ಮಂಗಳೂರು: ಕ್ರೈಂ ಡ್ಯೂಟಿಗೆ ಹೋಗಿದ್ದ ಹೆಡ್ ಕಾನ್ಸ್‌ಟೇಬಲ್​ ಹೃದಯಾಘಾತಕ್ಕೆ ಬಲಿ

| Updated By: ಸಾಧು ಶ್ರೀನಾಥ್​

Updated on: Jan 05, 2022 | 1:44 PM

ಕ್ರಿಮಿನಲ್​ ಪ್ರಕರಣವೊಂದರ ಸಂಬಂಧ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಗೆ ಹೋಗಿದ್ದಾಗ ಹೆಡ್ ಕಾನ್ಸ್‌ಟೇಬಲ್ ಸಂತೋಷ್​ಗೆ ಹೃದಯಾಘಾತವಾಗಿದೆ. ಸೊರಬ ಮೂಲದ ಸಂತೋಷ್ ಮಂಗಳೂರಿ‌ಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಮಂಗಳೂರು: ಕ್ರೈಂ ಡ್ಯೂಟಿಗೆ ಹೋಗಿದ್ದ ಹೆಡ್ ಕಾನ್ಸ್‌ಟೇಬಲ್​ ಹೃದಯಾಘಾತಕ್ಕೆ ಬಲಿ
ಸಂತೋಷ್ (36)
Follow us on

ದಕ್ಷಿಣ ಕನ್ನಡ: ಕ್ರೈಂ ಡ್ಯೂಟಿಗೆ ಹೋಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ (Head constable) ಸಂತೋಷ್(36) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕ್ರಿಮಿನಲ್​ ಪ್ರಕರಣವೊಂದರ ಸಂಬಂಧ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಗೆ ಹೋಗಿದ್ದಾಗ ಹೆಡ್ ಕಾನ್ಸ್‌ಟೇಬಲ್ ಸಂತೋಷ್​ಗೆ ಹೃದಯಾಘಾತವಾಗಿದೆ (Heart attack). ಸೊರಬ ಮೂಲದ ಸಂತೋಷ್ ಮಂಗಳೂರಿ‌ಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ತುಮಕೂರು: ಮಹಿಳೆ ಆತ್ಮಹತ್ಯೆಗೆ ಶರಣು
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ಅನಾರೋಗ್ಯದ ಕಾರಣ ಮನನೊಂದು ಮಹಿಳೆ ತ್ರೈಜತಿ(40) ನೇಣಿಗೆ ಶರಣಾಗಿದ್ದಾರೆ. ಕೆಲ ವರ್ಷಗಳಿಂದ ಯಾವ ಆಸ್ಪತ್ರೆಯಲ್ಲೂ ಗುಣಮುಖವಾಗದ ಕಾರಣ ಮನೆಯ ರೂಮ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತುಮಕೂರು: ದ್ವಿತೀಯ ಪಿಯು ವಿದ್ಯಾರ್ಥಿನಿ ನೇಣಿಗೆ ಶರಣು
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿ ಹೇಮಾವತಿ(17) ನೇಣಿಗೆ ಶರಣಾಗಿದ್ದಾಳೆ. ಪೋಷಕರು ಮಲಗಿದ ಬಳಿಕ ಮನೆಯ ರೂಮ್​ನಲ್ಲಿ ನೇಣಿಗೆ ಶರಣಾಗಿದ್ದಾಳೆ. ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮಾಡುತ್ತಿದ್ದ ಹೇಮಾವತಿ, ಬೆಳಿಗ್ಗೆ 8 ಗಂಟೆಯಾದರೂ ಹೊರಬಾರದ ಕಾರಣ ಪೋಷಕರು ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಅನಾಥ ಮಕ್ಕಳ ತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್​ ಹೃದಯಾಘಾತದಿಂದ ನಿಧನ

ಚಿಕ್ಕಬಳ್ಳಾಪುರ: ಕೊರೆಯುವ ಚಳಿಗೆ ಹೃದಯಾಘಾತ; ತೊಂಡೆಬಾವಿ ಯೋಧ ಹುತಾತ್ಮ

Published On - 12:47 pm, Wed, 5 January 22