ಮಸೀದಿ ಆವರಣ ಪ್ರವೇಶಿಸಿ ಕಿಡಿಗೇಡಿಗಳಿಂದ ಜೈಶ್ರೀರಾಮ್ ಘೋಷಣೆ: ಮಸೀದಿ ಮುಖ್ಯಸ್ಥರಿಂದ ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2023 | 5:23 PM

ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳ ಎಂಬಲ್ಲಿ ನಡೆದಿದೆ. ಭಾನುವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಬೈಕ್​ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ಮರ್ಧಾಳ ಬದ್ರಿಯಾ ಜುಮಾ ಮಸೀದಿ ಕಾಂಪೌಂಡ್ ಪ್ರವೇಶಿಸಿ ಜೈ ಶ್ರೀರಾಮ್​​ ಘೋಷಣೆ ಕೂಗಿ ಪುಂಡಾಟ ಮೆರೆದಿರುವಂತಹ ಘಟನೆ ನಡೆದಿದ್ದು, ದೂರು ದಾಖಲಾಗಿದೆ.

ಮಸೀದಿ ಆವರಣ ಪ್ರವೇಶಿಸಿ ಕಿಡಿಗೇಡಿಗಳಿಂದ ಜೈಶ್ರೀರಾಮ್ ಘೋಷಣೆ: ಮಸೀದಿ ಮುಖ್ಯಸ್ಥರಿಂದ ದೂರು
ಮಸೀದಿಯ ಕಾಂಪೌಂಡ್ ಪ್ರವೇಶಿಸಿದ ಕಿಡಿಗೇಡಿಗಳು
Follow us on

ಮಂಗಳೂರು, ಸೆಪ್ಟೆಂಬರ್​​ 25: ಮಸೀದಿ ಆವರಣ ಪ್ರವೇಶಿಸಿ ಜೈ ಶ್ರೀರಾಮ್​​ (Jai Shri Ram) ಘೋಷಣೆ ಕೂಗಿ ಅಪರಿಚಿತರಿಂದ ಪುಂಡಾಟ ಮೆರೆದಿರುವಂತಹ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳ ಎಂಬಲ್ಲಿ ನಡೆದಿದೆ. ಭಾನುವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಬೈಕ್​ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ಮರ್ಧಾಳ ಬದ್ರಿಯಾ ಜುಮಾ ಮಸೀದಿ ಕಾಂಪೌಂಡ್ ಪ್ರವೇಶಿಸಿ ಕೃತ್ಯವೆಸಗಿದ್ದಾರೆ. ಮಸೀದಿ ಆವರಣದಲ್ಲಿ ಬೈಕ್ ಹಿಂತಿರುಗಿಸಿ ತೆರಳಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಸದ್ಯ ವಿಚಾರವಾಗಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೈಶ್ರೀರಾಮ್​ ಘೋಷಣೆ ಕೂಗಿದ್ದಾರೆಂದು ಮಸೀದಿ ಮುಖ್ಯಸ್ಥರ ದೂರು ಹಿನ್ನೆಲೆ ಮಸೀದಿ ಆವರಣದ ಸಿಸಿಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸಿದ್ದು, 2 ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ದೂರಿನಲ್ಲಿ ಏನಿದೆ?

ಕಡಬ ತಾಲೂಕು ಐತ್ತೂರು ಗ್ರಾಮದ ಮರ್ಧಾಳ ಎಂಬಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯು ಕಡಬ- ಮರ್ಧಾಳ ರಸ್ತೆಯ ಮರ್ಧಾಳ ಜಂಕ್ಷನ್​ನಲ್ಲಿ ನಮ್ಮ ಮಸೀದಿಗೆ ಆವರಣ ಗೋಡೆ ಮತ್ತು ಗೇಟ್ ಇರುತ್ತದೆ. ಹೀಗಿರುವಾಗ ಸೆ.24 ರಂದು ರಾತ್ರಿ ಸುಮಾರು 10.50 ರ ಸಮಯಕ್ಕೆ ನಮ್ಮ ಮಸೀದಿಯ ಕಂಪೌಂಡಿನೊಳಗೆ ಯಾರೋ ಅಪರಿಚಿತರು ಬಂದು ಅಕ್ರಮವಾಗಿ ಪ್ರವೇಶಿಸಿ ಜೈ ಶ್ರೀ ರಾಮ್​ ಘೋಷಣೆ ಕೂಗಿದ್ದು, ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ ಎಂದು ಬೊಬ್ಬೆ ಹಾಕಿದ್ದಾರೆ.

ಇದನ್ನೂ ಓದಿ: ಈದ್ ಮಿಲಾದ್ ಹಬ್ಬಕ್ಕೆ ಮಂಗಳೂರಿನ ಮೀನು ಧಕ್ಕಗೆ ಕಡ್ಡಾಯ ರಜೆ ಬ್ಯಾನರ್ ವಿವಾದ: ಉಲ್ಲಂಘಿಸಿದಲ್ಲಿ 1 ತಿಂಗಳ ಬಹಿಷ್ಕಾರದ ಎಚ್ಚರಿಕೆ

ಇವರ ಬೊಬ್ಬೆಯನ್ನು ಕೇಳಿ ಆ ಸಮಯ ಕಛೇರಿಯ ಒಳಗಿದ್ದ ನಾನು ಮತ್ತು ನಮ್ಮ ಮಸೀದಿಯ ಧಾರ್ಮಿಕ ಗುರುಗಳಾದ ನೌಷಾದ್‌ ಸಖಾಫಿ ಉಸ್ತಾದರು ಹೊರ ಬಂದು ನೋಡಿದಾಗ, ನಮ್ಮನ್ನು ನೋಡಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತರು ನಮ್ಮ ಮಸೀದಿಯ ಆವರಣದಿಂದ ಹೊರ ಹೋದರು. ನಂತರ ನಾನು ನಮ್ಮ ಮಸೀದಿಯ ಸಿಸಿ ಟಿವಿಯನ್ನು ಪರೀಕ್ಷಿಸಿದಾಗ ನಮ್ಮ ಮಸೀದಿಯ ಎದುರುಗಡೆ ಒಂದು ಡಸ್ಟ್​ರ್ ಕಾರು ಒಂದು ಅನುಮಾನಾಸ್ಪದವಾಗಿ ಸಂಚರಿಸುತ್ತಾ ನಮ್ಮ ಮಸೀದಿ ಮುಂಭಾಗದ ರಸ್ತೆಯಲ್ಲಿ ತೀರುಗಾಡುತ್ತಿತ್ತು ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: RSS ಅಂದ್ರೆ ಅದು ಪಕ್ಕಾ ಹಿಂದೂ ಪರ ಸಂಘಟನೆ; ಆದ್ರೆ ಮಂಗಳೂರಿನಲ್ಲಿ ಕ್ರೈಸ್ತ ಧರ್ಮೀಯ ಸಾಮರಸ್ಯಕ್ಕೆ ಅಡಿಪಾಯ ಹಾಕಿದೆ

ಅದೇ ಸಮಯ ನಮ್ಮ ಮಸೀದಿಯ ಆವರಣಕ್ಕೆ ಯಾರೋ ಅಪರಚಿತರು ದ್ವಿಚಕ್ರ ವಾಹನದಲ್ಲಿ ಬಂದು ಹೋಗುವುದು ಕಂಡು ಬರುತ್ತಿತ್ತು. ನಮ್ಮ ಊರಿನಲ್ಲಿ ಹಿಂದೂ-ಮುಸಲ್ಮಾನರು ಬಹಳ ಸೌಹಾರ್ದತೆಯಿಂದ ವಾಸಿಸುತ್ತಿದ್ದು, ಇದನ್ನು ಸಹಿಸದ ಯಾರೋ ಕಿಡಿಗೇಡಿಗಳು ಕ್ರೀಮಿನಲ್ ಸಂಚು ರೂಪಿಸುವ ರೀತಿಯ ಕೃತ್ಯವನ್ನು ಎಸಗಿ ನಾಡಿನಲ್ಲಿ ಕೋಮು ದ್ವೇಷವನ್ನು ಉಂಟುಮಾಡಲು ಹಾಗೂ ಕೋಮು ಗಲಭೆಯನ್ನು ಸೃಷ್ಟಿಸಲು ಈ ರೀತಿಯ ಕೃತ್ಯವನ್ನು ನಡೆಸಿದ್ದಾರೆ. ಜೈ ಶ್ರೀ ರಾಮ್​ ಎಂದು ಕೂಗಿದ ಅಪರಿಚಿತರನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:22 pm, Mon, 25 September 23