AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕುಮಾರಸ್ವಾಮಿ ಕುರುಡು ಕಣ್ಣಿನಿಂದ RSS ನೋಡಿದ್ದಾರೆ’- ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ವಾಗ್ದಾಳಿ

ಆರ್​ಎಸ್​ಎಸ್​ ಏನು ಅನ್ನೊದನ್ನು ಹೊರಗಿನಿಂದ ಅಳತೆ ಮಾಡಿದರೆ ಮೂರ್ಖರಾಗುತ್ತಾರೆ. ಕುರುಡರು ಆನೆ ಚಿತ್ರಣ ಕೊಟ್ಟಂತೆ. ಪ್ರಣಬ್ ಮುಖರ್ಜಿಯವರೆ ಸಂಘದ ಶಾಖೆಗೆ ಬಂದು ಮೆಚ್ಚಿದ್ದಾರೆ. ದೇಶದ ಎಲ್ಲಾ ವ್ಯವಸ್ಥೆಯಲ್ಲಿ ಅವರು ರಾಜಕೀಯವನ್ನೇ ಮಾಡುತ್ತಾರೆ.

‘ಕುಮಾರಸ್ವಾಮಿ ಕುರುಡು ಕಣ್ಣಿನಿಂದ RSS ನೋಡಿದ್ದಾರೆ’- ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ವಾಗ್ದಾಳಿ
ನಳಿನ್ ಕುಮಾರ್ ಕಟೀಲ್ (ಸಂಗ್ರಹ ಚಿತ್ರ)
TV9 Web
| Updated By: sandhya thejappa|

Updated on: Oct 07, 2021 | 5:28 PM

Share

ಮಂಗಳೂರು: ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕುರುಡು ಕಣ್ಣಿನಿಂದ ಆರ್​ಎಸ್​ಎಸ್​ ನೋಡಿದ್ದಾರೆ ಅಂತ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು (Nalin Kumar Kateel) ಹೇಳಿದ್ದಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಸಂಘದ ಕಚೇರಿಗೆ ಬಂದು ನೋಡಲಿ. ಆ ನಂತರ ಆರ್​ಎಸ್​ಎಸ್​ ಸಂಘಟನೆಯ ಬಗ್ಗೆ ಮಾತನಾಡಿ. ಚಿಲ್ಲರೆ ರಾಜಕಾರಣ ಮಾಡಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳಬೇಡಿ. ಅಧಿಕಾರ ಇಲ್ಲದಾಗ ಆ ವ್ಯಕ್ತಿಗಳು ಸ್ಥಿಮಿತ ಕಳೆದುಕೊಳ್ಳುತ್ತಾರೆ. ಅಧಿಕಾರ ಕಳೆದುಕೊಂಡು ಅವರಿಗೆ ಹುಚ್ಚು ಹಿಡಿದಿದೆ ಅಂತ ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ಕಟೀಲು ವಾಗ್ದಾಳಿ ನಡೆಸಿದ್ದಾರೆ.

ಸಂಘ ಏನು ಅನ್ನೊದನ್ನು ಹೊರಗಿನಿಂದ ಅಳತೆ ಮಾಡಿದರೆ ಮೂರ್ಖರಾಗುತ್ತಾರೆ. ಕುರುಡರು ಆನೆ ಚಿತ್ರಣ ಕೊಟ್ಟಂತೆ. ಪ್ರಣಬ್ ಮುಖರ್ಜಿಯವರೆ ಸಂಘದ ಶಾಖೆಗೆ ಬಂದು ಮೆಚ್ಚಿದ್ದಾರೆ. ದೇಶದ ಎಲ್ಲಾ ವ್ಯವಸ್ಥೆಯಲ್ಲಿ ಅವರು ರಾಜಕೀಯವನ್ನೇ ಮಾಡುತ್ತಾರೆ. ಮುಂದಿನ ಚುನಾವಣೆ ದೃಷ್ಟಿಯಿಂದ, ಅಲ್ಪಸಂಖ್ಯಾತರ ಮತಗಳ ಆಸೆಯಿಂದ ಹೀಗೆ ಮಾಡಿದ್ದಾರೆ. ಸಂಘದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತ ಯುವಕರು ಇದ್ದಾರೆ. ಇಲ್ಲಿನ ಸಂಸ್ಕಾರವನ್ನು ಪಡೆದು ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂಬ ಶ್ರೇಷ್ಠ ಸ್ಥಾನದಲ್ಲಿರುವ ನೀವು ಚಿಲ್ಲರೆ ರಾಜಕಾರಣ ಮಾಡಿ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳಬೇಡಿ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಆರ್ಎಸ್ಎಸ್ ವ್ಯಕ್ತಿ ನಿರ್ಮಾಣದ ಕೆಲಸ ಮಾಡುತ್ತದೆ. ವ್ಯಕ್ತಿ ನಿರ್ಮಾಣ ಮಾಡಿ ದೇಶದ ಪರ ಕೆಲಸ ಮಾಡಲು ಉತ್ತೇಜಿಸುತ್ತದೆ. ಮಹಾತ್ಮಾ ಗಾಂಧಿ ಆರ್ಎಸ್ಎಸ್ ಶಿಬಿರಕ್ಕೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಿ ಆರ್ ಅಂಬೇಡ್ಕರ್ ಕೂಡಾ ಆರ್​ಎಸ್ಎಸ್​ ಶಿಬಿರಕ್ಕೆ ಬಂದಿದ್ದರು. ನೆಹರೂ ಸಂಘದ ಸ್ವಯಂಸೇವಕರಿಗೆ ಗಣರಾಜ್ಯೋತ್ಸವದ ಪಥಸಂಚಲನಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು. ಕಾಂಗ್ರೆಸ್​ನ ಉಗ್ರಪ್ಪ ಸಂಘ ಶಿಕ್ಷಣವನ್ನು ಪಡೆದಿದ್ದಾರೆ. ಜೆಡಿಎಸ್ನ ಸಿಂಧ್ಯಾರವರೂ ಸಂಘದ ಶಿಕ್ಷಣವನ್ನು ಪಡೆದಿದ್ದಾರೆ ಅಂತ ನಳೀನ್ ಕುಮಾರ್ ಹೇಳಿದರು.

ಇದನ್ನೂ ಓದಿ

ನೋಟು ರದ್ದತಿ, 370ನೇ ವಿಧಿ ತೆಗೆದುಹಾಕುವುದರಿಂದ ಕಾಶ್ಮೀರದಲ್ಲಿ ಉಗ್ರ ಕೃತ್ಯ ನಿಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ: ರಾಹುಲ್ ಗಾಂಧಿ

ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ನಾಲ್ವರ ದುರ್ಮರಣ; ಓರ್ವನನ್ನು ರಕ್ಷಿಸಲು ಹೋಗಿ ಮಗ, ಅಳಿಯ ಮತ್ತು ಬೋಟ್ ಆಪರೇಟರ್ ಸಾವು

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಒಳ್ಳೆಯ ದಿನ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಒಳ್ಳೆಯ ದಿನ
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?