ದಕ್ಷಿಣ ಕನ್ನಡದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್; ಆನ್​ಲೈನ್​ ತರಗತಿಯೂ ನಡೆಯುತ್ತೆ

TV9 Digital Desk

| Edited By: sandhya thejappa

Updated on: Sep 14, 2021 | 12:04 PM

ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗೆ ಕಳುಹಿಸಲು ಒಪ್ಪದ ಪೋಷಕರ ಮಕ್ಕಳಿಗೆ ಆನ್​ಲೈನ್​ ತರಗತಿ ಇರುತ್ತದೆ. 9 ಮತ್ತು 10ನೇ ತರಗತಿಯವರಿಗೆ ಬೆಳಿಗ್ಗೆ ಹಾಗೂ 8ನೇ ತರಗತಿಯವರಿಗೆ ಮಧ್ಯಾಹ್ನದ ಬಳಿಕ ತರಗತಿ ನಡೆಯುತ್ತದೆ.

ದಕ್ಷಿಣ ಕನ್ನಡದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್; ಆನ್​ಲೈನ್​ ತರಗತಿಯೂ ನಡೆಯುತ್ತೆ
ಸಾಂದರ್ಭಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲೆಯಲ್ಲಿ 8, 9 ಮತ್ತು 10ನೇ ತರಗತಿ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಸೆ.17ರ ಶುಕ್ರವಾರದಿಂದ ಈ ಮೂರು ತರಗತಿಗಳು ಆರಂಭವಾಗಲಿದೆ. 6 ಮತ್ತು 7ನೇ ತರಗತಿಗಳು ಸೆ.20ರ ಸೋಮವಾರದಿಂದ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗೆ ಕಳುಹಿಸಲು ಒಪ್ಪದ ಪೋಷಕರ ಮಕ್ಕಳಿಗೆ ಆನ್​ಲೈನ್​ ತರಗತಿ ಇರುತ್ತದೆ. 9 ಮತ್ತು 10ನೇ ತರಗತಿಯವರಿಗೆ ಬೆಳಿಗ್ಗೆ ಹಾಗೂ 8ನೇ ತರಗತಿಯವರಿಗೆ ಮಧ್ಯಾಹ್ನದ ಬಳಿಕ ತರಗತಿ ನಡೆಯುತ್ತದೆ. ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಕರೆದು ಸಭೆ ನಡೆಸಿ ಹೇಳಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಡಿಗ್ರಿ ತರಗತಿಗಳನ್ನು ವಿಜ್ಞಾನ ವಿಭಾಗ ಮಾತ್ರ ಭೌತಿಕ ತರಗತಿ ನಡೆಸಲು ಹೇಳಿದ್ದೇವೆ. ಆದರೆ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಮನವಿ ಬರುತ್ತಿದೆ. ಹೀಗಾಗಿ ಮತ್ತೆ ವಿವಿ ಆಡಳಿತದ ಜೊತೆ ಮಾತುಕತೆ ನಡೆಸಿ ಅಂತಿಮ ಪದವಿ ಆರಂಭಿಸಲು ಚಿಂತನೆ ನಡೆಸುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಯುವಕನಿಗೆ ನಿಫಾ ವೈರಸ್ ಲಕ್ಷಣ ಪತ್ತೆ ಕಾರವಾರ ಮೂಲದ ಯುವಕನಿಗೆ ನಿಫಾ ವೈರಸ್ ಲಕ್ಷಣ ಪತ್ತೆಯಾಗಿದ್ದು, ಸ್ಯಾಂಪಲ್ಸ್ ಪಡೆದು ಪರೀಕ್ಷೆಗೆ ಬೆಂಗಳೂರಿನ ಲ್ಯಾಬ್ಗೆ ಕಳುಹಿಸಲಾಗಿದೆ. ಸ್ಯಾಂಪಲ್ಸ್ ಕಳುಹಿಸಿರುವ ಜಿಲ್ಲಾ ಆರೋಗ್ಯ ಇಲಾಖೆ ವರದಿಗಾಗಿ ಕಾಯುತ್ತಿದೆ. ಗೋವಾದ ಲ್ಯಾಬ್ನಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವಕನಿಗೆ ಜ್ವರ ಸೇರಿದಂತೆ ಕೆಲ ಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ತನಗೆ ನಿಫಾದ ಆತಂಕವಿದೆ ಅಂತ ಹೇಳಿದ್ದ ಯುವಕ, ಟೆಸ್ಟ್ ಮಾಡಲು ಮನವಿ ಮಾಡಿದ್ದ.

ಇದನ್ನೂ ಓದಿ

ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಯುವಕನಿಗೆ ನಿಫಾ ಲಕ್ಷಣ! ವರದಿಗೆ ಕಾಯುತ್ತಿರುವ ಆರೋಗ್ಯ ಇಲಾಖೆ

ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಬೇಕಾಗಿದೆ, ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ: ಶಾಸಕ ಸಿ.ಟಿ. ರವಿ

(permission granted to school and college reopen in Dakshina Kannada)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada