ಜೆರೋಸಾ ಶಿಕ್ಷಕಿ ವಿರುದ್ದ ಆರೋಪ ಮಾಡಿದ್ದ ಪೋಷಕಿಗೆ ಬೆದರಿಕೆ ಕರೆ: ಕೊನೆಗೂ ಎಫ್ಐಆರ್ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 21, 2024 | 3:08 PM

ಮಂಗಳೂರಿನ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದಾರೆಂಬ ಆರೋಪ ವಿಚಾರದ ಬಗ್ಗೆ ತನಿಖಾ ಸಮಿತಿ ತನಿಖೆ ಮುಂದುವರೆದಿದೆ. ಇದರ ನಡುವೆ ಜೆರೋಸಾ ಶಿಕ್ಷಕಿ ವಿರುದ್ದ ಆರೋಪ ಮಾಡಿದ್ದ ಪೋಷಕಿಗೆ ವಿದೇಶದಿಂದ ನಿರಂತರ ಬೆದರಿಕೆ ಕರೆ ವಿಚಾರವಾಗಿ ಪೋಷಕಿ ಕವಿತಾ ನೀಡಿದ ದೂರಿನ ಆಧಾರದ ಮೇಲೆ ಕೊನೆಗೂ ಎಫ್ಐಆರ್​ ದಾಖಲಾಗಿದೆ.

ಜೆರೋಸಾ ಶಿಕ್ಷಕಿ ವಿರುದ್ದ ಆರೋಪ ಮಾಡಿದ್ದ ಪೋಷಕಿಗೆ ಬೆದರಿಕೆ ಕರೆ: ಕೊನೆಗೂ ಎಫ್ಐಆರ್ ದಾಖಲು
ಮಂಗಳೂರಿನ ಜೆರೋಸಾ ಶಾಲೆ
Follow us on

ಮಂಗಳೂರು, ಫೆಬ್ರವರಿ 21: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಧರ್ಮ ಅವಹೇಳನ ಮಾಡಿದ ಜೆರೋಸಾ ಶಿಕ್ಷಕಿ (teacher) ವಿರುದ್ದ ಆರೋಪ ಮಾಡಿದ್ದ ಪೋಷಕಿಗೆ ವಿದೇಶದಿಂದ ನಿರಂತರ ಬೆದರಿಕೆ ಕರೆ ವಿಚಾರವಾಗಿ ಪೋಷಕಿ ಕವಿತಾ ನೀಡಿದ ದೂರಿನ ಆಧಾರದ ಮೇಲೆ ಕೊನೆಗೂ ಎಫ್ಐಆರ್​ ದಾಖಲಾಗಿದೆ. ದೂರಿನ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಂಕನಾಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ದೂರುದಾರೆ ನೀಡಿದ್ದ ಆಡಿಯೋ ಕುರಿತು ಕಾನೂನು ತಜ್ಞರ ಅಭಿಪ್ರಾಯಕ್ಕೆ ಪೊಲೀಸರು ಕಾದಿದ್ದರು. ಸದ್ಯ ಅಭಿಪ್ರಾಯ ಪಡೆದು ಕಠಿಣ ಸೆಕ್ಷನ್​ಗಳಡಿ ಪ್ರಕರಣ ದಾಖಲಾಗಿದ್ದು, ಕಂಕನಾಡಿ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ.

ಪೊಲೀಸ್ ಠಾಣೆಗೆ‌ ಪೋಷಕಿ ಕವಿತಾ ದೂರು

ಪೋಷಕಿಯ ಫ್ಯಾಮಿಲಿ ಫೋಟೋ ವೈರಲ್ ಮಾಡಿ ಮಂಗಳೂರಿನ ಜೆಪ್ಪಿನಮೊಗರು ನಿವಾಸಿ ಕವಿತಾಗೆ ನಿರಂತರ ಬೆದರಿಕೆ ಹಾಕಲಾಗಿತ್ತು. ಆದರೆ ವೈರಲ್ ಆಗಿರುವ ಆಡಿಯೋ ಕವಿತಾರದ್ದಲ್ಲದಿದ್ದರೂ ನಿರಂತರ ಬೆದರಿಕೆ ಹಾಕಲಾಗುತ್ತಿದೆ. ಕಂಕನಾಡಿ ಪೊಲೀಸರಿಗೆ ಸ್ಕ್ರೀನ್ ಶಾಟ್, ಆಡಿಯೋ ಸಹಿತ ಕಾನೂನು ಕ್ರಮಕ್ಕಾಗಿ ಮಂಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣೆಗೆ‌ ಪೋಷಕಿ ಕವಿತಾ ದೂರು ನೀಡಿದ್ದರು. ಜೆರೋಸಾ ಶಾಲೆಯಲ್ಲಿ ಕವಿತಾರ ಪುತ್ರಿ ಏಳನೇ ತರಗತಿ ಓದುತ್ತಿದ್ದಾಳೆ. ಇನ್ನು ಸಿಸ್ಟರ್ ಪ್ರಭಾ ವಿರುದ್ದ ಪೋಷಕರ ಪ್ರತಿಭಟನೆಯಲ್ಲೂ ಕವಿತಾ ಭಾಗವಹಿಸಿದ್ದರು.

ಇದನ್ನೂ ಓದಿ: ಜೆರೋಸಾ ಶಾಲೆ ಶಿಕ್ಷಕಿ ವಿರುದ್ಧ ಆಡಿಯೋ ವೈರಲ್ ಮಾಡಿದ ಆರೋಪ; ಮಹಿಳೆಗೆ ವಿದೇಶದಿಂದ ಬೆದರಿಕೆ ಕರೆ

ಜೆರೋಸಾ ಶಿಕ್ಷಕಿ ಆಡಿಯೋ ವೈರಲ್ ಮಾಡಿದ್ದು ಕವಿತಾ ಅಂತ ಆರೋಪಿಸಿ ಬೆದರಿಕೆ ಹಾಕಲಾಗಿತ್ತು. ಕವಿತಾರ ಫ್ಯಾಮಿಲಿ ಫೋಟೋ ಜೊತೆಗೆ ಮೊಬೈಲ್ ನಂಬರ್ ವೈರಲ್​ ಮಾಡಲಾಗಿತ್ತು. ಕತಾರ್, ದುಬೈ, ಸೌದಿ ಸೇರಿ ಹಲವೆಡೆಯಿಂದ ನಿರಂತರ ಬೆದರಿಕೆ ಕರೆ ಮಾಡಲಾಗಿದ್ದು, ಅವಾಚ್ಯವಾಗಿ ನಿಂದಿಸಿ ಅಶ್ಲೀಲವಾದ ಆಡಿಯೋ ಸಂದೇಶವನ್ನು ಕವಿತಾರ ವಾಟ್ಸಪ್​ಗೆ ರವಾನೆ ಮಾಡಲಾಗಿತ್ತು.

ಇದನ್ನೂ ಓದಿ: ಮಂಗಳೂರು ಜೆರೋಸಾ ಶಾಲೆ ಪ್ರಕರಣ: ವಿದ್ಯಾರ್ಥಿಗಳ ತನಿಖೆ; ತನಿಖಾಧಿಕಾರಿ ಏನೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ ಗೊತ್ತಾ?

ಕೆಲ ವಾಟ್ಸಪ್ ಗ್ರೂಪ್​ಗೆ ಕವಿತಾರ ನಂಬರ್ ಸೇರಿಸಿ ನಿರಂತರ ಕಿರುಕುಳ ನೀಡಲಾಗಿದೆ. ವಾಯ್ಸ್ ಮೆಸೇಜ್ ಹರಿಬಿಟ್ಟ ಮಹಿಳೆ ಇವರೇ ಅಂತ ಕವಿತಾರ ನಂಬರ್​ನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದರು. ಪ್ರಕರಣದ ಬಳಿಕ ಕಿಡಿಗೇಡಿಗಳಿಂದ ಕವಿತಾರ ಮೊಬೈಲ್ ನಂಬರ್ ಪಡೆದು ಫ್ಯಾಮಿಲಿ ಫೋಟೋ ಸಹಿತ ಕೆಟ್ಟದಾಗಿ ಸಂದೇಶ ಕಳುಹಿಸಲಾಗಿದೆ. ಹೀಗಾಗಿ ಮಗಳ ಪರವಾಗಿ ಸಿಸ್ಟರ್ ಪ್ರಭಾ ವಿರುದ್ದ ಕ್ರಮಕ್ಕೆ ಪೋಷಕಿ ಕವಿತಾ ಆಗ್ರಹಿಸಿದ್ದಾರೆ. ಏಳನೇ ತರಗತಿಯ ಮಗಳ ಹೇಳಿಕೆ ಆಧರಿಸಿ ಕ್ರಮಕ್ಕೆ ಆಗ್ರಹಿಸಲಾಗಿದೆ.

ಮಂಗಳೂರಿನ ಜೆರೋಸಾ ಶಾಲೆಯ ವಿವಾದದ ತನಿಖೆ‌ ಚುರುಕುಗೊಂಡಿದೆ. ಶಾಲೆಯ ಶಿಕ್ಷಕರು, ಮುಖ್ಯಶಿಕ್ಷಕಿ, ಶಾಲಾಡಳಿತದ ಅಧಿಕೃತರ ವಿಚಾರಣೆಯನ್ನು ತನಿಖಾಧಿಕಾರಿ ನಡೆಸಿದ್ದಾರೆ. ಈ ನಡುವೆ ಪೋಷಕರು, ವಿದ್ಯಾರ್ಥಿಗಳು ಲಿಖಿತ ಹೇಳಿಕೆ ನೀಡಿದ್ದು ಆಗಿರುವ ಘಟನೆಗಳ ಪಿನ್ ಟು ಪಿನ್ ಮಾಹಿತಿಯನ್ನು ಐಎಸ್ಎಸ್ ಅಧಿಕಾರಿಯ ಮುಂದಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.