ಮಂಗಳೂರು, ಮಾರ್ಚ್.18: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಜಯಾನಂದ ಕೆ. ಅವರ ಮನೆಗೆ ಶಾಸಕ ಅಶೋಕ್ ರೈ (Ashok Rai) ಬೆಂಬಲಿಗರು ನುಗ್ಗಿ ಪುಂಡಾಟ ಮೆರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ತಾರಿಗುಡ್ಡೆಯಲ್ಲಿರುವ ಜಯಾನಂದ ಮನೆಗೆ ರೌಡಿಶೀಟರ್ ಪ್ರಜ್ವಲ್ ರೈ ಮತ್ತು ಕಾಂಗ್ರೆಸ್ ಬೆಂಬಲಿಗರು ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ. ಘಟನೆ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಅನುದಾನ ಹಂಚಿಕೆ ವಿಚಾರದಲ್ಲಿ ಕಿರಿಕ್ ನಡೆದಿದ್ದು ಪುತ್ತೂರು ಶಾಸಕರು ಅತೀ ಹೆಚ್ಚು ಅನುದಾನ ತಂದಿದ್ದಾರೆ ಅನ್ನೋ ಕುರಿತು ಸ್ಪಷ್ಟನೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಪೋಸ್ಟ್ ಹಾಕಿದ್ದರು. ಇದೇ ವಿಚಾರಕ್ಕೆ ಶಾಸಕ ಅಶೋಕ್ ರೈ ಬೆಂಬಲಿಗರೆನ್ನಲಾದ ತಂಡವೊಂದು ಮನೆಗೆ ನುಗ್ಗಿ ದಾಂಧಲೆ ಮಾಡಿದೆ. ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ವಾರ್ ಶುರುವಾಗಿದೆ. ಚೆಂಡೆ ವಾಳಗದ ಮೂಲಕ ಕಾಂಗ್ರೆಸ್ ನ ಅನುದಾನದ ಬ್ಯಾನರ್ ಹಿಡಿದು ಬಿಜೆಪಿಯ ಜಯಾನಂದ ಅವರ ಮನೆಗೆ ನುಗ್ಗಿ ಪುಂಡಾಟ ಮೆರೆಯಲಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ಮುಗಿದ ಆರೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ; ತಯಾರಾಗಿ ಎಂದು ಕಾರ್ಯಕರ್ತರಿಗೆ ನಳಿನ್ ಸೂಚನೆ
ವಿದ್ಯುತ್ ತಂತಿ ತಗುಲಿ 12 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ, ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಬಳಿ ನಡೆದಿದೆ. ದಿಬ್ಬೂರುಹಳ್ಳಿ ಮೂಲದ 12 ವರ್ಷದ ಬಾಲಕ ದೇವಪ್ಪ ಮೃತಪಟ್ಟಿದ್ದಾನೆ. ಮೇಕೆಗಳ ಮೇವಿಗಾಗಿ ಮರದಲ್ಲಿ ರೆಂಬೆ ಕಡಿಯುವಾಗ ದುರಂತ ನಡೆದಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ತವ್ಯ ಮುಗಿಸಿ ಮನೆಗೆ ತೆರಳುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ASI ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಅಪಘಾತ ಸಂಭವಿಸಿದೆ. ದೊಡವಾಡ ಠಾಣೆ ASI ವಿಜಯಕಾಂತ ಮಿಕಲಿ ಸಾವಿಗೀಡಾಗಿದ್ದಾರೆ. ಎಸ್ಪಿ ಪೊಲೀಸರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದ್ರು. ಆದ್ರೆ ASI ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದು, ಆದೇಶ ಸಮರ್ಪಕವಾಗಿ ಅನುಷ್ಠಾನಗೊಳಿಸ ದಿದ್ದಕ್ಕೆ, ದೊಡವಾಡ ಪಿಎಸ್ಐ ನಂದೀಶ್ ಅಮಾನತು ಮಾಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ