ಮಂಗಳೂರು: ಜೆರೋಸಾ ಶಾಲೆಯಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ಮಕ್ಕಳಿಗೆ ಧಮ್ಕಿ

| Updated By: Rakesh Nayak Manchi

Updated on: Feb 12, 2024 | 6:49 PM

ಶ್ರೀರಾಮನಿಗೆ ಅವಹೇಳನ ಮಾಡಿದ ಮಂಗಳೂರಿನ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದರು. ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದರು. ಈ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಲಾಗಿದೆ ಎನ್ನುವ ಆಡಿಯೋವನ್ನು ತೋರಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.

ಮಂಗಳೂರು: ಜೆರೋಸಾ ಶಾಲೆಯಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ಮಕ್ಕಳಿಗೆ ಧಮ್ಕಿ
ಮಂಗಳೂರು: ಜೆರೋಸಾ ಶಾಲೆಯಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ಮಕ್ಕಳಿಗೆ ಧಮ್ಕಿ ಹಾಕಲಾಗಿದೆ ಎಂದು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ
Follow us on

ಮಂಗಳೂರು, ಫೆ.12: ಶ್ರೀರಾಮನಿಗೆ ಅವಹೇಳನ ಮಾಡಿದ ಮಂಗಳೂರಿನ (Mangaluru) ಸಂತ ಜೆರೋಸಾ ಶಾಲೆಯ (St Gerosa school) ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದರು. ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದರು. ಈ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಲಾಗಿದೆ ಎನ್ನುವ ಆಡಿಯೋವನ್ನು ತೋರಿಸಿ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ಆರೋಪಿಸಿದ್ದಾರೆ.

ಜೆರೋಸಾ ಶಾಲೆಯಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಮಕ್ಕಳಿಗೆ ಧಮ್ಕಿ ಹಾಕಲಾಗಿದೆ ಎಂದು ವಾಯ್ಸ್ ಮೆಸೇಜ್ ತೋರಿಸಿ ಆರೋಪಿಸಿದ್ದಾರೆ.

ಶಿಕ್ಷಕಿ ಅಮಾನತು; ಶಾಲಾ ಆವರಣದಲ್ಲಿ ಸಂಭ್ರಮಾಚರಣೆ

ಪ್ರಕರಣ ಸಂಬಂಧ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿ ಆದೇಶಿಸಿದೆ. ಪ್ರಭಾ ಅಮಾನತು ಮಾಡುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಸಂತ ಜೆರೋಸಾ ಶಾಲೆಯ ಮುಂಭಾಗ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಭ್ರಮಾಚರಣೆ ಮಾಡಿದ್ದರು. ಶಾಲೆಯ ಮುಂದೆ ಕುಣಿದು ಕುಪ್ಪಳಿಸಿದ ಜೆರೋಸಾ ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು.

ತಪ್ಪು ಒಪ್ಪಿಕೊಳ್ಳದೇ ಇದ್ದರೆ ನಾವು ಬಿಡಲ್ಲ: ವೇದವ್ಯಾಸ್ ಕಾಮತ್

ಶ್ರೀರಾಮನಿಗೆ ಅವಹೇಳ ಮಾಡಿದ ಶಿಕ್ಷಕಿ ವಿರುದ್ಧ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದರು. ಶಾಲೆ ವಿರುದ್ಧ ಆಕ್ರೋಶ ಭುಗಿಲೇಲುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮುಖ್ಯ ಶಿಕ್ಷಕಿ, ಪ್ರಕರಣ ಸಂಬಂಧ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಲಿಖಿತ ರೂಪದಲ್ಲಿರುವ ಆದೇಶ ಪ್ರತಿಯನ್ನು ಓದಿದಾಗ ಆಡಳಿತ ಮಂಡಳಿಯು ಪ್ರಕರಣ ಸಂಬಂಧ ತಪ್ಪು ಒಪ್ಪಿಕೊಳ್ಳದಿವುದನ್ನು ಗಮನಿಸಿ ಪ್ರತಿಭಟನಾನಿರತರ ಆಕ್ರೋಶದ ಕಿಚ್ಚು ಹೆಚ್ಚಾಯಿತು.

ಇದನ್ನೂ ಓದಿ: ಮಂಗಳೂರು: ಶ್ರೀರಾಮನಿಗೆ ಅವಹೇಳನ ಮಾಡಿದ ಸಂತ ಜೆರೋಸಾ ಶಾಲಾ ಶಿಕ್ಷಕಿ ಅಮಾನತು

ಮುಖ್ಯ ಶಿಕ್ಷಕಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ವೇದವ್ಯಾಸ್ ಕಾಮತ್, ನೀವು ನಿಮ್ಮ ತಪ್ಪು ಒಪ್ಪಿಕೊಳ್ಳದೇ ಇದ್ದರೆ ನಾವು ಬಿಡುವುದಿಲ್ಲ. ನಿಮ್ಮ ದಾರಿಗೆ ನಿಮಗೆ, ನಮ್ಮ ದಾರಿ ನಮಗೆ ಅಂತ ಎಚ್ಚರಿಕೆ ನೀಡಿದರು. ಅಮಾನತು ಮಾಡಿದರೂ ತಪ್ಪು ಒಪ್ಪಿಕೊಳ್ಳದ ಆಡಳಿತ ಮಂಡಳಿಯ ನಡೆ ಮತ್ತೆ ಗೊಂದಲ ಮತ್ತು ಉದ್ವಿಗ್ನತೆಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ