ಮಂಗಳೂರು, ಸೆಪ್ಟೆಂಬರ್ 18: ಚೈತ್ರಾ ಕುಂದಾಪುರ (Chaitra Kundapura) ವಂಚನೆ ಪ್ರಕರಣ ಬಗೆದಷ್ಟು ಆಳ ಹೆಚ್ಚುತ್ತಿದೆ. ವಿಧಾನ ಸಭಾ ಚುನಾವಣೆಯಲ್ಲಿ ಬೈಂದೂರಿನಿಂದ ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Pujari) ಬಳಿ 5 ಕೋಟಿ ರೂ. ವಂಚಿಸುವುದಲ್ಲದೇ ಆತನ ವಿರುದ್ಧವೇ ಜಾರಿ ನಿರ್ದೇಶಾನಲಯಕ್ಕೆ ಪತ್ರ ಬರೆಯಲಾಗಿದೆ. ಜೊತೆಗೆ ಪತ್ರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರು ಸ್ವಾಮೀಜಿ ಹೆಸರನ್ನು ಸಹ ಚೈತ್ರಾ ಕುಂದಾಪುರ ಪ್ರಸ್ತಾಪ ಮಾಡಿದ್ದಾರೆ.
ಚೈತ್ರಾ ಐಟಿ ಇಲಾಖೆಗೆ ಬರೆದಿರುವ ಪತ್ರದಲ್ಲಿ ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಉಲ್ಲೇಖಿಸಲಾಗಿದೆ. ಈ ಕುರಿತಾಗಿ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಚೈತ್ರಾ ನನಗೆ ಫೋನ್ ಮಾಡಿ ನಿಮ್ಮ ಮೇಲೆ ದೂರು ಇದೆ ಎಂದಿದ್ದರು. ನಿಮಗೆ ಗೋವಿಂದಬಾಬು ಪೂಜಾರಿ 1.50 ಕೋಟಿ ರೂ. ಹಣ ನೀಡಿದ್ದಾರಂತೆ. ಹಣ ವಾಪಸ್ ನೀಡಿ ಎಂದು ಚೈತ್ರಾ ಕುಂದಾಪುರ ನನಗೆ ಹೇಳಿದ್ದರು. ಆಗ ಚೈತ್ರಾ ಕುಂದಾಪುರ ಹೇಳಿಕೆಯನ್ನು ನಾನು ಖಂಡಿಸಿದ್ದೆ. ಚೈತ್ರಾ ಕುಂದಾಪುರ ಸುಳ್ಳು ಆರೋಪದ ಬಗ್ಗೆ ನಾನು ಆಕ್ರೋಶಗೊಂಡಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಗೋವಿಂದ ಬಾಬು ವಿರುದ್ಧ ಇಡಿಗೆ ಪತ್ರ ಬರೆದ ಚೈತ್ರಾ ಕುಂದಾಪುರ!
ನನಗೂ ಆಕೆಯ ಪ್ರಕರಣಕ್ಕೂ ಸಂಬಂಧ ಇಲ್ಲ. ಜುಲೈ ತಿಂಗಳಲ್ಲಿ ಹಿಂದು ಸಂಘಟನೆಯ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿದ್ದರು. ಗೋವಿಂದ ಪೂಜಾರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ವಂಚಿಸಿರುವ ಬಗ್ಗೆ ನನಗೆ ಪ್ರಶ್ನೆ ಮಾಡಿದ್ದರು. ಆದರೆ ನನಗೇನೂ ತಿಳಿದಿರಲಿಲ್ಲ, ನನ್ನಲ್ಲಿ ಯಾಕೆ ಪ್ರಶ್ನೆ ಮಾಡುವುದೆಂದು ಕೇಳಿದ್ದೆ. ಬಳಿಕ ಅವರೇ ಫೋನ್ ಮಾಡಿ, ಚೈತ್ರಾ ಮತ್ತು ಅಭಿನವ ಹಾಲಶ್ರೀ ಹೆಸರಿದೆ ಎಂದಿದ್ದರು.
ಅಭಿನವ ಹಾಲಶ್ರೀ ಯುವ ಬ್ರಿಗೇಡ್ ಜೊತೆ ಗುರುತಿಸಿಕೊಂಡಿದ್ದರು. ಹೀಗಾಗಿ ಚಕ್ರವರ್ತಿ ಸೂಲಿಬೆಲೆ ಹೆಸರು ತಳುಕು ಹಾಕಿಕೊಳ್ಳುವ ಸಂಶಯ ಬಂತು. ಆ ಸಂದರ್ಭದಲ್ಲಿ ಅವರಿಗೆ ಫೋನ್ ಮಾಡಿದೆ. ಅಭಿನವ ಹಾಲಶ್ರೀ ಹೆಸರು ಇರುವುದರಿಂದ ನಾಳೆ ನಮ್ಮ ಹೆಸರು ಸಹ ಬರಬಹುದು ಎಂದಿದ್ದೆ. ನಗುತಾ ನನ್ನ ಹೆಸರು ಬಂತಾ ಎಂದು ಚಕ್ರವರ್ತಿ ಕೇಳಿದ್ದರು.
ಇದನ್ನೂ ಓದಿ: ಟಿಕೆಟ್ ವಂಚನೆ ಕೇಸ್: ಚೈತ್ರಾ ಕುಂದಾಪುರ ಕಾರನ್ನು ತಂದಿಟ್ಟುಕೊಂಡಿದ್ದ ಕಿರಣ್ ಗಣಪ್ಪಗೋಳ ಹೇಳಿದ್ದಿಷ್ಟು
ನಿಮ್ಮ ಹೆಸರು ಬಂದಿಲ್ಲ ಆದರೆ ಅಭಿನವ ಹಾಲಶ್ರೀ ಹೆಸರು ಬಂದಿದೆ. ನಾಳೆ ನಿಮ್ಮ ಹೆಸರು ತಳುಕು ಹಾಕಿಕೊಳ್ಳಬಹುದು ಎಂದಿದ್ದೆ. ನಾನು ಒಂದು ಹಂತದಲ್ಲಿ ಈ ಬಗ್ಗೆ ವಿಚಾರಣೆ ಮಾಡಿದ್ದೇನೆ. ಸಿಟಿ ರವಿ ಅವರ ಗಮನಕ್ಕೂ ತಂದಿದ್ದೇನೆ ಎಂದು ಚಕ್ರವರ್ತಿ ಹೇಳಿದ್ದರು.
ಗಗನ್ ಕಡೂರು ಹೆಸರು ಬಂದಾಗ ಸಿಟಿ ರವಿ ಗಮನಕ್ಕೆ ತರಲಾಯಿತು. ಅವರಲ್ಲಿ ಕೂಲಕುಂಶವಾಗಿ ಮಾತಾಡಿ ಸುಮ್ಮನೆ ಬಿಡಬೇಡಿ ಎಂದಿದ್ದೆ. ಚೈತ್ರಾ ಕುಂದಾಪುರ ಜೊತೆ ಒಡನಾಟ ಇದೆಯಾ ಎಂದು ಸೂಲಿಬೆಲೆ ಕೇಳಿದ್ದರು. ಚೈತ್ರಾ ಕುಂದಾಪುರ ಬರೆದ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದೆ. ಹೀಗಾಗಿ ಅವರು ಸಂಪರ್ಕ ಇದೆ ಎಂದು ಹೇಳಿದ್ದೆ. ಹಾಗಾದ್ದರೆ ಚೈತ್ರ ಕುಂದಾಪುರ ಜೊತೆಯೂ ಒಮ್ಮೆ ಮಾತನಾಡಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದರು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:29 pm, Mon, 18 September 23