PM Modi Mangalore Visit: ಇಂದು ಮಂಗಳೂರಿಗೆ ನರೇಂದ್ರ ಮೋದಿ: 3,800 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 02, 2022 | 12:09 PM

ಮಂಗಳೂರು ನಗರದಾದ್ಯಂತ ಪೊಲೀಸ್ ಸರ್ಪಗಾವಲು ವಹಿಸಲಾಗಿದೆ. ಎಸ್​ಪಿಜಿ ಅಧಿಕಾರಿಗಳಿಂದ ವೇದಿಕೆಯ ಭದ್ರತೆ ಪರಿಶೀಲನೆ ಮಾಡಿದ್ದು, ಕಾರ್ಯಕ್ರಮದ ವೇದಿಕೆ ಸುತ್ತ ತಡೆ ಬೇಲಿ ಹಾಕಿ ಭದ್ರತೆ ಹಾಕಲಾಗಿದೆ.

PM Modi Mangalore Visit: ಇಂದು ಮಂಗಳೂರಿಗೆ ನರೇಂದ್ರ ಮೋದಿ: 3,800 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ
Follow us on

ಮಂಗಳೂರು: ಇಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, 3,800 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಕೃಷಿ ಸಮ್ಮಾನ್, ವಿದ್ಯಾನಿಧಿ ಸೇರಿ ಹಲವು ಫಲಾನುಭವಿಗಳು ಭಾಗಿಯಾಗಲಿದ್ದಾರೆ. ಮತ್ತು ಭಾರತ ನಿರ್ಮಿಸಿದ ಐಎನ್​ಎಸ್ ವಿಕ್ರಾಂತ್​​​ ಯುದ್ಧ ಹಡಗನ್ನು ನಾಡಿಗೆ ಸರ್ಮಪಿಸಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಜನ ಆಗಮಿಸುತ್ತಿದ್ದು, ಜನರನ್ನು ಕರೆತರಲು 2 ಸಾವಿರ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ್ ಜೋಶಿ, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಸಚಿವರಾದ ಸರ್ಬಾನಂದ್ ಸೊನೊವಾಲ್, ಕೇಂದ್ರ ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೊ ನಾಯಕ್, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶಂತನು ಠಾಕೂರ್ ಸೇರಿದಂತೆ ರಾಜ್ಯದ ಸಚಿವರು ಸಹ ಭಾಗವಹಿಸಲಿದ್ದು ಕಾರ್ಯಕ್ರಮವನ್ನು ಡಿಡಿ ನ್ಯೂಸ್‍ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.


ಯೋಜನೆಗಳ ಮಾಹಿತಿ:

1. ಕಂಟೇನರ್‍ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ • 2,200 ಜನರಿಗೆ ಉದ್ಯೋಗಾವಕಾಶಗಳು • ಸಾಮಥ್ರ್ಯ ಹೆಚ್ಚಳ ಹಾಗೂ ಕಾರ್ಯನಿರ್ವಹಣಾ ಸಮಯದಲ್ಲಿ 35% ಉಳಿತಾಯ • ಬಂದರು ಕಡಲತೀರ ಹಾಗೂ ಪರಿಸರ ವ್ಯವಸ್ಥೆಗಳಿಗೆ ಪರಿಸರ ಸಂರಕ್ಷಣೆಯ ಲಾಭಗಳು • ಯೋಜನೆ ವೆಚ್ಚ: ರೂ.281 ಕೋಟಿ • 6.02 ಎಂಟಿಪಿಎರಷ್ಟು ಹೆಚ್ಚುವರಿ ಸಾಮರ್ಥ್ಯ

2. ಬಿಎಸ್ ಗಿI ಉನ್ನತೀಕರಣ ಯೋಜನೆ • ಬಿಎಸ್ ಗಿI ಶ್ರೇಣಿ ಇಂಧನಗಳ ಉತ್ಪಾದನೆ • ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ • ಯೋಜನೆ ವೆಚ್ಚ: ರೂ.1,829 ಕೋಟಿ

3. ಸಮುದ್ರ ನೀರಿನ ನಿರ್ಲವಣೀಕರಣ ಘಟಕ • ಶುದ್ಧ ನೀರಿನ ಸಂರಕ್ಷಣೆ • 30 ಎಂಎಲ್‍ಡಿ ನಿರ್ಲವಣೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ • ಯೋಜನೆ ವೆಚ್ಚ: ರೂ.677 ಕೋಟಿ

ಶಿಲಾನ್ಯಾಸ ಯೋಜನೆಗಳ ಮಾಹಿತಿ:

4. ಎನ್‍ಎಂಪಿಯಲ್ಲಿ ಸಮಗ್ರ ಎಲ್‍ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ ಸ್ಥಾಪನೆ • 2,200 ಜನರಿಗೆ ಉದ್ಯೋಗಾವಕಾಶಗಳು • ದ್ರವರೂಪದ ಸರಕುಗಳ ಅನ್‍ಲೋಡಿಂಗ್ ಸಮಯದಲ್ಲಿ ಉಳಿತಾಯ • ಎಲ್‍ಪಿಜಿಯ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ • ಪಿಎಂ ಉಜ್ವಲಾ ಯೋಜನೆಗೆ ನೇರ ಬೆಂಬಲ • ಯೋಜನೆ ವೆಚ್ಚ: ರೂ.500 ಕೋಟಿ • ಸಾಮರ್ಥ್ಯ ಹೆಚ್ಚಳ: 200 ಎಂಟಿಪಿಎ

5. ಎನ್‍ಎಂಪಿಯಲ್ಲಿ ಶೇಖರಣಾ ಟ್ಯಾಂಕ್‍ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ • ಖಾದ್ಯ ತೈಲದ ದೋಣಿಗಳ ಓಡಾಟದಲ್ಲಿ ಸುಧಾರಣೆ • ಖಾದ್ಯ ತೈಲದ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ • ದರ-ಸಾಮರ್ಥ್ಯ ಸುಧಾರಣೆ • 700 ಜನರಿಗೆ ಉದ್ಯೋಗಾವಕಾಶಗಳು • ಯೋಜನೆ ವೆಚ್ಚ: ರೂ.100 ಕೋಟಿ • ಎಂಟಿಪಿಎ ಸಾಮರ್ಥ್ಯ: 0.30

6. ಎನ್‍ಎಂಪಿಯಲ್ಲಿ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ • ಬಿಟುಮೆನ್ ಸಾಗಣೆಯಲ್ಲಿ ಸುಧಾರಣೆ • ಬಿಟುಮೆನ್‍ನ ಒಟ್ಟಾರೆ ದರದಲ್ಲಿ ಇಳಿಕೆ • ಪಿಎಂ ಗತಿ ಶಕ್ತಿ ಯೋಜನೆಗೆ ನೇರ ಬೆಂಬಲ • 275 ಜನರಿಗೆ ಉದ್ಯೋಗಾವಕಾಶಗಳು • ಯೋಜನೆ ವೆಚ್ಚ: ರೂ.100 ಕೋಟಿ • ಎಂಟಿಪಿಎ ಸಾಮರ್ಥ್ಯ: 40,000 ಎಂಟಿ/ ಬಿಟುಮೆನ್ ದ್ರವರೂಪದ ಸರಕು

7. ಎನ್‍ಎಂಪಿಯಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್‍ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ • ಖಾದ್ಯ ತೈಲ ಮತ್ತು ಬಿಟುಮೆನ್‍ನ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ • ದರ-ಸಾಮರ್ಥ್ಯ ಸುಧಾರಣೆ • 275 ಜನರಿಗೆ ಉದ್ಯೋಗಾವಕಾಶಗಳು • ಯೋಜನೆ ವೆಚ್ಚ: ರೂ.100 ಕೋಟಿ • ಎಂಟಿಪಿಎ ಸಾಮರ್ಥ್ಯ: ಪ್ರತಿ ಎಕರೆಗೆ ವಾರ್ಷಿಕ 8,000 ಟನ್‍ಗಳ ಎಂಜಿಟಿ

ಭೂಮಿ ಪೂಜೆ

8. ಕುಲೈನಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ • 8,500 ಜನರಿಗೆ ಉದ್ಯೋಗಾವಕಾಶಗಳು ಕರಾವಳಿ ಮೀನುಗಾರಿಕಾ ಸಮುದಾಯದವರಿಗೆ ಸುಮಾರು ರೂ.192 ಕೋಟಿ ವಾರ್ಷಿಕ ಆದಾಯ • ಯೋಜನೆ ವೆಚ್ಚ: ರೂ.196.51 ಕೋಟಿ.

ಎಲ್ಲೆಡೆ ಪೊಲೀಸ್​ ಸರ್ಪಗಾವಲು:

ಮಂಗಳೂರು ನಗರದಾದ್ಯಂತ ಪೊಲೀಸ್ ಸರ್ಪಗಾವಲು ವಹಿಸಲಾಗಿದೆ. ಎಸ್​ಪಿಜಿ ಅಧಿಕಾರಿಗಳಿಂದ ವೇದಿಕೆಯ ಭದ್ರತೆ ಪರಿಶೀಲನೆ ಮಾಡಿದ್ದು, ಕಾರ್ಯಕ್ರಮದ ವೇದಿಕೆ ಸುತ್ತ ತಡೆ ಬೇಲಿ ಹಾಕಿ ಭದ್ರತೆ ಹಾಕಲಾಗಿದೆ. ಭದ್ರತೆಗೆ ಹೊರ ಜಿಲ್ಲೆಗಳಿಂದಲೂ ಪೊಲೀಸರ ನಿಯೋಜನೆ ಮಾಡಿದ್ದು, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಮಂಗಳೂರಿಗೆ ಆಗಮಿಸಿದೆ. ಮೋದಿ ಸಮಾವೇಶದ ಮೈದಾನ ಪರಿಶೀಲಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಪ್ರಧಾನಿಯವರು ಬಂದು ವಾಪಾಸ್ ಹೋಗುವವರೆಗೆ ಎಲ್ಲಾ ‌ಭದ್ರತೆ ಮಾಡಲಾಗಿದೆ. ಡಿಜಿಪಿ ಮತ್ತು ಎಡಿಜಿಪಿಯವರ ಸಂಪೂರ್ಣ ಭದ್ರತೆ ನೋಡಿಕೊಳ್ತಾರೆ.

ಮಂಗಳೂರು ‌ಕಮಿಷನರ್ ನೇತೃತ್ವದಲ್ಲಿ ಸಂಪೂರ್ಣ ಭದ್ರತೆ ಮಾಡಿಕೊಳ್ಳಲಾಗಿದೆ. 100 ಜನ ಉನ್ನತ ಪೊಲೀಸ್ ಅಧಿಕಾರಿಗಳು ಇಲ್ಲಿ ಇರ್ತಾರೆ. ಸುಮಾರು 2000 ಸಾವಿರ ಸಿವಿಲ್ ಪೊಲೀಸರು ಭದ್ರತೆಗೆ ನೇಮಿಸಲಾಗಿದೆ. ಕೆಎಸ್ಸಾರ್ಪಿ, ಸಿಎಆರ್, ಎಎನ್​ಎಫ್, ಆರ್​ಎಎಫ್​ಕೋಸ್ಟಲ್ ಸೆಕ್ಯೂರಿಟಿ, ಐಎಸ್​ಡಿ ಹಾಗೂ ಗರುಡ ಪಡೆ ಇರುತ್ತೆ. ಒಟ್ಟಾರೆ ಮೂರು ಸಾವಿರ ಪೊಲೀಸ್ ಭದ್ರತೆ ಇರಲಿದೆ. ಸಂಸದ ನಳಿನ್ ಕುಮಾರ್, ಉಸ್ತುವಾರಿ ಸುನೀಲ್ ಉಸ್ತುವಾರಿ ನೋಡ್ತಾ ಇದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:28 am, Fri, 2 September 22