದ್ದವು. ಮಕ್ಕಳ ಜನ್ಮ ದಿನ ಬಂದ್ರೆ ಸಾಕು ಇಡಿ ಮನೆಯಲ್ಲಿಸಂಭ್ರಮ. ಕೇಕ್ ತಂದು ಸಂಭ್ರಮಿಸುವುದು ಪದ್ದತಿ. ಆದ್ರೆ ಇತ್ತೀಚಿಗೆ ಆ ಆಸಾಮಿ ಸ್ವಲ್ಪ ಯಡವಟ್ಟುಗಳನ್ನ ಮಾಡುತ್ತಿದ್ದ. ಪತ್ನಿಗೆ ಹಿಂಸೆ ಕೊಡುತ್ತಿದ್ದ. ಇದೆಲ್ಲಾ ಗೊತ್ತಾಗಿದ್ದು ಇಂದು ಪತ್ನಿಯ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಾಗಲೇ. ಇಲ್ಲಿದೆ ನೋಡಿ ಮರ್ಡರ್ ಶಂಕೆ ಸ್ಚೋರಿ. ಮನೆ ಮುಂದೆ ಹತ್ತಾರು ಜನ ಸೇರಿದ್ದಾರೆ. ಓರ್ವ ತಾಯಿ ಮಾತ್ರ ಬಾಯಿ ಬಾಯಿ ಬಡಿದುಕೊಂಡು ಅಳುತ್ತಿದ್ದಾಳೆ. ಹಿಡಿಶಾಪ ಹಾಕುತ್ತಿದ್ದಾಳೆ. ತನ್ನ ಸಂಗ್ರಹದಲ್ಲಿ ಇದ್ದ ಬಹುತೇಕ ಬೈಗುಳವನ್ನ ಖಾಲಿ ಮಾಡುವಷ್ಟು ಆಕ್ರೋಶ ಆ ಮಹಾತಾಯಿಯ ಮುಖದಲ್ಲಿ ಕಂಡು ಬರುತ್ತಿತ್ತು. ಕಾರಣ ಮಗಳನ್ನ ಕಳೆದುಕೊಂಡವರಿಗೆ ಗೊತ್ತು ಆ ಕಷ್ಟ ಎಂತಹದ್ದು ಎಂಬುದು. ನಾವು ಹೇಳುತ್ತಿರುವುದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ (Harihara, Davangere District) ರಾಜನಹಳ್ಳಿ ಘಟನೆ ಬಗ್ಗೆ. ಇಲ್ಲೊಬ್ಬ 32 ವರ್ಷದ ತೇಜಸ್ವಿನಿ ಉರ್ಫ್ ನೀಲಮ್ಮ ಎಂಬ ಮಹಿಳೆಯ ಶವವು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ಕೆಲ ದಿನಗಳಿಂದ ಪತಿ ಹಾಗೂ ಪತಿ ಮನೆಯವರ ಜೊತೆ ಸ್ವಲ್ಪ ಮಟ್ಟಿನ ಮನಸ್ತಾಪವಿತ್ತು.
ಎರಡು ವರ್ಷದ ಒಬ್ಬಳು ಹಾಗೂ ಎಳು ತಿಂಗಳ ಇನ್ನೊಬ್ಬಳು. ಹೀಗೆ ಇಬ್ಬರು ಮಕ್ಕಳಿದ್ದಾರೆ. ಹೆರಿಗೆ ಆದ ಬಳಿಕ ತವರಿನಿಂದ ಈಗ ಪತಿಯ ಮನೆ ಸೇರಿ ಎರಡು ತಿಂಗಳಾಗಿದೆ ಅಷ್ಟೇ. ಅಷ್ಟರಲ್ಲಿಯೇ ಸಾವನ್ನಪ್ಪಿದ್ದು ದುರಂತವೇ ಸರಿ. ಅವರ ತಂದೆ ಹೇಳುವಂತೆ ನಿಜಕ್ಕೂ ಇದು ಆತ್ಮಹತ್ಯೆಯಲ್ಲ. ಅವರೇ ಹೊಡೆದು ಹಾಕಿ ನಂತರ ನೇಣು ಬಿಗಿದಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಘಟನೆ ನಡೆಯುತ್ತಿದ್ದಂತೆ ತೇಜಸ್ವಿನಿ ಅವರ ಪತಿ ಗುಡದಯ್ಯ ಸೇರಿ ಬಹುತೇಕರು ನಾಪತ್ತೆ ಆಗಿದ್ದಾರೆ (Husband Missing).
ತೇಜಸ್ವಿನಿ ದಾವಣಗೆರೆ ತಾಲೂಕಿನ ಹುಣಸೆಕಟ್ಟೆ ಗ್ರಾಮದ ನಿವಾಸಿ. ಗುಡದಯ್ಯ ಹರಿಹರ ತಾಲೂಕಿನ ರಾಜನಹಳ್ಳಿ ನಿವಾಸಿ. ವಿವಿಧ ಸಂಘಟನೆಗಳಲ್ಲಿ ಗುರ್ತಿಸಿಕೊಂಡು ಸಮಾಜ ಸುಧಾರಣೆ ಕೆಲ್ಸಾ ಮಾಡುತ್ತಿದ್ದ. ಆದ್ರೆ ತನ್ನ ಸಂಸಾರವನ್ನ ಸರಿ ಮಾಡಿಕೊಳ್ಳಲಾಗದೇ ಪತ್ನಿಯ ಸಾವಿಗೆ ಕಾರಣವಾಗಿ ತಲೆ ಮರೆಸಿಕೊಂಡಿದ್ದಾರೆ. ಗುಡದಯ್ಯ ಹಾಗೂ ಅವರ ಸಹೋದರಿ ಸೇರಿ ಸಾವನ್ನಪ್ಪಿದ ತೇಜಸ್ವಿನಿಗೆ ಕಿರುಕಳ ನೀಡಿದ್ದರಂತೆ. ವಿಷಯ ತಿಳಿಯುತ್ತಿದ್ದಂತೆ ಹರಿಹರ ತಹಶಿಲ್ದಾರ ಪೃಥ್ವಿ ಅವರು ಘಟನಾ ಸ್ಥಳಕ್ಕೆ ಭೇಟಿ ಪರಶೀಲನೆ ನೆಡೆಸಿ ಮೃತಳ ಸಂಬಂಧಿಕರ ಜೊತೆ ಮಾತು ಕತೆ ನಡೆಸಿದರು.
ಮನೆಯಲ್ಲಿ ಸೀರೆಯಿಂದ ಕುತ್ತಿಗೆ ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಸಾವಿಗೆ ಕಾರಣ ಎನು ಎಂಬುವಂತಹದ್ದು ನಿಗೂಢವಾಗಿದೆ. ಪುಟ್ಟ ಇಬ್ಬರು ಮಕ್ಕಳನ್ನ ಅನಾಥರನ್ನಾಗಿ ಮಾಡಿ ಸಾವನ್ನಪ್ಪಲು ಕಾರಣ ಎನು. ಇನ್ನೂ ಬಾಳಿ ಬದುಕಬೇಕಾದ ತೇಜಸ್ವಿನಿ ಅವರ ಈ ದಿಟ್ಟ ನಿರ್ಧಾರದ ಹಿಂದೆ ಇರುವ ನಿಗೂಢ ಕಾರಣ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಹಚ್ಚಬೇಕಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ