ಮಂಗಳೂರು, ಜ.28: ಅಪ್ರಾಪ್ತ ಬಾಲಕಿಗೆ ಅನ್ಯಕೋಮಿನ ಯುವಕ ಕಿರುಕುಳ ನೀಡಿದ್ದಾನೆ. ಹೀಗಾಗಿ ಉದ್ರಿಕ್ತರಿಂದ ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಗರ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪುತ್ತೂರು ಕಂಬಳ (Kambala) ವೀಕ್ಷಿಸಲು ತೆರಳುತ್ತಿದ್ದ ವೇಳೆ ಕಡಬ ಮೂಲದ ಶಾಕೀರ್ ಎಂಬಾತ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿ ಶಾಕೀರ್ನನ್ನ ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ ಆಕ್ರೋಶಗೊಂಡಿರುವ ಹಿಂದೂ ಕಾರ್ಯಕರ್ತರು ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಿ ಆರೋಪಿ ಶಾಕೀರ್ನನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ಠಾಣೆಯ ಎದುರು ನೂರಾರು ಹಿಂದೂ ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಹಿಂದೂ ಮುಖಂಡ ಅರುಣ್ ಪುತ್ತಿಲ ಸ್ಥಳಕ್ಕಾಗಮಿಸಿ ಯುವಕರ ಸಮಾಧಾನ ಪಡಿಸಿದರು. ಸದ್ಯ ಆರೋಪಿ ಶಾಕೀರ್ನನ್ನು ಬಂಧಿಸಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಗುಂಪು ಚದುರಿಸಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳತನ ಪ್ರಕರಣ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ಬಂಧನ
ಜೋಡಿ ಹಕ್ಕಿಗೆ ಸ್ವ ಕುಟುಂಬದಿಂದಲೇ ಜೀವ ಬೆದರಿಕೆ ಆರೋಪ ಕೇಳಿ ಬಂದಿದ್ದು ಪ್ರಾಣ ರಕ್ಷಣೆಗಾಗಿ ಪ್ರೇಮಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಳ್ಳಾರಿಯ ಗೋನಾಳ ಗ್ರಾಮದ ನಾರಾಯಣ್, ಊಳೂರು ಗ್ರಾಮದ ಶಿಲ್ಪಾ ಎಂಬ ಪ್ರೇಮಿಗಳಿಗೆ ಸ್ವ ಕುಟುಂಬದಿಂದಲೇ ಜೀವ ಬೆದರಿಕೆ ಇದೆ. ಹೀಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಕುಟುಂಬಸ್ಥರು ಮದುವೆಗೆ ಒಪ್ಪದ ಹಿನ್ನಲೆ ಆಂಧ್ರದ ನರಸಿಂಹ ದೇವಾಯದಲ್ಲಿ ಈ ಜೋಡಿ ಮದುವೆಯಾಗಿದೆ.
ಬಳ್ಳಾರಿಯಲ್ಲಿ ದೊಡ್ಡಮ್ಮನ ಮನೆಯಲ್ಲಿದ್ದ ಶಿಲ್ಪಾ 9ನೇ ತರಗತಿಯಲ್ಲಿ ಓದುವಾಗಲೇ ನಾರಾಯಣನನ್ನು ಪ್ರೀತಿಸುತ್ತಿದ್ದಳು. 5 ವರ್ಷದಿಂದ ಇಬ್ಬರೂ ಪರಸ್ಪರ ಪ್ರೀತಿ ಮಾಡ್ತಿದ್ದರು. ಆದರೆ ಇವರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು ವಿರೋಧದ ನಡುವೆಯೇ ಮನೆ ಬಿಟ್ಟು ಓಡಿ ಬಂದಿದ್ದಾರೆ. ಇವರಿಗೆ ಈಗ ಕುಟುಂಬಸ್ಥರಿಂದ ಜೀವ ಬೆದರಿಕೆಇದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಯವಕ ನಾರಾಯಣ್, ಜಿಲ್ಲಾ ಪಂಚಾಯಿತಿಯಲ್ಲಿ ಗುತ್ತಿಗೆ ನೌಕರನಾಗಿದ್ದಾನೆ. ನಾರಾಯಣ ಬೇಕು ಅಂತಾ ಶಿಲ್ಫ ಮನೆ ಬಿಟ್ಟು ಬಂದಿದ್ದಾಳೆ. ಶಿಲ್ಪಾ ಸಂಬಂಧಿಕರು ಜೀವ ಬೆದರಿಕೆ ಹಾಕಿದ್ದಾರೆ. ಒಂದೇ ಜಾತಿ ಆದ್ರೂ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪ್ರೇಮಿಗಳು ಎಸ್ಪಿ ಕಚೇರಿಗೆ ಬಂದಿದ್ದಾರೆ. ಶಿಲ್ಪಾ ಪಿಯುಸಿ ಓದಿದ್ದು ನಾಯಾಯಣ, ಬಿ.ಕಾಂ ಓದಿದ್ದಾನೆ. ನಾರಾಯಣ ಮನೆಯಲ್ಲಿ ಮದುವೆಗೆ ಒಪ್ಪಿಗೆ ಇದೆ. ಆದರೆ ಹುಡುಗಿ ಮನೆಯಲ್ಲಿ ವಿರೋಧ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ