ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಬೇಕಾಗಿದೆ, ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ: ಶಾಸಕ ಸಿ.ಟಿ. ರವಿ

ಬೆಂಗಳೂರು: ರಾಜ್ಯ ವಿಧಾನಮಂಡಲದ 2ನೆಯ ದಿನದ ಕಾರ್ಯಕಲಾಪ ಆರಂಭವಾಗಿದ್ದು, ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಮಾತನಾಡಿದ್ದಾರೆ. ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಬೇಕಾಗಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ವಿಷಾದದ ದನಿಯಲ್ಲಿ ಹೇಳಿದ್ದಾರೆ. ಚಿನ್ನವನ್ನು ಒತ್ತೆಯಾಗಿ ಇಟ್ಟವರು ಯಾರೆಂದು ಪ್ರಶ್ನೆ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಸಾಲ ಪಡೆಯುವುದಕ್ಕೆ ವಿದೇಶಗಳಿಗೆ ಹೋಗುತ್ತಿದ್ದರು. ಈಗ ಹೋರಾಟ ಮಾಡುತ್ತಿದ್ದವರು ಈ ಕೆಲಸ ಮಾಡಿದ್ದರು ಎಂದರು. ಬೆಲೆ ಏರಿಕೆ ವಿರುದ್ಧ […]

ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಬೇಕಾಗಿದೆ, ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ: ಶಾಸಕ ಸಿ.ಟಿ. ರವಿ
ಸಿ.ಟಿ. ರವಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 14, 2021 | 11:40 AM

ಬೆಂಗಳೂರು: ರಾಜ್ಯ ವಿಧಾನಮಂಡಲದ 2ನೆಯ ದಿನದ ಕಾರ್ಯಕಲಾಪ ಆರಂಭವಾಗಿದ್ದು, ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಮಾತನಾಡಿದ್ದಾರೆ. ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಬೇಕಾಗಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ವಿಷಾದದ ದನಿಯಲ್ಲಿ ಹೇಳಿದ್ದಾರೆ.

ಚಿನ್ನವನ್ನು ಒತ್ತೆಯಾಗಿ ಇಟ್ಟವರು ಯಾರೆಂದು ಪ್ರಶ್ನೆ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಸಾಲ ಪಡೆಯುವುದಕ್ಕೆ ವಿದೇಶಗಳಿಗೆ ಹೋಗುತ್ತಿದ್ದರು. ಈಗ ಹೋರಾಟ ಮಾಡುತ್ತಿದ್ದವರು ಈ ಕೆಲಸ ಮಾಡಿದ್ದರು ಎಂದರು.

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಟಿ ರವಿ ಕಾಂಗ್ರೆಸ್‌ನವರಿಗೆ ಪ್ರತಿಭಟನೆ ಮಾಡುವ ನೈತಿಕತೆ ಇಲ್ಲ. ಕಾಂಗ್ರೆಸ್‌ನವರು ದಿನಾ ಎತ್ತಿನ ಗಾಡಿಯಲ್ಲಿ ಬರ್ತಾರೋ, ಒಂದು ದಿನ ಶೋ ಕೊಡಲು ಮಾತ್ರ ಬರುತ್ತಾರಾ? ಬೆಲೆ ಏರಿಕೆ ನಮ್ಮ ದೇಶದಲ್ಲಿ ಮಾತ್ರ ಆಗುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಎಂದು ಸಮಜಾಯಿಷಿ ಕೊಟ್ಟರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ತಾತ್ಕಾಲಿಕವೆಂದು ಬಣ್ಣಿಸಿದ ಸಿ.ಟಿ. ರವಿ ಸಂಕಷ್ಟದ ಕಾರಣದಿಂದಾಗಿ ಈಗ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ನಿಗದಿತ ಸಮಯಕ್ಕೆ ಮಾತ್ರ ಆಗಿರುತ್ತದೆ ಎಂದು ಸದಾಶಯ ವ್ಯಕ್ತಪಡಿಸಿದರು.

ನಮ್ಮಲ್ಲಿ ದಾಖಲೆ ಪ್ರಮಾಣದಲ್ಲಿ ವಿದೇಶಿ ವಿನಿಮಯ ಇದೆ. ದೇಶದ ಭವಿಷ್ಯದ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್‌ನವರಿಗೆ ಮಾತ್ರ ಭವಿಷ್ಯದ ಬಗ್ಗೆ ಆತಂಕವಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಛೇಡಿಸಿದರು.

Karnataka Assembly Session | ವಿಧಾನಸಭೆ​ ಕಲಾಪ ನೇರ ಪ್ರಸಾರ | TV9 Kannada Live

ಇದನ್ನೂ ಓದಿ: ವಿಧಾನಸೌಧ ಎದುರು ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್​ ಶಾಸಕರು! ಏನಾಯ್ತು ಅಲ್ಲಿ?

ಇದನ್ನೂ ಓದಿ: ಕಾಂಗ್ರೆಸ್​ನವರು ಯುಪಿಎ ಸರ್ಕಾರ ಇದ್ದಾಗ ಪ್ರತಿಭಟನೆ ಮಾಡಬೇಕಿತ್ತು; ಸದನದಲ್ಲೇ ತಕ್ಕ ಉತ್ತರ ನೀಡುವೆ – ಸಿಎಂ ಬೊಮ್ಮಾಯಿ (price hike in india due to congress wrongdoings says bjp mla ct ravi in karnataka assembly)

Published On - 11:37 am, Tue, 14 September 21