ಮಂಗಳೂರು ಜೆರೋಸಾ ಶಾಲೆ ಪ್ರಕರಣ: ವಿದ್ಯಾರ್ಥಿಗಳ ತನಿಖೆ; ತನಿಖಾಧಿಕಾರಿ ಏನೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ ಗೊತ್ತಾ?
ಮಂಗಳೂರಿನ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಹಿಂದೂ ದೇವರಗಳು ಬಗ್ಗೆ ಅಪಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಸಂಬಂಧ ತನಿಖಾಧಿಕಾರಿಯಾಗಿರುವ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಲಯ ಅಪರ ಆಯುಕ್ತ ಡಾ.ಆಕಾಶ್ ಅವರು ಇಂದು ವಿದ್ಯಾರ್ಥಿಗಳನ್ನು ತನಿಖೆ ನಡೆಸಿದ್ದಾರೆ. ಲಿಖಿತ ಹಾಗೂ ವಿಡಿಯೋ ರೆಕಾರ್ಡಿಂಗ್ ಮೂಲಕ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಮಂಗಳೂರು, ಫೆ.20: ಸಂತ ಜೆರೋಸಾ ಶಾಲೆಯ (St. Gerosa School) ಶಿಕ್ಷಕಿ ಹಿಂದೂ ದೇವರಗಳು ಬಗ್ಗೆ ಅಪಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಸಂಬಂಧ ತನಿಖಾಧಿಕಾರಿಯಾಗಿರುವ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಲಯ ಅಪರ ಆಯುಕ್ತ ಡಾ.ಆಕಾಶ್ ಅವರು ಇಂದು ಏಳನೇ ತರಗತಿಯ ಎಲ್ಲಾ ಧರ್ಮದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ತನಿಖೆ ನಡೆಸಿದ್ದಾರೆ. ಲಿಖಿತ ಹಾಗೂ ವಿಡಿಯೋ ರೆಕಾರ್ಡಿಂಗ್ ಮೂಲಕ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಶಾಲೆಯ ಹಳೆ ವಿದ್ಯಾರ್ಥಿನಿ ವರ್ಷಾ, ತನಿಖಾಧಿಕಾರಿ ನನ್ನ ಬಳಿ ತುಂಬಾ ವಿಷಯ ಕೇಳಿದರು. ಶಾಲೆಯಲ್ಲಿರುವಾಗ ಶಿಕ್ಷಕಿ ಏನೆಲ್ಲಾ ಹೇಳಿದ್ದರು ಎಂದು ಕೇಳಿದರು. ನಾಗದೇವರಿಗೆ ಹಾಲು ಹಾಕುವ ಬಗ್ಗೆ ಹೇಳಿರೋದನ್ನು ಹೇಳಿದ್ದೇನೆ. ನಾಗದೇವರಿಗೆ ಯಾಕೆ ಹಾಲು ಹಾಕೋದು, ಅದರ ಬದಲು ಪಾಪದವರಿಗೆ ಆ ಹಾಲು ಕೊಡಬಹುದಲ್ವಾ ಅಂತ ಶಿಕ್ಷಕಿ ಹೇಳಿದ್ದಾಗಿ ತಿಳಿಸಿದ್ದೇನೆ.
ಇದನ್ನೂ ಓದಿ: ಜೆರೋಸಾ ಶಾಲೆ ಶಿಕ್ಷಕಿ ವಿರುದ್ಧ ಆಡಿಯೋ ವೈರಲ್ ಮಾಡಿದ ಆರೋಪ; ಮಹಿಳೆಗೆ ವಿದೇಶದಿಂದ ಬೆದರಿಕೆ ಕರೆ
ಈ ರೀತಿ ಹೇಳಿರುವುದು ಒಳ್ಳೆಯ ಉದ್ದೇಶಕ್ಕೆ ಹೇಳಿದರಾ ಅಥವಾ ಕೆಟ್ಟ ಉದ್ದೇಶಕ್ಕೆ ಹೇಳಿದರಾ ಅಂತಾ ಅಧಿಕಾರಿ ಪ್ರಶ್ನೆ ಮಾಡಿದರು. ನಾಗನಿಗೆ ಹಾಲು ಹಾಕುವುದು ನಮ್ಮ ಧರ್ಮ. ಕೆಟ್ಟ ಉದ್ದೇಶದಿಂದಲೇ ಹೇಳಿರುವುದೆಂದು ಹೇಳಿದೆ. ಗಣಪತಿ ದೇವರ ಬಗ್ಗೆಯು ಅವಹೇಳನ ಮಾಡುತ್ತಿದ್ದರು ಅಂತ ಹೇಳಿದ್ದಾಗಿ ತಿಳಿಸಿದಳು.
ಜೆರೋಸಾ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಟಾರ್ಗೆಟ್
ಹಿಂದೂ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡುತ್ತಿದ್ದರು. ಹಣೆಗೆ ಪ್ರಸಾದ, ಕೈಗೆ ಬಳೆ, ಕಾಲಿಗೆ ಗೆಜ್ಜೆ ಹಾಕುವಂತೆ ಇರಲಿಲ್ಲ. ಹಾಕಿದರೆ ಬೈಯುತ್ತಿದ್ದರು. ನಾನು ಏಳನೇ ತರಗತಿಯಲ್ಲಿರುವಾಗ ಇದೆಲ್ಲ ಹೇಳುತ್ತಿದ್ದರು. ಅವಾಗ ಸಮಾಜ ವಿಜ್ಞಾನ ವಿಷಯಕ್ಕೆ ಆ ಶಿಕ್ಷಕಿ ಇದ್ದರು. ಆ ಸಮಯದಲ್ಲಿ ನಾವು ಚಿಕ್ಕವರಿದ್ದೆವು. ಹೆಚ್ಚೇನು ಗೊತ್ತಾಗುತ್ತಿರಲಿಲ್ಲ. 10 ನೇ ತರಗತಿಯಲ್ಲಿದ್ದಾಗ ಪೋಷಕರ ಬಳಿ ಹೇಳಿದ್ದೆ. ಶಾಲೆಗೆ ಬಂದು ಮಾತನಾಡಿದ್ರೆ ಟಾರ್ಗೆಟ್ ಮಾಡುತ್ತಾರೆ ಅಂತಾ ಚರ್ಚಿಸರಿರಲಿಲ್ಲ. ಲಿಖಿತವಾಗಿ ಬರೆದುಕೊಟ್ಟಿದ್ದೇನೆ. ಹತ್ತನೇ ತರಗತಿ ಅಂಕಪಟ್ಟಿಯನ್ನು ದಾಖಲೆಯಾಗಿ ನೀಡಿದ್ದೇನೆ ಎಂದರು.
ನೋಟಿಸ್ ವಿಚಾರವಾಗಿ ಟಿವಿ 9 ಜೊತೆ ಮಾತನಾಡಿದ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ ಪುರುಷೋತ್ತಮ್, ತನಿಖೆಗೆ ಬಂದು ಹಾಜರಾಗುವಂತೆ ಪತ್ರ ಬಂದಿತ್ತು. ಮಕ್ಕಳು ಪೋಷಕರು ಹೇಳಿದನ್ನು ತನಿಖಾಧಿಕಾರಿ ಮುಂದೆ ಹೇಳಿದ್ದೇವೆ. ನ್ಯಾಯ ನಿಷ್ಠೆಯಿಂದ ತನಿಖೆ ಮಾಡಿದ್ದಾರೆ. ವಿಎಚ್ಪಿ ಈ ಹೋರಾಟದಲ್ಲಿ ಭಾಗಿಯಾಗಿತ್ತು. ವಿಶ್ವಹಿಂದೂ ಪರಿಷತ್ ನಿಂದ ಡಿಡಿಪಿಐಗೆ ದೂರು ನೀಡಿದ್ದೆವು. ಘಟನೆಯ ಬಗ್ಗೆ ಲಿಖಿತವಾಗಿ ಬರೆದುಕೊಟ್ಟಿದ್ದೇವೆ ಎಂದರು.
ತನಿಖೆಯಲ್ಲಿ ಸತ್ಯಾಂಶ ಹೊರಬರದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ. ಶರಣ್ ಪಂಪುವೆಲ್ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುವುದಕ್ಕೆ ಕೇಸು ಹಾಕಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ